Saturday, May 18, 2024

ಪ್ರಾಯೋಗಿಕ ಆವೃತ್ತಿ

ಕೆಡವೋ ಸೆಟ್ ಹಾಕದೆ ಒಂದು ಕುಟುಂಬಕ್ಕೆ ನೆರಳಾಗೋ ಸೆಟ್ : ದೊಡ್ಡಹಟ್ಟಿ ಬೋರೇಗೌಡ


  • ರಾಜ್ಯಪಾಲರಿಂದ ಪ್ರಶಸ್ತಿ ಪಡೆದ ಚಿತ್ರ  ದೊಡ್ಡಟ್ಟಿ ಬೋರೇಗೌಡ

  • ಒಂದು ಕುಟುಂಬಕ್ಕೆ ನೆರಳಾಗೋ ಸೆಟ್ ಹಾಕಿದೆ ದೊಡ್ಡಟ್ಟಿ ಬೋರೇಗೌಡ

    ಮೈಸೂರಿನ ಗದ್ದಿಗೆ ಗ್ರಾಮದಲ್ಲಿ ನೈಜವಾದ ಮನೆ.


ಸಿನಿಮಾ ಎಂದಾಕ್ಷಣ ಎಷ್ಟೋ ಸೆಟ್ಗಳನ್ನ ಹಾಕಿ ಕೆಡವುದು ಸರ್ವೇ ಸಾಮಾನ್ಯ

ಆದರೆ ದೊಡ್ಡಹಟ್ಟಿ ಬೋರೇಗೌಡ ಚಿತ್ರದಲ್ಲಿ ಚಿತ್ರತಂಡ ಕೆಡವೋ ಸೆಟ್ ಹಾಕದೆ ಒಂದು ಕುಟುಂಬಕ್ಕೆ ನೆರಳಾಗೋ ಸೆಟ್ ಹಾಕಿದೆ

2021ನೇ ಸಾಲಿನ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಮೊದಲ ಅತ್ಯುತ್ತಮ ಕನ್ನಡ ಚಲನಚಿತ್ರ ಎಂಬ ಪ್ರಶಸ್ತಿಯನ್ನ ಗೌರವಾನ್ವಿತ ಕರ್ನಾಟಕದ ರಾಜ್ಯಪಾಲರಿಂದ ಪಡೆದಿದೆ

ತಿಥಿ ಸಿನಿಮಾ ನಂತರ ಎಲ್ಲಾ ಗ್ರಾಮೀಣ ಪ್ರತಿಭೆಗಳನ್ನೇ ಆಯ್ಕೆ ಮಾಡಿಕೊಂಡು ಸಹಜವಾಗಿ ಚಿತ್ರವನ್ನ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಅಶ್ರಯ ಯೋಜನೆ ಮನೆಯನ್ನು ಒಬ್ಬ ಬಡ ಕುಟುಂಬದ ವ್ಯಕ್ತಿ, ಪಂಚಾಯತಿ ಇಂದ ಪಡೆದು ಮನೆ ಕಟ್ಟುವ ಸನ್ನಿವೇಶಕ್ಕೆ ಯಾವುದೇ ಸೆಟ್ ಹಾಕದೆ ಮೈಸೂರ್ ನಿಂದ ಸುಮಾರು 35km ದೂರದ ಗದ್ದಿಗೆ ಎಂಬ ಗ್ರಾಮದಲ್ಲಿ ಕೃಷ್ಣ ಎಂಬುವವರ ಜಾಗದಲ್ಲಿ ಸಹಜವಾಗಿ ಸನ್ನಿವೇಶ ಬರಬೇಕು ಎಂಬ ಕಾರಣಕ್ಕೆ ನಿಜವಾದ ಮನೆ ಕಟ್ಟಿ ಆ ಕುಟುಂಬಕ್ಕೆ ನೆರವಾಗಿದ್ದಾರೆ,

nudikarnataka.com

ಈ ಚಿತ್ರ ಇದೇ ಫೆಬ್ರವರಿ 17ಕ್ಕೆ ತೆರೆಗೆ ಬರುತ್ತಿದೆ ಇದು ಖಂಡಿತ ಜನರಿಗೆ ತಿಥಿ ಸಿನಿಮಾದಂತೆ ಇಷ್ಟ ಆಗುತ್ತೆ ಎಂಬುವುದು ಟ್ರೈಲರ್ ನೋಡಿದರೆ ಅನಿಸುತ್ತೆ. ದೊಡ್ಡಹಟ್ಟಿ ಬೋರೇಗೌಡ ಯಶಸ್ಸು ಕಾಣುತ್ತದೆ… ಶುಭಾವಾಗಲಿ…ಈ ಹೊಸ ಚಿತ್ರ ತಂಡಕ್ಕೆ ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹವಿರಲಿ.

ಈ ಚಿತ್ರ ರಾಜರಾಜೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿದೆ ಕೆ ಎಮ್ ರಘು ನಿರ್ದೇಶನ ಮಾಡಿದ್ದಾರೆ. ಕೆ.ಎಮ್.ಲೋಕೇಶ್ , ಬಿ.ಸಿ.ಶಶಿಕುಮಾರ್ ನಿರ್ಮಾಪಕರಾಗಿದ್ದಾರೆ‌

ಹರ್ಷವರ್ಧನ್ ರಾಜ್ ಸಂಗೀತ ವೀನಷ್ ನಾಗರಾಜ್ ಮೂರ್ತಿ ಛಾಯಾಗ್ರಾಹಕರು.ತಾರಬಳಗದಲ್ಲಿ ಶಿವಣ್ಣ ಬೀರುಹುಂಡಿ, ಗೀತಾ, ಸಂಪತ್, ಲಾವಣ್ಯ, ಅಭಿ, ಕಲಾರತಿಮಹದೇವ್ ಹೀಗೆ ಹೊಸ ಪ್ರತಿಭೆಗಳ ದಂಡೆ ತುಂಬಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!