Monday, November 23, 2026

ಪ್ರಾಯೋಗಿಕ ಆವೃತ್ತಿ

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ| ಜನರ ಹಣದಲ್ಲಿ ಪಕ್ಷದ ಮೆರವಣಿಗೆ ಮಾಡಲು ನಾಚಿಕೆ ಎನಿಸುವುದಿಲ್ಲವೇ? : ಕಾಂಗ್ರೆಸ್ ಟ್ವೀಟ್

ಪ್ರಧಾನಿ ನರೇಂದ್ರ ಮೋದಿಯವರು ಇಂದು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಉದ್ಘಾಟಿಸಲು ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಜಿಲ್ಲಾಡಳಿತ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.

ಜಿಲ್ಲಾಡಳಿತವು ಗ್ರಾಮ ಪಂಚಾಯ್ತಿಗಳಿಗೆ ಜನರನ್ನು ಕರೆ ತರಲು ಆದೇಶ ನೀಡಿದೆ. ಅಲ್ಲದೆ ಪ್ರತಿ ಗ್ರಾಮಗಳಿಗೂ ಬಸ್ ಕಳಿಸಿದೆ. ಇನ್ನು ಗ್ರಾಮ ಪಂಚಾಯ್ತಿಗಳು ಕಾರ್ಯಕ್ರಮಕ್ಕೆ ಜನರು ಬರಬೇಕೆಂದು ಮೆಮೊ ಹೊರಡಿಸಿವೆ.

ಈ ಬಗ್ಗೆ ಕಾಂಗ್ರೆಸ್ ಟ್ಟೀಟ್ ಮಾಡಿ, ಖಾಲಿ ಕುರ್ಚಿಗಳಿಂದ ನರೇಂದ್ರ ಮೋದಿ ಅವರಿಗೆ ಮುಜುಗರ ಆಗಬಾರದೆಂದು ಬಲವಂತವಾಗಿ ಜನರನ್ನು ಕರೆತರುತ್ತಿರುವಿರಾ? ಬೊಮ್ಮಾಯಿಯವರೇ ಎಂದು ಪ್ರಶ್ನಿಸಿದೆ.

“>

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ