-
ಚಿತ್ರದ ಶೂಟಿಂಗ್‌ಗಾಗಿ ನೈಜ್ಯ ಮನೆಯನ್ನೆ ಕಟ್ಟಿ ಕುಟುಂಬಕ್ಕೆ ಹಸ್ತಾಂತರಿಸಿದ ಚಿತ್ರತಂಡ
- ತಿಥಿ ಸಿನಿಮಾದ ಬಳಿಕ ಅಪ್ಪಟ ಹಳ್ಳಿ ಪ್ರತಿಭೆಗಳನ್ನೇ ಇಟ್ಟುಕೊಂಡು ಮಾಡಿರುವ ಚಿತ್ರ
‘ತರ್‍ಲೆ ವಿಲೇಜ್’ ಖ್ಯಾತಿಯ ಕೆ.ಎಂ.ರಘು ನಿರ್ದೇಶನದ ‘ದೊಡ್ಡಟ್ಟಿ ಬೋರೇಗೌಡ’ ಚಿತ್ರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.
ಇತ್ತಿಚ್ಚೇಗೆ ಚಿತ್ರತಂಡವು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ‘ದೊಡ್ಡಟ್ಟಿ ಬೋರೇಗೌಡ’ ಚಿತ್ರಕ್ಕೆ ಬೆಂಗಳೂರು ಅಂತರಾಷ್ಟೀಯ ಚಲನಚಿತ್ರೋತ್ಸವ ಪ್ರಶಸ್ತಿ ಬಂದಿದೆ ಎಂಬುದು ಚಿತ್ರದ ಕಥೆ, ನಿರ್ದೇಶನ ಹಾಗೂ ಸಂದೇಶ ಚೆನ್ನಾಗಿದೆ ಎಂಬುದನ್ನು ತಿಳಿಸುತ್ತದೆ. ಈ ಚಿತ್ರವು ಫೆ.17ರಂದು ಬಿಡುಗಡೆಯಾಗುತ್ತಿದ್ದು, ಯಶಸ್ವಿಯಾಗಿ ಪ್ರದರ್ಶನ ಕಾಣಲಿ ಎಂದು ಹಾರೈಸಿದರು.
ತಿಥಿ ಸಿನಿಮಾದ ಬಳಿಕ ಅಪ್ಪಟ ಹಳ್ಳಿ ಪ್ರತಿಭೆಗಳನ್ನೇ ಇಟ್ಟುಕೊಂಡು ಮಾಡಿರುವ ಚಿತ್ರವೂ ಇದಾಗಿದ್ದು, ಚಿತ್ರದ 2 ಹಾಡುಗಳಿಗೆ ಗಾಯಕರಾದ ಮೆಹಬೂಬ್ ಸಾಬ್ ಹಾಗೂ ಮಾದೇವಾ’ ಖ್ಯಾತಿಯ ಗಾಯಕಿ ಅನನ್ಯಭಟ್ ಧ್ವನಿಯಾಗಿದ್ದಾರೆ.

ಹಲವು ವಿಶೇಷತೆಗಳನ್ನು ಒಳಗೊಂಡಿರುವ ಈ ಚಿತ್ರವು ಪ್ರೇಕ್ಷಕರಿಗೆ ಹೊಸ ಅನುಭವವನ್ನು ಉಣಬಡಿಸಲು ಸಜ್ಜಾಗಿದೆ. ಈ ಚಿತ್ರಕ್ಕೆ 2021ನೇ ಸಾಲಿನ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತೋತ್ಸವದಲ್ಲಿ ಕನ್ನಡದ ಮೊದಲ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಕೂಡ ದೊರೆತಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ.
ಇದನ್ನೂ ಓದಿ : ಕೆಡವೋ ಸೆಟ್ ಹಾಕದೆ ಒಂದು ಕುಟುಂಬಕ್ಕೆ ನೆರಳಾಗೋ ಸೆಟ್ : ದೊಡ್ಡಹಟ್ಟಿ ಬೋರೇಗೌಡ
ಈ ಚಿತ್ರದಲ್ಲಿ ಅಮಾಯಕ ಬೋರೇಗೌಡ ಒಂದು ಮನೆ ಕಟ್ಟಲು ಎಷ್ಟೆಲ್ಲಾ ಅಲೆದಾಡುತ್ತಾನೆ, ಪರಿಪಾಟಲು ಅನುಭವಿಸುತ್ತಾನೆ ಎಂಬುದನ್ನು ವಾಸ್ತವಿಕ ಕಥೆಯೊಂದಿಗೆ ಹೇಳಲಾಗಿದೆ. ಚಿತ್ರೀಕರಣಕ್ಕಾಗಿ ಮನೆಯ ಸೆಟ್ ಒಂದನ್ನು ಹಾಕಬೇಕಾಗಿತ್ತು, ಆದರೆ ಚಿತ್ರತಂಡ ಸೆಟ್ ಹಾಕಿ ಕೆಡವುವುದು ಬೇಡ ಎಂದು ಚಿಂತಿಸಿದ ಚಿತ್ರ ತಂಡ, ಒಂದು ಕುಟುಂಬಕ್ಕೆ ನೆರಳಾಗುವು ಹಾಗೇ ನೈಜ ಮನೆಯಲ್ಲಿ ಕಟ್ಟಿ ಕೊಟ್ಟಿರುವುದು ಚಿತ್ರತಂಡದ ಉದಾರತೆ ಸಾಕ್ಷಿಯಾಗಿದೆ. ಮೈಸೂರಿನಿಂದ ಸುಮಾರು 35 ಕಿಲೋ ಮೀಟರ್ ದೂರದಲ್ಲಿರುವ ಗದ್ದಿಗೆ ಗ್ರಾಮದಲ್ಲಿ ಕೃಷ್ಣ ಎಂಬುವವರ ಜಾಗದಲ್ಲಿ ವಾಸ್ತವ ಮನೆ ನಿರ್ಮಿಸಿಕೊಟ್ಟು, ಅಲ್ಲಿಯೇ ಶೂಟಿಂಗ್ ಮಾಡಲಾಗಿದೆ. ಆದ್ದರಿಂದ ಚಿತ್ರಕ್ಕೆ ಬೇಕಾದ ಎಲ್ಲಾ ಸನ್ನವೇಶಗಳು ಸಹಜವಾಗಿಯೇ ಸಹಜವಾಗಿ ಮೂಡಿ ಬಂದಿವೆ.
ರಾಜರಾಜೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರಕ್ಕೆ ಕೆ.ಎಂ.ರಘು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕೆ.ಎಂ.ಲೋಕೇಶ್, ಶಶಿಕುಮಾರ್ ಬಿ ಸಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ಸಂಗೀತ ನೀಡಿದ್ದು, ವೀನಸ್ ನಾಗರಾಜ್‌ಮೂರ್ತಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪ್ರಮುಖ ತಾರಾಂಗಣದಲ್ಲಿ ಶಿವಣ್ಣ ಬೀರುತಾಂಡಿ, ಸಂಪತ್, ಲಾವಣ್ಯ, ಅಭಿ, ಕಲಾರತಿ ಮಹದೇವ್ ಹೀಗೆ ಹೊಸ ಪ್ರತಿಭೆಗಳ ದಂಡೇ ಇದೆ.




