Saturday, May 18, 2024

ಪ್ರಾಯೋಗಿಕ ಆವೃತ್ತಿ

ಕೇಂದ್ರ ಬಜೆಟ್ ವಿರೋಧಿಸಿ ಕೃಷಿ ಕೂಲಿಕಾರರ ಸಂಘದ ಪ್ರತಿಭಟನೆ

ವರದಿ : ಧರಣೇಶ್

ಕೇಂದ್ರ ಸರ್ಕಾರದ ಬಜೆಟ್ ವಿರೋಧಿಸಿ ಅಖಿಲ ಭಾರತ ಕಿಶಾನ್ ಸಭಾ ಕರೆ ನೀಡಿದ್ದ ಕರಾಳ ದಿನದ ಅಂಗವಾಗಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ಮದ್ದೂರು ತಾಲ್ಲೂಕು ಭಾರತೀನಗರದಲ್ಲಿ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ಕೇಂದ್ರ ಬಜೆಟ್ನಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ 29 ಸಾವಿರ ಕೋಟಿ ಕಡಿತಗೊಳಿಸಿ ಕೂಲಿಕಾರರನ್ನು ವಂಚಿಸಿದ್ದಾರೆ. ಹಾಗೆಯೇ ಆಹಾರ ಸಬ್ಸಿಡಿಗೆ 88 ಸಾವಿರ ಕೋಟಿ, ಮಕ್ಕಳಿಗೆ ಕೊಡಬೇಕಾದ ಬಿಸಿಯೂಟ ಯೋಜನೆಯಲ್ಲಿ 8 ಸಾವಿರ ಕೋಟಿ, ರೈತರಿಗೆ ನಿವೃತ್ತಿ ವೇತನ ನೀಡುತ್ತೇವೆಂದು ಹೇಳಿ 9 ಸಾವಿರಕೋಟಿ ಕಡಿತಗೊಳಿಸಿ ರೈತರಿಗೆ, ಬಡವರಿಗೆ, ಕೂಲಿಕಾರರ ಬಾಯಿಗೆ ಮಣ್ಣುಹಾಕಿ ಕಾಪರ್ೋರೇಟ್ ಕಂಪನಿಗಳಿಗೆ, ಆಗರ್ಭ ಶ್ರೀಮಂತರಿಗೆ ಸೌಲಭ್ಯ ಕಲ್ಪಿಸುವಲ್ಲಿ ಮುಂದಾಗಿದ್ದಾರೆಂದು ಕಿಡಿಕಾಡಿದರು.

ಇದೇ ವೇಳೆ ಕೃಷಿಕೂಲಿಕಾರರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಉಪಾಧ್ಯಕ್ಷರಾದ ಬಿ.ಎಂ.ಶಿವಮಲ್ಲಯ್ಯ, ಎನ್.ಸುರೇಂದ್ರ, ಟಿ.ಸಿ.ವಸಂತ, ಸಹ ಕಾರ್ಯದರ್ಶಿಗಳಾದ ಟಿ.ಪಿ.ಅರುಣ್ ಕುಮಾರ್, ಶುಭಾವತಿ, ಡಿ.ಎಚ್.ಆನಂದ್, ಕಪನೀಗೌಡ, ರಾಮಯ್ಯ, ಆರ್.ರಾಜು ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!