ಯಂತ್ರದಲ್ಲಿ ರಾಗಿ ಒಕ್ಕಣೆ ಮಾಡುವ ವೇಳೆ ಆಕಸ್ಮಿಕವಾಗಿ ಕೈ ಸಿಲುಕಿ ನಾಗೇಶ್ ಎಂಬ ರೈತ ಕೈ ಕಳೆದುಕ್ಕೊಂಡ ಘಟನೆ ಗುರುವಾರ ಮಧ್ಯಾಹ್ನ ಜರುಗಿದೆ.
ಮದ್ದೂರು ತಾಲ್ಲೂಕಿನ ಚನ್ನೇಗೌಡನದೊಡ್ಡಿ ಗ್ರಾಮದ ರಮೇಶ ಕೈ ಕಳೆದುಕೊಂಡ ರೈತ.
ಸ್ವ ಗ್ರಾಮದಲ್ಲಿ ರಾಗಿ ಒಕ್ಕಣೆ ಮಾಡುವ ವೇಳೆ ಚೀಲವು ರಾಗಿಯ ಜೊತೆ ಯಂತ್ರಕ್ಕೆ ಹೊಗುವುದನ್ನ ತಡೆಯಲು ಹೋದಾಗ ಈ ಅವಘಡ ಸಂಭವಿಸಿದೆ.
ಮದ್ದೂರಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಉಚಿತ ಆಂಬುಲೆನ್ಸ್ ನಲ್ಲಿ ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.




