Saturday, May 18, 2024

ಪ್ರಾಯೋಗಿಕ ಆವೃತ್ತಿ

ಜಿಲ್ಲಾ ಉಸ್ತುವಾರಿ ಸ್ಥಾನ ಬಿಟ್ಟ ಅಶೋಕ್ ಅವರದ್ದು ಪಲಾಯನವೇ? ಉಚ್ಚಾಟನೆಯೇ? : ಕಾಂಗ್ರೆಸ್ ಪ್ರಶ್ನೆ

ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ತೊರೆದ ಕಂದಾಯ ಸಚಿವ ಆರ್ ಅಶೋಕ್ ನಡೆಯನ್ನು ವಿಪಕ್ಷ ಕಾಂಗ್ರೆಸ್ ಟೀಕಿಸಿದೆ. ಈ ವಿಚಾರವಾಗಿ ಟ್ವಿಟ್ ಮಾಡಿರುವ ಕಾಂಗ್ರೆಸ್, ಅಶೋಕರದ್ದು ಪಲಾಯನವಾದ ಎಂದು ಲೇವಡಿ ಮಾಡಿದೆ.

ಸಚಿವ ಅಶೋಕ್ ಅವರೇ, ಮಂಡ್ಯ ಉಸ್ತುವಾರಿಯಿಂದ ಪಲಾಯನ ಮಾಡಿದ್ದು ಏಕೆ? ಇದು ಪಲಾಯನವೇ ಅಥವಾ ಉಚ್ಚಾಟನೆಯೇ?  ಒಂದು ಜಿಲ್ಲೆಯ ಉಸ್ತುವಾರಿಯನ್ನು ನಿಭಾಯಿಸಲಾಗದ ಅಸಾಮರ್ಥ್ಯವೇ?  ಅಥವಾ ಪಕ್ಷದೊಳಗಿನ ಶತ್ರುಗಳ ಎದುರು ಸೋಲೊಪ್ಪಿಕೊಂಡಿದ್ದೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಜೊತೆಗೆ ಅಶೋಕ್ ನಿರ್ಧಾರದ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್, “ಹೀಗೆ ಸೋತು ಓಡಿಹೋಗುವವರನ್ನು ಸಾಮ್ರಾಟ ಎನ್ನುವುದಿಲ್ಲ ಉತ್ತರ ಕುಮಾರ ಎನ್ನುತ್ತಾರೆ. ಬಿಜೆಪಿ ಕಿತ್ತಾಟದ ಕಿಡಿ ಹೊತ್ತಿ ಕೆಂಡವಾಗಿ, ಕೆಂಡ ಜ್ವಾಲೆಯಾಗಿದೆ. ಬಿಜೆಪಿ ಭಸ್ಮವಾಗುವುದು ನಿಶ್ಚಿತ” ಎಂದು ಲೇವಡಿ ಮಾಡಿದೆ.

ಗೋ ಬ್ಯಾಕ್‌’ ಆಕ್ರೋಶಕ್ಕೆ ಮಂಡ್ಯ ಉಸ್ತುವಾರಿಯಿಂದ
ಅಶೋಕ್ ಪಲಾಯನ ಮಾಡುವ ಮೂಲಕ ಬಿಜೆಪಿ
ಒಳಜಗಳ ಬೀದಿಗೆ ಬಿದ್ದಿದೆ. ಬಿಜೆಪಿಯ ಗುಂಪುಗಾರಿಕೆ
ರಾಜ್ಯವನ್ನು ನುಂಗುತ್ತಿದೆ, ಯಾರ “ಸಂತೋಷಕ್ಕಾಗಿ ಇದೆಲ್ಲ
ಬಿಜೆಪಿಯವರೇ ಎಂದು ಆರ್‌ಎಸ್‌ಎಸ್ ಮುಖಂಡ, ಬಿಜೆಪಿ
ವರಿಷ್ಠ ಬಿ ಎಲ್ ಸಂತೋಷ್ ಅವರನ್ನೂ ಕಾಂಗ್ರೆಸ್ ಪ್ರಶ್ನಿಸಿದೆ.

ಬಿಜೆಪಿ ವಿರುದ್ಧ ಟ್ವಿಟಾಸ್ತ್ರ ಪ್ರಯೋಗಿಸಿರುವ ಕೈ ಪಡೆ, ಬಿಜೆಪಿ ಕಾರ್ಯಕರ್ತರೇ ಆ ಪಕ್ಷದ ರಾಜ್ಯಾಧ್ಯಕ್ಷರ ಕಾರು ಅಲ್ಲಾಡಿಸಿ ಓಡಿಸಿದ್ದರು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆಗೆ ದಾಳಿ ಮಾಡಿದ್ದರು, ಆರ್ ಅಶೋಕ್ ಅವರಿಗೆ ಗೋಬ್ಯಾಕ್ ಎಂದರು. ಈಗ ಕಾರ್ಯಕರ್ತರೇ, ಬಿಜೆಪಿ ಶಾಸಕ ಸಂಜೀವ್ ಮಠಂದೂರಿಗೆ ಫೇರಾವ್ ಹಾಕಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಜ್ವಾಲೆ ಧಗಧಗಿಸುತ್ತಿದೆ” ಎಂದು ಕಾಂಗ್ರೆಸ್ ಕುಟುಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!