ಕರ್ನಾಟಕ ವಿಧಾನಸಭಾ ಚುನಾವಣೆ ಒಂದೆರಡು ತಿಂಗಳು ಬಾಕಿಯಿರುವ ಸಂದರ್ಭದಲ್ಲಿ ನಡೆಸಿರುವ ವಿಧಾನಸಭೆ ಚುನಾವಣಾ ಪೂರ್ವ ಸಮೀಕ್ಷೆ ಕಾಂಗ್ರೆಸ್ ನಾಯಕರಲ್ಲಿ ಹೊಸ ಹುಮ್ಮಸ್ಸನ್ನು ಮೂಡಿಸಿದೆ.
The #40PercentSarkara will finally be relegated to less then 40 seats.
Such is the groundswell of support for @INCKarnataka and yearning to throw out the corrupt BJP. https://t.co/xSuNrMfTtR
— Randeep Singh Surjewala (@rssurjewala) March 10, 2023
“>
ಈ ಸಮೀಕ್ಷೆಯಂತೆ ಕರ್ನಾಟಕ ವಿಧಾನಸಭಾ ಸಾರ್ವತ್ರೀಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಒಟ್ಟು 224 ಸ್ಥಾನಗಳ ಪೈಕಿ 116ರಿಂದ 122 ಸ್ಥಾನಗಳಲ್ಲಿ ಜಯಭೇರಿ ಭಾರಿಸಿ ವಿಜಯದ ಪತಾಕೆ ಹಾರಿಸಲಿದೆ. ಈಗಿನ ಬಿಜೆಪಿ ಸರ್ಕಾರವು ಮಿತಿ ಮೀರಿದ ಭ್ರಷ್ಟಾಚಾರದಿಂದಾಗಿ ತೀವ್ರ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದು 77 ರಿಂದ 83 ಸ್ಥಾನಗಳಲ್ಲಷ್ಟೆ ಗೆಲುವು ಸಾಧಿಸಲಿದೆ. ಅಲ್ಲದೇ ಮತ್ತೊಂದು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ರಾಜ್ಯದಲ್ಲಿ 21 ರಿಂದ 27 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬುದನ್ನು ಈ ಸಮೀಕ್ಷೆ ತಿಳಿಸಿದೆ.
ಒಟ್ಟಾರೆ ಶೇಖಡವಾರು ಮತಗಳ ಗಳಿಕೆಯಲ್ಲಿ ಕಾಂಗ್ರೆಸ್ ಶೇ. 33ರಿಂದ 42ರಷ್ಟು, ಬಿಜೆಪಿ ಶೇ.33ರಿಂದ 36ರಷ್ಟು, ಜೆಡಿಎಸ್ ಶೇ.21ರಿಂದ 27ರಷ್ಟು ಮತಗಳನ್ನು ಪಡೆಯಲಿದೆ ಎಂಬ ಮಾಹಿತಿಯನ್ನು ಸಮೀಕ್ಷೆಯು ಹೊರ ಹಾಕಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸರ್ಜೆವಾಲ ಟ್ವೀಟ್ ನಲ್ಲಿ ಸಮೀಕ್ಷೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.




