Saturday, November 21, 2026

ಪ್ರಾಯೋಗಿಕ ಆವೃತ್ತಿ

ಸೌಹಾರ್ದತೆ ಮೂಡಿಸಲು ಸರ್ವಜ್ಞರ ಕೊಡುಗೆ ಅಪಾರ : ಎಲ್. ಸಂದೇಶ್

ಸಾಮಾಜಿಕ ಸುಧಾರಣೆಯಲ್ಲಿ  ಸರ್ವಜ್ಞನ  ತ್ರಿಪದಿಗಳು ಮಹತ್ವದ ಪಾತ್ರ ವಹಿಸುತ್ತದೆ, ಜಾತ್ಯತೀತ, ಮಾನವೀಯ ಮೌಲ್ಯಗಳು ಸರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುವ ವಚನಗಳನ್ನು ಸರ್ವಜ್ಞ ರಚಿಸಿದ್ದಾರೆ ಎಂದು ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್ ತಿಳಿಸಿದ್ದರು.

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಹಾಗೂ ನಗರಸಭೆ ಇವರ ಆಶ್ರಯದಲ್ಲಿ  ಆಯೋಜಿಸಲಾಗಿದ್ದ ಸಂತ ಕವಿ ಸರ್ವಜ್ಞ ಜಯಂತಿಯನ್ನು ಕಲಾಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕ ಬೇಕು ಎಂದು ಎಲ್ಲಾ ಸಂತರು, ಕವಿಗಳು ತಮ್ಮದೇ ಆದ  ಶೈಲಿಯಲ್ಲಿ ವಚನ ಕವಿತೆಗಳಲ್ಲಿ ತಿಳಿಸಿದ್ದಾರೆ. ಸರಳವಾದ ಭಾಷೆಯ ಮೂಲಕ ಎಲ್ಲಾ ಕಾಲಕ್ಕೂ ಅರ್ಥೈಸಲು ಸರ್ವಜ್ಞ ತನ್ನದೇ ಆದ ತ್ರಿಪದಿಗಳ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಮೂರು ಸಾಲಿನಲ್ಲಿ ಹಲವಾರು ಅರ್ಥಗಳನ್ನುಕೊಡುವ ಜೀವನದ ನೈತಿಕತೆಯ  ಬದುಕನ್ನು ನೋಡಬಹುದು ಎಂದು ತಿಳಿಸಿದ  ಸರ್ವಜ್ಞರು ಸರಳ ಸಜ್ಜನಿಕೆಯ ಆದರ್ಶ ಗುಣಗಳನ್ನು ಹೊಂದಿದ್ದರು. ಸುಂದರ ಆದರ್ಶ ಸಮಾಜವನ್ನ ಕಟ್ಟುವ ಪರಿಕಲ್ಪನೆಯಲ್ಲಿ ರಚಿಸಿದ ಸರ್ವಜ್ಞರ ಒಂದೊಂದು ವಚನವು ಬಹಳ  ಅರ್ಥ ಪೂರ್ಣವಾದ ಅಂಶವನ್ನು ಒಳಗೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್ ಉದಯ್ ಕುಮಾರ್, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ  ಕೃಷ್ಣ, ಕುಂಬಾರ ಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಪ್ರದೀಪ್ ವೈ.ಪಿ, ಪ್ರಧಾನ ಕಾರ್ಯದರ್ಶಿ ಕಾಂತರಾಜು, ಸಮಾಜದ ಹಿರಿಯ ಮುಖಂಡರಾದ ಅರಳಿ ಪುಟ್ಟಸ್ವಾಮಿ, ರಾಷ್ಟ್ರ ಯುವ ಪುರಸ್ಕೃತರಾದ ಅನುಪಮ, ರಾಷ್ಟ್ರ ಯುವ ಪುರಸ್ಕೃತರಾದ ಟಿ.ಎಲ್ ನಾಗರಾಜ್, ಬಿ.ಜೆ ಸುಧಾ, ಆನಂದ್, ಬಿ ಶ್ರೀನಿವಾಸ್ ಇನ್ನಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ