Saturday, October 26, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದಿಂದಲೂ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಾರಾ?

ಮಂಡ್ಯದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ಸ್ಪರ್ಧೆ ಮಾಡುತ್ತಾರ ಎನ್ನುವ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಸ್ಫರ್ಧಿಸಿದರೆ, ಮಂಡ್ಯದಲ್ಲಿ ರಾಜಕೀಯ ಪಲ್ಲಟಗಳು ಹೊಸ ರೂಪವನ್ನು ಪಡೆದುಕೊಳ್ಳುತ್ತದೆ ಎಂದು ಚರ್ಚೆ ಮಾಡಲಾಗುತ್ತಿದೆ.

ಜೆಡಿಎಸ್ ಅಭ್ಯರ್ಥಿಯಾಗಿ ಮಂಡ್ಯ ಸ್ಪರ್ಧಿಸಬೇಕೆಂದು ಕಳೆದ ಒಂದು ವಾರದಿಂದಲೂ ಒತ್ತಡಗಳು ನನಗೆ ಬರುತ್ತಿದೆ. ಜಿಲ್ಲೆಯ ಕೆಲವು ಹಳೆ ಕಾಂಗ್ರೆಸ್ ಮುಖಂಡರು ನನ್ನನ್ನು ಭೇಟಿ ಮಾಡಿ, ಮಂಡ್ಯದಿಂದಲೂ ನೀವು ಚುನಾವಣೆಯಲ್ಲಿ ಸ್ಪರ್ಧಿಸಬೇಕು. ನಂತರದ ತೀರ್ಮಾನಗಳನ್ನು ನೀವು ಚನ್ನಪಟ್ಟಣ  ಕ್ಷೇತ್ರದಲ್ಲಿ  ಇಟ್ಟುಕೊಂಡರೂ ತೊಂದರೆಯಿಲ್ಲ ಎಂದು ಚರ್ಚಿಸಿದ್ದಾರೆ ಎಂದು ಸ್ವತಃ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.

ಮಂಡ್ಯದಲ್ಲಿ ನೀವು ಆಭ್ಯರ್ಥಿಯಾಗಿ ಸ್ಫರ್ಧಿಸಿದರೆ, ಜಿಲ್ಲೆಯ ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಗೆಲ್ಲುವುದಕ್ಕೆ ಸಾಧ್ಯವಾಗುತ್ತದೆ, ಮಂಡ್ಯ ಜನರ ಪ್ರೀತಿ ನಿಮ್ಮ ಮೇಲೆ ಇರುತ್ತದೆ ಎಂದು ಜೆಡಿಎಸ್ ಮತ್ತು ಹಳೇಯ ಕಾಂಗ್ರೆಸ್ ಬೆಂಬಲಿಗರು ಒತ್ತಾಯಿಸಿದ್ದಾರೆ ಎಂದು ತಿಳಿಸಿದರು. ಈ ಬಗ್ಗೆ ಇಂದು ಶಾಸಕ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ ಪತ್ರಿಕಾಗೋಷ್ಠಿ ನಡೆಸಿ, ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಫರ್ಧಿಸುವುದಾದರೆ, ನಾನು ಕ್ಷೇತ್ರ ಬಿಡಲು ಸಿದ್ದ ಎಂದು ತಿಳಿಸಿದ್ದಾರೆ.

ಮಂಡ್ಯದಲ್ಲಿ ಜೆಡಿಎಸ್ ನಿಂದ ಯಾರು ಬೇಕಾದರೆ ಸ್ಫರ್ಧಿಸಿದರೂ, ಒಂದಷ್ಟು ಶ್ರಮ ಹಾಕಿದರೆ ಅಭ್ಯರ್ಥಿಯನ್ನು ಗೆಲ್ಲಿಸುವುದು ಕಷ್ಟವೇನಿಲ್ಲ, ಅಭ್ಯರ್ಥಿಯನ್ನು ಗೆಲ್ಲಿಸಲು, ಜನತೆಯ ವಿಶ್ವಾಸವನ್ನು ಮೂಡಿಸಲು ಸಾಧ್ಯವಿದೆ ಎಂದು  ಕುಮಾರಸ್ವಾಮಿ ಸುದ್ಧಿಗಾರರೊಂದಿಗೆ ಮಾತನಾಡಿದರು. ಕ್ಷೇತ್ರದ ಜನರ ಭಾವನೆಯನ್ನು ನಾನು ಗೌರವಿಸುತ್ತೇನೆ. ಜೆಡಿಎಸ್ ನ ಅಭ್ಯರ್ಥಿಯನ್ನು ಗೆಲ್ಲಿಸಲು ಮನವರಿಕೆ ಮಾಡಿಕೊಡುತ್ತೇನೆ, ಮಂಡ್ಯದಲ್ಲಿ ಒಂದು ಸಭೆ ಕರೆದು ನಂತರ ತೀರ್ಮಾನಿಸುತ್ತೇನೆ ಎಂದು ತಿಳಿಸಿದರು.

ಮಂಡ್ಯದ ಜನರ ಮಧ್ಯೆ ಎಲ್ಲಿ ಹೋದರು, ಚರ್ಚಿತವಾಗುತ್ತಿರುವ ವಿಷಯ ಕುಮಾರಸ್ವಾಮಿಯವರ ಸ್ಪರ್ಧೆಯದ್ದೆ ಅಗಿದೆ. ಕುಮಾರಸ್ವಾಮಿ ಸ್ಫರ್ಧಿಸಿದರೆ, ಮಂಡ್ಯದಿಂದ ಚಲುವರಾಯಸ್ವಾಮಿ ಸ್ಫರ್ಧಿಸುತ್ತಾರೆ, ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ಗಣಿಗ ಪಿ.ರವಿಕುಮಾರ್ ಗೆ ಬಿ ಫಾರಂ ಅನ್ನು ಇದೇ ಕಾರಣಕ್ಕಾಗಿ ಇನ್ನೂ ಕೊಟ್ಟಿಲ್ಲ, ಜೆಡಿಎಸ್ ನಡೆ ನೋಡಿಕೊಂಡು ಕಾಂಗ್ರೆಸ್ ಟಿಕೆಟ್ ನಿರ್ಧರಿಸಬಹುದು ಎನ್ನುವ ಮಾತುಗಳು ಕೇಳಿಬರುತ್ತಿದೆ.

ಇನ್ನೂ ಕೆಲವು ಮಂದಿ, ಕೆ.ವಿ.ಶಂಕರೇಗೌಡರ ಮೊಮ್ಮಗ ಕೆ.ಎಸ್. ವಿಜಯಾನಂದ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎನ್ನುತ್ತಿದ್ದಾರೆ. ಕ್ಷೇತ್ರದಲ್ಲಿ ಈ ಹಿಂದಿನಿಂದಲೇ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಅವರಿಗೆ ಟಿಕೆಟ್ ಲಭಿಸಬಹುದು ಎನ್ನುವವರು ಹಲವರಿದ್ದಾರೆ.

ಇಲ್ಲಾ…ಇಲ್ಲಾ… ಶಾಸಕ ಎಂ.ಶ್ರೀನಿವಾಸ್ ಮತ್ತು ಹೆಚ್.ಎನ್.ಯೋಗೆಶ್ ಒಂದೇ ದಿನ ನಾಮಪತ್ರ ಸಲ್ಲಿಸಿ, ಕೊನೆಯ ಹಂತದಲ್ಲಿ ಶ್ರೀನಿವಾಸ್ ರವರು ನಾಮಪತ್ರ ಹಿಂತೆಗೆದುಕೊಂಡು, ಯೋಗೇಶ್ ಗೆ ಕ್ಷೇತ್ರ ಬಿಟ್ಟುಕೊಡುತ್ತಾರೆ ಎನ್ನಲಾಗುತ್ತಿದೆ. ಆದರೆ ಇನ್ನು ಒಂಡೆರಡು ದಿನಗಳಲ್ಲಿ ಮಂಡ್ಯ ಕ್ಷೇತ್ರದ ದಳಪತಿಯಾರಗಲಿದ್ಧಾರೆ ಎಂಬುದಕ್ಕೆ ಉತ್ತರ ದೊರೆಯಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!