Thursday, October 24, 2024

ಪ್ರಾಯೋಗಿಕ ಆವೃತ್ತಿ

ಪಂಜಾಬ್ (ಪಟಿಯಾಲ) | 10 ತಿಂಗಳ ಕಠಿಣ ಸೆರೆವಾಸದ ನಂತರ ನವಜೋತ್ ಸಿಂಗ್ ಸಿಧು ಬಿಡುಗಡೆ

34 ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಹತ್ಯೆಗೈದ ರಸ್ತೆ ಜಗಳ (Road Rage) ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು (Navjot Singh Sidhu) 10 ತಿಂಗಳ ಬಳಿಕ ಶನಿವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಲೋಕಸಭೆಗೆ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸದ್ಯಕ್ಕೆ ಪ್ರಜಾಪ್ರಭುತ್ವ ಎಂಬುದೇ ಇಲ್ಲ. ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ತರುವ ಸಂಚು ನಡೆಯುತ್ತಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ. ನೀವು ಪಂಜಾಬ್ ಅನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರೆ, ನೀವು ದುರ್ಬಲರಾಗುತ್ತೀರಿ ಎಂದು ನವಜೋತ್ ಸಿಂಗ್ ಸಿಧು ಹೇಳಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಸರಿ ಪಕ್ಷದ ನೇತೃತ್ವದ ಸರ್ಕಾರವು “ಹೆದರಿದೆ” ಎಂದು ಹೇಳಿದರು.

“ಈ ದೇಶದಲ್ಲಿ ಸರ್ವಾಧಿಕಾರ ಬಂದಾಗಲೆಲ್ಲಾ ಕ್ರಾಂತಿಯೂ ಬಂದಿದೆ ಮತ್ತು ಈ ಬಾರಿ ಆ ಕ್ರಾಂತಿಯ ಹೆಸರು ರಾಹುಲ್ ಗಾಂಧಿ. ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ” ಎಂದು ನವಜೋತ್ ಸಿಂಗ್ ಸಿಧು ಶನಿವಾರ ಹೇಳಿದ್ದಾರೆ.

“>

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಂಸತ್ತಿನಲ್ಲಿ ಪ್ರತಿಪಕ್ಷಗಳ ಧ್ವನಿಯನ್ನು ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.

“ಚರ್ಚೆ ಮತ್ತು ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದ ಮೂಲತತ್ವ. ಇದು ಪ್ರತಿಪಕ್ಷದ ಪಾತ್ರವಾಗಿದೆ ಎಂದು ಅವರು ಒತ್ತಿ ಹೇಳಿದರು.

1988 ರ ರೋಡ್ ರೇಜ್ ಪ್ರಕರಣದಲ್ಲಿ 65 ವರ್ಷದ ಗುರ್ನಾಮ್ ಸಿಂಗ್ ಸಾವಿಗೆ ಸುಪ್ರೀಂ ಕೋರ್ಟ್ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದ ನಂತರ ನವಜೋತ್ ಸಿಂಗ್ ಸಿಧು ಅವರನ್ನು ಕಳೆದ ವರ್ಷ ಮೇ 20 ರಂದು ಜೈಲಿಗೆ ಹಾಕಲಾಯಿತು.

ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಜೈಲುವಾಸದ ಸಮಯದಲ್ಲಿ ಸಿಧು ಅವರ ಉತ್ತಮ ನಡತೆಯ ಕಾರಣದಿಂದಾಗಿ ಅವರಿಗೆ ಆರಂಭಿಕ ಬಿಡುಗಡೆಯನ್ನು ನೀಡಲಾಯಿತು.

ಸುಪ್ರೀಂ ಕೋರ್ಟ್‌ನಿಂದ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾದ 10 ತಿಂಗಳ ನಂತರ ಅವರು ಶನಿವಾರ ಸಂಜೆ ಪಟಿಯಾಲಾ ಜೈಲಿನಿಂದ ಬಿಡುಗಡೆಯಾದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!