Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಹಿಳೆ ಘನತೆಯಿಂದ ಬದುಕಿದಾಗ ಅಂತರಾಷ್ಟೀಯ ಮಹಿಳಾ ದಿನಕ್ಕೆ ಮಹತ್ವ : ವಸುಂಧರಾ ಭೂಪತಿ

ಪ್ರತಿದಿನದ ಬದುಕಿನಲ್ಲಿ ಮಹಿಳೆ ಘನತೆಯಿಂದ ಬದುಕುವಂತ ಕಾಲಯಾವಾಗ ಬರುತ್ತದೊ ಆಗ ಅಂತರಾಷ್ಟೀಯ ಮಹಿಳಾದಿನ ಆಚರಣೆಗೆ ಮಹತ್ವ ಬರುತ್ತದೆ ಎಂದು ರಾಜ್ಯ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಡಾ. ವಸುಂಧರ ಭೂಪತಿ ಅಭಿಪ್ರಾಯಪಟ್ಟರು.

ಮಂಡ್ಯ ನಗರದ ಮಾಂಡ್ಯವ್ಯ ಎಕ್ಷಲೆನ್ಸ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಗರ ಕನ್ನಡ ಸಾಹಿತ್ಯ ಪರಿಷತ್ತು, ಭಾರತೀಯ  ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಆಯೋಜಿಸಿದ್ದ ಅಂತರಾಷ್ಟೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬ ಮಹಿಳೆಯು ಹುಟ್ಟಿನಿಂದ ಸಾವಿನವರೆಗೂ ಹೋರಾಟದ ಬದುಕು ಸಾಗಿಸುತ್ತಾಳೆ, ಸಾಧನೆ ಮಾಡುವ ಮಹಿಳೆಯರು ಹೋರಾಟದ ಬದುಕೇ ಆಗಿರುತ್ತದೆ, ಗೃಹಿಣಿ, ಪೌರಕಾರ್ಮಿಕ ಮಹಿಳೆ, ರೈತಮಹಿಳೆ, ರಾಷ್ಟಪತಿ ದ್ರೌಪತಿ ಮುರ್ಮವರೆಗೂ ಹೋರಾಟದ ಬದುಕೇ ಆಗಿರುತ್ತವೆ. ಇಡೀ ಶತಮಾನದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ 4 ಮಂದಿ ಮಹಿಳೆಯರಲ್ಲಿ ಮಂಡ್ಯದ ಜಯದೇವಿ ಅವರು ಒಬ್ಬರು, ಸಾಹಿತ್ಯ ಕ್ಷೇತ್ರದಲ್ಲಿ ಐತಿಹಾಸಿಕ ಕೊಡುಗೆಗಳನ್ನು ನೀಡಿದೆ, ಮಂಡ್ಯ ಜಿಲ್ಲೆ ಮಾದರಿಯಾಗಿದೆ, ಹೆಣ್ಣು-ಗಂಡು ಸಮಾನರು ಎನ್ನುವ ರೀತಿಯಲ್ಲಿ ತೋರಿಸುತ್ತಿದೆ ಎಂದು ಹೇಳಿದರು.

ಮಹಿಳಾ ಮೀಸಲಾತಿ ಏಕೆ ಸಾಧ್ಯವಾಗಿಲ್ಲ
ಚುನಾವಣೆಗಳು ಬರುತ್ತಿವೆ, ಹೋಗುತ್ತಿವೆ, ಮಹಿಳಾ ಮೀಸಲಾತಿ ನೀಡಬೇಕೆಂದು ಸಂಸತ್ ಮತ್ತು ವಿಧಾನಸಭೆಯಲ್ಲಿ ಚರ್ಚೆಗೆ ಬಂದು, ಯಾಕೆ ಇನ್ನೂ ಸಾಧ್ಯವಾಗಿಲ್ಲ, ಮಹಿಳೆಯರು ಪ್ರಶ್ನೆ ಮಾಡಲ್ಲ, ಪಕ್ಷಗಳು ಓಟ್‌ ಕೇಳಲು ಬರುತ್ತಾರೆ, ಆಗ ನೀವು ಶೇ. 33 ಮಹಿಳಾ ಮೀಸಲಾತಿ ಬಗ್ಗೆ ಕೇಳಬೇಕು. ವಿವಿಧ ಪಕ್ಷಗಳು ವಿಧಾನಸಭಾ ಚುನಾವಣೆಯಲ್ಲಿ ಎಷ್ಟು ಮಹಿಳೆರಿಗೆ ಸ್ಪರ್ಧೆ ಮಾಡಲು ಅವಕಾಶ ನೀಡಿವೆ ಎಂಬುದನ್ನು ತಿಳಿದುಕೊಳ್ಳಬೇಕಿದೆ, ಎಲ್ಲರೂ ಪ್ರಶ್ನೆ ಮಾಡುವ ಮೂಲಕ ಪಡೆದುಕೊಳ್ಳಬೇಕಿದೆ ಎಂದು ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ ಮಾತನಾಡಿ, ವರ್ಷದ ಪ್ರತಿದಿನವು ನಡೆಯುವ ಕನ್ನಡ ರಾಜ್ಯೋತ್ಸವದಂತೆ ಮಹಿಳಾ ದಿನಾಚಣೆಯು ನಡೆಯುತ್ತಿರುತ್ತದೆ, ಮಹಿಳಾ ದಿನಚಾರಣೆಯಲ್ಲಿ ಮಹಿಳೆಯರ ಸ್ಥಾನ-ಮಾನ ಪ್ರಗತಿ, ಸಮಸ್ಯೆಗಳು, ಸವಾಲುಗಳ ಬಗ್ಗೆ ಚಿಂತನೆ ನಡೆಯುತ್ತಿರುತ್ತದೆ. 19ನೇ ಶತಮಾನದಲ್ಲಿ ವಿಶ್ವಸಂಸ್ಥೆ, ವಿಶ್ವ ಮಹಿಳಾ ದಿನಾಚರಣೆ ಮಾಡಲು ಸಂಕಲ್ಪಿಸುತ್ತದೆ, ಭಾರತದೇಶದಲ್ಲಿ 10ನೇ ಶತಮಾನದಲ್ಲೇ ಅತ್ತಿಮಬ್ಬೆ ಅವರಿಂದ ಮಹಿಳೆಯ ದಿನಾಚಣೆ ನಡೆದಿದೆ, 12 ಶತಮಾನದಲ್ಲಿ ಅಕ್ಕಮಹಾದೇವಿ ಸೇರಿದಂತೆ ಅನೇಕರು ಮಹಿಳಾ ಸಮಸ್ಯೆಗಳಿಗೆ ಹೋರಾಟ ಪರಿಹಾರ ನೀಡುತ್ತಾರೆ ಎಂದರು.

ಇದೇ  ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಮಹಿಳಾ ಸಾಧಕರನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿ ಗೌರವಿಸಿ ಪುರಸ್ಕರಿಸಲಾಯಿತು. ನಾನಾ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರೈತ ಹೋರಾಟಗಾರ್ತಿ ಸುನಂದಜಯರಾಂ, ನಗರ ಕಸಾಪ ಅಧ್ಯಕ್ಷೆ ಸುಜಾತಕೃಷ್ಣ, ಜಿಲ್ಲಾಧ್ಯಕ್ಷ ರವಿಕುಮಾರ ಚಾಮಲಾಪುರ, ಮಂಡ್ಯ ತಾಲೂಕು ಅಧ್ಯಕ್ಷ ಚಂದ್ರುಲಿಂಗು, ಮಾಂಡವ್ಯ ಶೈಕ್ಷಣಿಕ ಪಾಲುದಾರ ಚೇತನ್‌ಕೃಷ್ಣ, ಬಿ.ಎಂ.ಅಪ್ಪಾಜಪ್ಪ, ಅಂಜನಾ, ಶೋಭಾ, ಉಷಾರಾಣಿ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!