ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು ಬೀದಿ ವ್ಯಾಪಾರಿಗಳಿಗೆ ದೊಡ್ಡ ಗಾತ್ರದ ಕೊಡೆಗಳನ್ನು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ವಿತರಿಸಿದರು.
ನಾಗಮಂಗಲ ಪಟ್ಟಣದಲ್ಲಿ ಹಲವು ಮಂದಿ ರಸ್ತೆ ಬದಿ ವ್ಯಾಪಾರ ಮಾಡುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ದಿನನಿತ್ಯ ವ್ಯಾಪಾರಸ್ಥರು ಬಿಸಿಲು,ಮಳೆಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದರು. ಅವರ ಸಂಕಷ್ಟದ ಪರಿಸ್ಥಿತಿ ಕಂಡು ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೊಡ್ಡ ಗಾತ್ರದ ಕೊಡೆಗಳನ್ನು ವಿತರಣೆ ಮಾಡಲಾಗಿದೆ.ಇದರಿಂದ ಬೀದಿ ವ್ಯಾಪಾರಿಗಳಿಗೆ ಅನಕೂಲವಾಗಲಿದೆ ಎಂದರು.
ಪಟ್ಟಣದ ಕೆ ಎಸ್ ಟಿ ರಸ್ತೆ, ಹಳೆ ಮಾರ್ಕೆಟ್, ಬಸ್ ಸ್ಟಾಂಡ್ ಮುಂತಾದ ಕಡೆಗಳಲ್ಲಿ ವ್ಯಾಪಾರ ಮಾಡುತ್ತಿರುವಂತಹ ಸುಮಾರು 250ಕ್ಕೂ ಹೆಚ್ಚಿನ ವ್ಯಾಪಾರಸ್ಥರಿಗೆ ಕೊಡೆಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸಚಿನ್ ಚಲುವರಾಯಸ್ವಾಮಿ, ಸುನಿಲ್ ಲಕ್ಷ್ಮಿಕಾಂತ್, ಪುರಸಭೆ ಸದಸ್ಯರಾದ ರಮೇಶ್, ತಿಮ್ಮಪ್ಪ, ಮುಖಂಡರುಗಳಾದ ಪಾನಿಪುರಿ ಸುರೇಶ್, ವಿನಯ್ ಕುಮಾರ್, ಚೇತನ್ ಕುಮಾರ್, ರವಿಕಾಂತೇಗೌಡ, ಮುತಾಬೀರ್ ಖಾನ್ ಪುರಸಭೆ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆಸಿಫ್ ಪಾಷ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.




