Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಾರತ ಮಾಲಾ – ಸಾಗರ ಮಾಲಾ ಯೋಜನೆಗಳಿಂದ ದೇಶ ಅಭಿವೃದ್ಧಿ : ನರೇಂದ್ರ ಮೋದಿ

ಭಾರತ ಮಾಲಾ, ಸಾಗರ ಮಾಲಾ ಯೋಜನೆಯಿಂದ ದೇಶ ಅಭಿವೃದ್ಧಿ ಮತ್ತು ಮೂಲಭೂತ ಕ್ಷೇತ್ರದಲ್ಲಿ ಅಭಿವೃದ್ದಿ ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಳಿ 118 ಕಿ.ಮೀ. ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಯನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಪ್ರಯಾಣದ ಸಮಯ ಅರ್ಧಕ್ಕಿಂತಲೂ ಕಡಿಮೆ

8,479 ಕೋಟಿ ರೂ. ವೆಚ್ಚದಲ್ಲಿ ಎಕ್ಸ್‌ಪ್ರೆಸ್‌ ಹೈವೇ ನಿರ್ಮಾಣವಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಎಕ್ಸೆಪ್ರೆಸ್ ಹೈವೇಗೆ ಸಂಬಂಧಿಸಿದಂತೆ ಚರ್ಚೆಯಾಗುತ್ತಿದೆ. ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಇದು ದೇಶದ ಅಭಿವೃದ್ದಿಯ ಸಂಕೇತ. ಮೈಸೂರು -ಕುಶಾಲನಗರದ 4 ಪಥದ ರಸ್ತೆಯನ್ನು ಶಿಲಾನ್ಯಾಸ ಮಾಡಲಾಗಿದೆ. ಭಾರತದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ದಿ ಮಾಡಲಾಗುತ್ತಿದೆ ಎಂದರು.

ದಶಪಥ ಹೆದ್ದಾರಿಯಿಂದ ಈ ಭಾಗದಲ್ಲಿ ಸಾಕಷ್ಟು ಅನುಕೂಲವಾಗಲಿದೆ. ಈ ಪುಣ್ಯಭೂಮಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯರನ್ನು ದೇಶಕ್ಕೆ ನೀಡಿದೆ. ರಹದಾರಿ ಅಭಿವೃದ್ದಿಯ ಜೊತೆಗೆ ನಾಡಿನ ಅಭಿವೃದ್ದಿಗೆ ದಾರಿ ದೀಪವಾಗಿದೆ. ಬೆಂಗಳೂರು ತಾಂತ್ರಿಕತೆಯ ನಗರಿ. ಮೈಸೂರು ಪಾರಂಪರಿಕ ನಗರಿ, ಈ ಕಾರಣಕ್ಕೆ ಪರಿಚಿತವಾಗಿದೆ. ಈ ಹೆದ್ಧಾರಿ ಎರಡು ನಗರಗಳ ಅಭಿವೃದ್ದಿಗೆ ರಹದಾರಿಯಾಗಿದೆ ಮತ್ತು ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ ಎಂದರು.

ಟ್ರಾಫಿಕ್ ಸಮಸ್ಯೆ ಬ್ರೇಕ್

ಮಳೆಗಾಲದಲ್ಲಿ ಪಶ್ಚಿಮ್ ಘಟಗಳಲ್ಲಿ ಹೆದ್ದಾರಿಯಲ್ಲಿ ಭೂ ಕುಸಿತದ ಕಾರಣಕ್ಕೆ ಆಗಾಗ್ಗೆ ಬೆಂಗಳೂರು-ಮಂಗಳೂರು ರಸ್ತೆ ಬಂದ್ ಆಗುತ್ತಿತ್ತು. ಮೈಸೂರು-ಕುಶಾಲನಗರದ ಆಗಲೀಕರಣ ಈ ಸಮಸ್ಯೆಯನ್ನು ದೂರ ಮಾಡುತ್ತದೆ. ಈ ಭಾಗದಲ್ಲಿ ಜನರಿಗೆ ಟ್ರಾಫಿಕ್ ಸಮಸ್ಯೆಯಾಗುತ್ತಿತ್ತು. ಅದಕ್ಕೀಗ ಬ್ರೇಕ್ ಬಿದ್ದಿದೆ. ಕೇವಲ ಒಂದೂವರೆ ಗಂಟೆಯಲ್ಲಿ ಪ್ರಯಾಣಿಸಬಹುದಾಗಿದೆ. ಈ ಎಕ್ಸ್ ಪ್ರೆಸ್ ಹೈವೇ ರಾಮನಗರ ಮತ್ತು ಮಂಡ್ಯದ ಮೂಲಕ ಹಾದು ಹೋಗುತ್ತದೆ. ಈ ಪ್ರದೇಶಗಳು ಐತಿಹಾಸಿಕ ಕಾರಣಕ್ಕೆ ಪ್ರಸಿದ್ದವಾಗಿದೆ ಇದರ ಕಾರಣಕ್ಕೆ ಪ್ರವಾಸೋದ್ಯಮ ಹೆಚ್ಚಾಗುವ ಸಂಭವವಿದೆ. ಈ ಮಾರ್ಗದ ಮೂಲಕ ಕಾವೇರಿ ಜನ್ಮ ಸ್ಥಳ ಕೊಡಗಿಗೆ ಹೋಗಲು ಸುಲಭವಾಗುತ್ತದೆ ಎಂದರು.

ರೈತರ ಸಣ್ಣ ಸಣ್ಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಲ್ಲಿ ಬಿಜೆಪಿ ಪ್ರಯತ್ನಿಸುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ ಕರ್ನಾಟಕದ ರೈತರ ಬ್ಯಾಂಕ್ ಖಾತೆಗೆ 12000 ಕೋಟಿ ಹಣ ನೇರವಾಗಿ ರೈತರ ಖಾತೆಗೆ ಜಮೆಯಾಗಿದೆ. ಈ ಮಂಡ್ಯದಲ್ಲಿಯೂ ಕೂಡ ಮೂರು ಮೂಕ್ಕಾಲು ಲಕ್ಷ ರೈತರ ಖಾತೆಗೂ 600 ಕೋಟಿಗೂ ಅಧಿಕ ಹಣ ಜಮೆಯಾಗಿದೆ. ಸಕ್ಕರೆ ಕಾರ್ಖಾನೆಗಳ ಮೇಲೆ ಕಬ್ಬುಬೆ ಳೆಗಾರ ಅವಲಂಬನೆ ಇದೆ. ದಶಕಗಳ ಈ ಸಮಸ್ಯೆಗೆ ಒಂದು ಪರಿಹಾರವನ್ನು ಹುಡುಕುವ ಅಗತ್ಯತೆ ಇತ್ತು. ಎಥೆನಾಲ್ ಉತ್ಪಾದನೆಗೆ ಹೆಚ್ಚು ಒತ್ತು ನೀಡಿದ್ದೇವೆ. ಕಬ್ಬುಬೆಳೆಗಾರರಿಗೆ ಇದರಿಂದ ಸುಸ್ಥಿರ ಅಭಿವೃದ್ದಿ ಸಾಧ್ಯ ಎಂದರು.

ಇದಕ್ಕೂ ಮೊದಲು ಮೈಸೂರು-ಕುಶಾಲನಗರ ಹೆದ್ದಾರಿ ಕಾಮಗಾರಿಗೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದರು. 4128.92 ಕೋಟಿ ವೆಚ್ಚದ 92.33 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿಗೆ ಗೆಜ್ಜಲಗೆರೆ ಸಮಾವೇಶದಲ್ಲಿ ಶಿಲಾನ್ಯಾಸ ಮಾಡಿದರು. ಈ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಶಿ, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ, ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!