ವರದಿ : ಪ್ರಭು ವಿ ಎಸ್
ಮದ್ದೂರು
ರೈತ ಬಾಂಧವರಿಗೆ ಅತ್ಯಂತ ಸವಾಲಾಗಿರುವ ಮಾರುಕಟ್ಟೆ ವ್ಯವಸ್ಥೆಯನ್ನು ಸರಳಿಕರಣಗೊಳಿಸಿ ದಲ್ಲಾಳಿಗಳ ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ಉದ್ದೇಶದಿಂದ ರೈತ ಸ್ನೇಹಿ ಮಾರಾಟ ವ್ಯವಸ್ಥೆ ಕಲ್ಪಿಸುವಕ್ಕಾಗಿ ನಿರ್ಮಾಣವಾಗಿರುವ ಹಿಂದೂಸ್ಥಾನ್ ಸೆಲ್ಪ್ ರಿಲೆಯನ್ಸ್ (ಎಚ್ ಆರ್ ಎಸ್) ಆರಂಭಗೊಳ್ಳುತ್ತಿರುವುದು ಸಂತೋಷದ ವಿಷಯ ಎಂದು ಸಮಾಜ ಸೇವಕ ಕದಲೂರು ಉದಯ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಮಳವಳ್ಳಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಹಿಂದುಸ್ಥಾನ್ ಸೆಲ್ಪ್ ರಿಲೆಯನ್ಸ್ (ಎಚ್ ಆರ್ ಎಸ್) ಅನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯ ಆವರಣದಲ್ಲೇ ರೈತರ ಸಂತೆ ಅಂಕಣ ನಿರ್ಮಿಸಿ, ಅಲ್ಲಿ ಅಸಕ್ತ ರೈತರು ತಾವು ಬೆಳೆದ ಬೆಳೆಗಳನ್ನು ಯಾವುದೆ ಶುಲ್ಕವಿಲ್ಲದೆ ಬೆಳಗ್ಗೆಯಿಂದ ರಾತ್ರಿಯವರಗೆ ಮಾರಾಟ ಮಾಡುವಂತಹ ಹೊಸ ಚಿಂತನೆಯನ್ನು ಮಾಡಿರುವುದು ರೈತರಿಗೆ ತುಂಬಾ ಅನುಕೂಲವಾಗಲಿದೆ ಎಂದು ಪ್ರಶಂಸಿದರು , ಮನುಷ್ಯನ ಆರೋಗ್ಯ ಮೇಲೆ ಅತ್ಯಂತ ದುಷ್ಪಾರಿಣಾಮ ಬೀರುತ್ತಿರುವ ಅಡುಗೆ ಎಣ್ಣೆಯನ್ನು ನಮ್ಮ ಹಿರಿಯರ ಪದ್ದತಿಯಂತೆ ಎತ್ತಿನ ಗಾಣದ ಮೂಲಕ ತಯಾರಿಸಿ ಗ್ರಾಹಕರಿಗೆ ತಲುಪಿಸುವ ಹಾಗೂ ನಾಟಿ ಹಸುವಿನ ಮಹತ್ವ ಸಾರುವ ಕಾರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಂಸ್ಥೆ ನಿರ್ಧರಿಸುವುದು ಜತೆಗೆ ನೇಗಿಲಯೋಗಿಗಳ ಅಭಿವೃದ್ದಿಗೆ ವೇದಿಕೆಯಾಗಿರುವ ಹಿಂದೂಸ್ಥಾನ್ ಸೆಲ್ಪ್ ರಿಲೆಯನ್ಸ್ ಸಂಘಟನೆಗೆ ಅಗತ್ಯ ಸಹಕಾರ ನೀಡುತ್ತೀರುವುದ ಒಳ್ಳೆಯ ಬೆಳವಣಿಗೆ ಎಂದರು.
ಈ ವೇಳೆ ಸಂಸ್ಥೆಯ ಮಾಲೀಕ ವಿ ಎ ಸಚಿನ್ ಮಾತನಾಡಿ, ರೈತರಿಗೆ ದಲ್ಲಾಳಿಗೆ ಹಾವಳಿ ತಪ್ಪಿಸಿ ಅಧಿಕ ಲಾಭ ಬರುವಂತೆ ಮಾರುಕಟ್ಟೆ ನಿರ್ಮಿಸಿ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಸಂಸ್ಥೆ ಪ್ರಾರಂಭ ಮಾಡಿದ್ದು ಇದರ ಸದುಪಯೋಗವನ್ನು ತಾಲೂಕಿನ ಜಿಲ್ಲೆಯ ಹಾಗೂ ರಾಜ್ಯದ ರೈತರು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಉದ್ಘಾಟನೆ ಸಮಾರಂಭದ ವೇಳೆ ಪುಟ್ಟ, ಕದಲೂರು ರವಿ, ತಿಮ್ಮೇಗೌಡ, ಧನಂಜಯ, ಕಿರಣ್, ಮಧು, ಕೇಶವ, ನವೀನ್, ಕಾರಸವಾಡಿ ಮಹದೇವು, ವಿ ಟಿ ಅಶೋಕ್, ವಿ ಟಿ ಸುರೇಂದ್ರ, ಕಾಂತರಾಜು ರೈತರು ಸೇರಿದಂತೆ ಇತರರು ಹಾಜರಿದ್ದರು.




