Thursday, November 19, 2026

ಪ್ರಾಯೋಗಿಕ ಆವೃತ್ತಿ

ಅಚ್ಚುಕಟ್ಟು ಪ್ರದೇಶಗಳಿಗೆ ನೀರೊದಗಿಸುವ ಕಾರ್ಯಕ್ಕೆ ಶಾಸಕ ಡಿ.ಸಿ.ತಮ್ಮಣ್ಣ ಚಾಲನೆ

ವರದಿ: ಧರಣೇಶ್

ಮದ್ದೂರು ತಾಲ್ಲೂಕು ಮುಟ್ಟನಹಳ್ಳಿ ಬಳಿಯ ಸೂಳೆಕೆರೆ ದಕ್ಷಿಣ ನಾಲೆಯ ಅಕ್ವಡಕ್ಟ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಪ್ರದೇಶಗಳಿಗೆ ನಿರೋದಗಿಸಲು ಶಾಸಕ ಡಿ.ಸಿ.ತಮ್ಮಣ್ಣ ಚಾಲನೆ ನೀಡಿದರು.

ನಂತರ ಶಾಸಕ ಡಿ.ಸಿ.ತಮ್ಮಣ್ಣ ಅವರು ಮಾತನಾಡಿ, ಕಳೆದ ನಾಲ್ಕೈದು ತಿಂಗಳ ಹಿಂದೆ ಸುರಿಧ ಭಾರಿ ಮಳೆಯಿಂದ ಸೂಳೆಕೆರೆ ಕೋಡಿ ಮತ್ತು ದಕ್ಷಿಣ ನಾಲೆ ಕೊಚ್ಚಿಹೋಗಿ ಕೆರೆ ಅಪಾಯ ಮಟ್ಟದಲ್ಲಿ ಇತ್ತು. ಕೆರೆಯನ್ನು ಉಳಿಸುವ ದೃಷ್ಟಿಯಿಂದ ತಕ್ಷಣ ಸಕರ್ಾರ ಮಟ್ಟದಲ್ಲಿ ಹೋರಾಟ ನಡೆಸಿ ಸೂಳೆಕೆರೆ ಅಭಿವೃದ್ದಿಗೆ 98 ಲಕ್ಷ ಹಣ ಮಂಜೂರು ಮಾಡಿಸಿ ದಕ್ಷಿಣ ನಾಲೆಯ ಅಕ್ವಡಕ್ಟ್ ಕಾಮಗಾರಿಗೆ 48 ಲಕ್ಷ ಸೂಳೆಕೆರೆ ಕೋಡಿ ಅಭಿವೃದ್ದಿಗೆ 50 ಲಕ್ಷದಿಂದ ಕಾಮಗಾರಿ ನಡೆಯುವಂತೆ ಮಾಡಲಾಯಿತು ಎಂದರು.

nudikarnataka.com

ಈ ದಕ್ಷಿಣನಾಲೆ ಅಭಿವೃದ್ದಿ ಕಾಮಗಾರಿಯಿಂದ ಸುಮಾರು 3725 ಎಕರೆ ಅಚ್ಚುಕಟ್ಟು ಪ್ರದೇಶದ ಮುಟ್ಟನಹಳ್ಳಿ, ದೊಡ್ಡರಸಿನಕೆರೆ, ಕಾರ್ಕಹಳ್ಳಿ, ದೇವರಹಳ್ಳಿ, ಆಲಭುಜನಹಳ್ಳಿ, ಅಣ್ಣೂರು, ಕುರಿಕೆಂಪನದೊಡ್ಡಿ ಗ್ರಾಮಗಳಿಗೆ ನಿರೋದಗಿಸಿ ರೈತರ ಬೆಳೆಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು. ನಂತರ ಸೂಳೆಕೆರೆ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.

ಇದೇ ವೇಳೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಗುರುದೇವರಹಳ್ಳಿ ಅರವಿಂದ್, ಎಇಇ ಪ್ರಶಾಂತ್, ಎಇ ಅವಿನಾಶ್, ಶೀಲ, ಗ್ರಾಮದ ಮುಖಂಡರಾದ ಎಂ.ಕೆ.ವೀರಯ್ಯ, ಎಂ.ಕೆ.ಚಂದ್ರಶೇಖರ್, ಎಂ.ಸಿ.ವೀರಯ್ಯ, ಎಂ.ಸಿ.ಚಂದ್ರಶೇಖರ್, ಯತೀಶ, ಎಂ.ಡಿ.ನಾಗರಾಜು, ಪ್ರಶಾಂತ್, ಯಜಮಾನ್ ಪುಟ್ಟಸ್ವಾಮಿ, ಶಿವಲಿಂಗ, ರವಿ. ಶಿವಕುಮಾರ್, ಕಿಶೋರ್, ಪುಟ್ಟಸ್ವಾಮಿ, ಸಣ್ಣೇಗೌಡ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ