Friday, May 17, 2024

ಪ್ರಾಯೋಗಿಕ ಆವೃತ್ತಿ

ಒಕ್ಕಲಿಗರನ್ನು ಕೊಲೆಗಡುಕರನ್ನಾಗಿ ಚರಿತ್ರೆಯಲ್ಲಿ ದಾಖಲಿಸುವ ಹುನ್ನಾರವೇ ?

ಟಿಪ್ಪುವನ್ನು ಕೊಂದವರು ಉರಿಲಿಂಗೇಗೌಡ ಮತ್ತು ನಂಜೇಗೌಡ ಎಂದು ಬಿಜೆಪಿ ವಕ್ತಾರ ಚಕ್ರತೀರ್ಥ ಎಂಬುವವರು ಹೇಳಿದ್ದಾರೆ. ಸಚಿವ ಅಶ್ವಥ್ ನಾರಾಯಣ ಎಂಬ ಮಂತ್ರಿ ಕೂಡ ಇದನ್ನು ಪುನರುಚ್ಚರಿಸಿದ್ದಾರೆ. ಇದರ ಉದ್ದೇಶ ಒಕ್ಕಲಿಗರನ್ನು ಕೊಲೆಗಡುಕರನ್ನಾಗಿ ಚರಿತ್ರೆಯಲ್ಲಿ ದಾಖಲಿಸುವ ಹುನ್ನಾರವಾಗಿದೆ ಎಂದು ಪ್ರಗತಿಪರ ಚಿಂತಕ ಎಂ.ವಿ.ಕೃಷ್ಣ ಕಿಡಿಕಾರಿದ್ದಾರೆ.

ಒಂದು ವೇಳೆ ಟಿಪ್ಪುವನ್ನು ಕೊಂದವ ಪೂರ್ಣಯ್ಯ ಅಂತ ಯಾಕೆ ಹೇಳುವುದಿಲ್ಲ. ಹಾಗೇನಾದರೂ ಹೇಳಿದರೆ ಬ್ರಾಹ್ಮಣರೆಲ್ಲಾ ಒಗ್ಗಟ್ಟಾಗಿ ದೊಡ್ಡ ದನಿಯಲ್ಲಿ ಪ್ರತಿಭಟಿಸುತಿದ್ದರು. ಆದರೆ ದುರಂತ ಎಂದರೆ, ಒಕ್ಕಲಿಗರನ್ನು ಇಷ್ಟು ಕೀಳು ಮಟ್ಟಕ್ಕೆ ಇಳಿಸಿದರೂ ಒಕ್ಕಲಿಗರ ಸಂಘ, ಮಠಾಧೀಶರು ಸದ್ದಿಲ್ಲದೆ ಕುಳಿತಿರುವುದು. ಒಕ್ಕಲಿಗರ ನಾಯಕ ಎಂದು ಇಂದಿಗೂ ಗೌರವಿಸಲ್ಪಡುವ ಕುಮಾರಸ್ವಾಮಿಯವರು ಮತ್ತು ಅವರ ಅನುಯಾಯಿಗಳು
ದೊಡ್ಡ ಪ್ರಮಾಣದಲ್ಲಿ ದನಿ ಎತ್ತದಿರುವುದು ವಿಷಾದನೀಯ ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಈಗಲಾದರೂ ಒಕ್ಕಲಿಗರು ಎಚ್ಚೆತ್ತುಕೊಳ್ಳುವುದು ಅನಿವಾರ್ಯ ಮತ್ತು ವಿವೇಕ. ಇಲ್ಲವಾದರೆ ಚರಿತ್ರೆಯಲ್ಲಿ ಒಕ್ಕಲಿಗರನ್ನು ದುರುಳರು ಕೊಲೆಗಡುಕರು ಎಂದು ಬಿಂಬಿಸುವಲ್ಲಿ ಬ್ರಾಹ್ಮಣರು ಮತ್ತು ಅವರ ಬಿಜೆಪಿ ಪಕ್ಷ ಯಶಸ್ವಿಯಾಗುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!