ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತವಾಗಿದ್ದು, ಪಿ.ಎಂ ನರೇಂದ್ರಸ್ವಾಮಿ ಅವರನ್ನು ಅಶೀರ್ವದಿಸಿದರೇ ಸಚಿವರಾಗಿ ಮಳವಳ್ಳಿಗೆ ಇನ್ನೂ ಹೆಚ್ಚಿನ ಯೋಜನೆಗಳನ್ನು ತಂದು ಅಭಿವೃದ್ದಿಗೊಳಿಸಲಿದ್ದಾರೆಂದು ವಿಧಾನಪರಿಷತ್ ಸದಸ್ಯ ಮಧು ಜಿ ಮಾದೇಗೌಡ ಭವಿಷ್ಯ ನುಡಿದರು.
ಮಳವಳ್ಳಿ ಪಟ್ಟಣದ ಸುಲ್ತಾನ್ ರಸ್ತೆಯ ಕಾಂಗ್ರೆಸ್ ನಿವೇಶನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದುಳಿದ ಸಮುದಾಯದ ಅಭಿವೃದ್ದಿಗೆ ನಿರಂತರವಾಗಿ ಶ್ರಮಿಸುತ್ತಿರುವ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ಅವರನ್ನು ಗೆಲ್ಲಿಸಿದರೇ ಜೊತೆಯಲ್ಲಿ ಕ್ಷೇತ್ರದ ಸರ್ವಂಗೀಣ ಅಭಿವೃದ್ದಿಗೆ ಶ್ರಮಿಸಲಾಗುವುದು, ಪಟ್ಟಣದ ಸುಲ್ತಾಪಿ,ಎಂ ನರೇಂದ್ರಸ್ವಾಮಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ಸಾವಿರಾರು ಕೋಟಿ ಅನುದಾನವನ್ನು ತಂದು ಮಳವಳ್ಳಿ ಕ್ಷೇತ್ರವನ್ನು ಅಭಿವೃದ್ದಿಪಡಿಸಿದ್ದಾರೆಂದು ಹೇಳಿದರು.
ಕಳೆದ ಐದು ವರ್ಷದ ಅವಧಿಯಲ್ಲಿ ಅಭಿವೃದ್ದಿ ಎಂಬುವುದು ಮರೀಚಿಕೆಯಾಗಿದೆ, ಪಿ.ಎಂ ನರೇಂದ್ರಸ್ವಾಮಿ ಅವರಿಗೆ ಸಾವಿರಾರು ಕೋಟಿಗಳನ್ನು ತಂದು ಕ್ಷೇತ್ರವನ್ನು ಅಭಿವೃದ್ದಿಪಡಿಸುವ ಶಕ್ತಿ ಇದೆ, ಇಂತಹ ದಕ್ಷ ನಾಯಕನನ್ನು ಗೆಲ್ಲಿಸಬೇಕಿರುವುದರಿಂದ ಹಿಂದುಳಿದ ಸಮುದಾಯ ಆತ್ಮ ಗೌರವಕ್ಕೆ ಮೋಸ ಮಾಡಿಕೊಳ್ಳದೇ ತಮ್ಮ ಸಮುದಾಯದ ಎಲ್ಲಾ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಿಸುವುದರ ಮೂಲಕ ದೇಶದ ಹಿತವನ್ನು ಕಾಯಬೇಕೆಂದು ಹೇಳಿದರು.
ಸವಿತಸಮಾಜ, ಮಡಿವಾಳ ಸಮಾಜ, ವಿಶ್ವಕರ್ಮ ಸಮುದಾಯ ಸೇರಿದಂತೆ ಇತರೆ ಸಮುದಾಯದ ಮುಖಂಡರು ವಿಧಾನಪರಿಷತ್ ಸದಸ್ಯ ಮಧುಜಿ ಮಾದೇಗೌಡ ಹಾಗೂ ಪಿ.ಎಂ ನರೇಂದ್ರಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಸಂಘಟನಾಕಾರ್ಯದರ್ಶಿ ವೆಂಕಟೇಶ್, ವಿಶ್ವಕರ್ಮ ಸಂಘದ ಅಧ್ಯಕ್ಷ ಪ್ರಕಾಶ್, ಕುಂಬಾರಶೆಟ್ಟರ ಸಮಾಜದ ಮುಖಂಡ ಪುಟ್ಟಶೆಟ್ಟಿ, ಮಡಿವಾಳ ಸಮಾಜದ ಮುಖಂಡ ಕೃಷ್ಣ, ಪ್ರಸನ್ನ, ಚಿಕ್ಕೆöÊದಚಾರಿ, ಸವಿತ ಸಮಾಜದ ಮುಖಂಡ ಹಮನಯ್ಯ, ಕುನ್ನಯ್ಯ, ಶಿವಲಿಂಗಯ್ಯ ಸೇರಿದಂತೆ ಇತರರು ಇದ್ದರು.




