Friday, November 20, 2026

ಪ್ರಾಯೋಗಿಕ ಆವೃತ್ತಿ

ಇಂದಿಗೆ 20,000 ಮನೆ ತಲುಪಿದ ‘ಮನೆ ಮನೆಗೆ ಮಧುಚಂದನ್’ ಪಾದಯಾತ್ರೆ

ಮಂಡ್ಯ ನಗರದ ಪ್ರತಿ ಮನೆಯನ್ನು ಬಿಡದೆ ಸ್ಥಳಿಕರ ಸಮಸ್ಯೆಗಳನ್ನು ಆಲಿಸುತ್ತಾ ಕಳೆದ 17 ದಿನಗಳಿಂದ ನಿರಂತರವಾಗಿ ಪಾದಯಾತ್ರೆ ಮಾಡುತ್ತಿರುವ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾದ ಮಧುಚಂದನ್ ಪಾದಯಾತ್ರೆಯು 20000 ಮನೆಗಳನ್ನು ತಲುಪಿದೆ.

ಈ ದಿನದ ಪಾದಯಾತ್ರೆಯೂ ನಗರದ ಡೌರಿ ಸಮಾಜದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಸ್ಥಳೀಯರನ್ನು ಉದ್ದೇಶಿಸಿ ಮಾತನಾಡಿದ ಮಧುಚಂದನವರು ಇಡೀ ಮಂಡ್ಯ ನಗರದಲ್ಲಿ ಮನುಷ್ಯರು ಸಹ ವಾಸಿಸಲಾಗದ ಸ್ಥಳದಲ್ಲಿ ವಾಸಿಸುತ್ತಿರುವವರು ಡೌರಿ ಸಮಾಜದ ಜನರು ಇಲ್ಲಿಯ ಜನರಿಗೆ ಯಾವುದೇ ಸವಲತ್ತುಗಳು ದೊರಕಿಲ್ಲ ಮೂಲ ಸೌಕರ್ಯ ಅಭಿವೃದ್ಧಿಯ ಹೆಸರೇ ಇವರಿಗೆ ತಿಳಿದಿಲ್ಲ ಎಂಬಂತಿದೆ ಈ ಬಡಾವಣೆ.

ಸತತವಾಗಿ ಅಧಿಕಾರ ಉಂಡ ಯಾವ ರಾಷ್ಟ್ರೀಯ ಪಕ್ಷಗಳು ಯಾವ ಪ್ರಾದೇಶಿಕ ಪಕ್ಷವು ಮಂಡ್ಯ ನಗರದ ಅಭಿವೃದ್ಧಿಗೆ ಪೂರಕವಾಗಿ ದನಿಯತ್ತಿಲ್ಲ ಮತ್ತು ಕೆಲಸ ಮಾಡಿಲ್ಲ ಎಂಬುದು ನೋವಿನ ಸಂಗತಿ. ಬಿಜೆಪಿ ಪಕ್ಷದವರು ಇತಿಹಾಸವೇ ಇಲ್ಲದ ಉರಿಗೌಡ ನಂಜೇಗೌಡ ಅವರ ಬಗ್ಗೆ ಮಾತನಾಡಿದಷ್ಟು ಮಂಡ್ಯ ನಗರದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರೆ ಒಂದಷ್ಟು ಅನುದಾನವಾದರೂ ಬರುತ್ತಿತ್ತು ಎಂದು ತಮ್ಮ ಅಕ್ರೋಶ ಹೊರ ಹಾಕಿದರು.

ಮತ್ತೊಂದು ಕಡೆ ಶ್ರೀಮತಿ ಅರ್ಚನಾ ಮಧುಚಂದನವರು ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನ ಎನ್ ಗೌಡ ಅವರು ಹೊನಗನಹಳ್ಳಿ ಮತ್ತು ಚಿಕ್ಕಬಾಣಸವಾಡಿ ಗ್ರಾಮಗಳಲ್ಲಿ ಇಂದು ಮದುಚಂದನ್ ಅವರ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಖಜಾಂಚಿಗಳಾದ ತಗ್ಗಳ್ಳಿ ಪ್ರಸನ್ನ, ಹಾಲಳ್ಳಿ ಮಹೇಶ್, ಬೆಳ್ಳುಂಗೆರೆ ಕಾಂತ, ಹುಲಿವಾನ ಜಗದೀಶ್, ಪಿ ಡಿ ರಮೇಶ್ ಹಾಗೂ ಡೌರಿ ಸಮಾಜದ ಮುತ್ತುರಾಜ್, ಪಳನಿ, ಸುಧಾ, ಚಂದ್ರಕಲಾ, ಕಮಲ, ಗಿರೀಶ್ ಹಾಗೂ ಚಂದ್ರು, ಇನ್ನು ಮುಂತಾದವರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ