Wednesday, October 23, 2024

ಪ್ರಾಯೋಗಿಕ ಆವೃತ್ತಿ

ಸಂಪನಹಳ್ಳಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಗುದ್ದಲಿ ಪೂಜೆ

ನಾಗಮಂಗಲ ತಾಲೂಕು ದೇವಲಾಪುರ ಹೋಬಳಿಯ ಸಂಪನಹಳ್ಳಿ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತಾಯ ಚಾಲನೆ ನೀಡಿದರು.

‘ಊರಿಗೊಂದು ಕೆರೆ ಅದೇ ನಮ್ಮೂರ ನಮ್ಮ ಕೆರೆ ಪೂಜ್ಯರ ಕನಸಿನ ಆಸರೆ, ಕೆರೆ ಪುನಶ್ಚೇತನ ಗೊಳಿಸುವುದೇ ನಮ್ಮೆಲ್ಲರ ಕರ್ತವ್ಯ. ಸಂಪನಹಳ್ಳಿ ಕೆರೆ ಹತ್ತು ಎಕ್ಕರೆ ಭೂ ವಿಸ್ತೀರ್ಣವಿದ್ದು ಗ್ರಾಮದಲ್ಲಿ 350ಕ್ಕೂ ಹೆಚ್ಚು ಕುಟುಂಬಕ್ಕೆ ಈ ಕೆರೆಯು ನೆರವಾಗಲಿದೆ, ಧರ್ಮಸ್ಥಳ ಯೋಜನೆ ವತಿಯಿಂದ ವತಿಯಿಂದ 14.50 ಲಕ್ಷ ರೂ. ಹಾಗೂ ಗ್ರಾಮಸ್ಥರ ಹೂಳು ಸಾಗಾಟ ವೆಚ್ಚ 14.50 ಲಕ್ಷ ರೂ. ಸೇರಿ ಒಟ್ಟು 29 ಲಕ್ಷದ ರೂ.ಗಳ ಯೋಜನೆ ಇದಾಗಿದೆ ಎಂದರು.

ಕೆರೆಯಲ್ಲಿ ಸಾವಿರಾರು ಟ್ರ್ಯಾಕ್ಟರ್ ಲೋಡು ಹೂಳು ಮಣ್ಣನ್ನು ರೈತರು ತೆಗೆದುಕೊಂಡು ಹೋಗಲು ಆಸಕ್ತಿ ತೋರಿದ್ದಾರೆ. ಈ ಕೆರೆಯಿಂದ ಸುಮಾರು 600 ಎಕರೆ, ರೈತರ ತಾಕುಗಳಿಗೆ ನೀರಾವರಿ ಸೌಲಭ್ಯ ಸಿಗುತ್ತದೆ ದೊರೆಯಲಿದೆ. ಕೆರೆ ಅಭಿವೃದ್ಧಿಯಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಸಕಲ ಜೀವರಾಶಿಗಳಿಗೆ ನೀರಿನ ಸೌಲಭ್ಯ ಸಿಗುವಂತಾಗಲಿ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕರಾದ ಚೇತನ, ಇಓ ಮೇನಕಾದೇವಿ,  ಭೀಮನಹಳ್ಳಿ ಪಂಚಾಯಿತಿ ಅಧ್ಯಕ್ಷ ಅಶ್ವಿನಿ ನಾಗೇಶ್, ಕೆರೆ ಸಮಿತಿ ಅಧ್ಯಕ್ಷ ಲೋಕೇಶ್, ಗ್ರಾಮ ಲೆಕ್ಕಾಧಿಕಾರಿ ಅಜಯ್ ಕುಮಾರ್, ತಾಲೂಕಿನ ಯೋಜನಾಧಿಕಾರಿ ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!