Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿಧಾನಸಭೆ ಚುನಾವಣೆ | ಮಂಡ್ಯ ಜಿಲ್ಲೆಯಲ್ಲಿ ಇಂದು 26 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023 ರ ಮಂಡ್ಯ ಜಿಲ್ಲಾ ವ್ಯಾಪ್ತಿಯ 07 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು (ಏ.18) 26 ಅಭ್ಯರ್ಥಿಗಳಿಂದ 31 ನಾಮಪತ್ರಗಳು ಸಲ್ಲಿಕೆಯಾಗಿವೆ.

ಅಭ್ಯರ್ಥಿಗಳ ವಿವರ 

ಮಳವಳ್ಳಿ
ಅನ್ನದಾನಿ ಸಿ – ಪಕ್ಷೇತರ (1 ನಾಮಪತ್ರ) , ಡಾ. ಕೆ. ಅನ್ನದಾನಿ – ಜನತಾದಳ (ಜಾತ್ಯಾತೀತ) (2 ನಾಮಪತ್ರ), ಮಾಧವ್ ಕಿರಣ್ ಎಂ.ಎಸ್ – ಪಕ್ಷೇತರ 1, ಮೋಹನ್ ಕುಮಾರ್ ಎಂ.ಎಲ್- ಪಕ್ಷೇತರ 1, ಬಿ.ಸಿ ಮಹದೇವಸ್ವಾಮಿ – ಆಮ್ ಆದ್ಮಿ ಪಕ್ಷ 1, ಎಂ.ಎಸ್ ಶರತ್‌ಚಂದ್ರ – ಪಕ್ಷೇತರ 1

ಮದ್ದೂರು
ಉದಯ ಕೆ.ಎಂ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 1, ಆನಂದ – ಆಮ್ ಆದ್ಮಿ ಪಕ್ಷ 1, ಮಂಜುಳ ಆಮ್ ಆದ್ಮಿ ಪಕ್ಷ 1.

ಮೇಲುಕೋಟೆ
ಸಿ ಎಸ್ ಪುಟ್ಟರಾಜು ಜನತಾದಳ (ಜಾತ್ಯಾತೀತ) 1

ಮಂಡ್ಯ
ಲೋಲ – ಪಕ್ಷೇತರ 1, ಕೆ.ಪಿ ಆನಂದ – ಪಕ್ಷೇತರ 1, ಬೊಮ್ಮಯ್ಯ – ಆಮ್ ಆದ್ಮಿ ಪಕ್ಷ 1, ಎಸ್ ಜೆ ಅಶೋಕ್ – ಭಾರತೀಯ ಜನತಾ ಪಾರ್ಟಿ 1, ಸಿ ಎಂ ಕೃಷ್ಣ- ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ 1.

ಶ್ರೀರಂಗಪಟ್ಟಣ
ಬಸವರಾಜ ಪಕ್ಷೇತರ 1, ಎ ಎಸ್ ರವೀಂದ್ರ ಕರ್ನಾಟಕ ಜನತಾ ದಳ(ಜಾತ್ಯಾತೀತ) 3, ವೆಂಕಟೇಶ ಟಿ ಎಸ್ ಪಕ್ಷೇತರ 1.

ನಾಗಮಂಗಲ
ಶ್ರೀನಿವಾಸ ಎನ್ ವಿ – ಉತ್ತಮ ಪ್ರಜಾಕೀಯ ಪಾರ್ಟಿ 1, ಬಿ ಎಂ ಮಲ್ಲಿಕಾರ್ಜುನ ಪಕ್ಷೇತರ 1, ಸುರೇಶ್‌ಗೌಡ ಜನತಾದಳ (ಜಾತ್ಯಾತೀತ) 1, ಸುಧಾ ಶಿವರಾಮೇಗೌಡ – ಭಾರತೀಯ ಜನತಾ ಪಾರ್ಟಿ 2, ಎನ್ ಎಸ್ ಅಶೋಕ – ಪಕ್ಷೇತರ 1

ಕೆ.ಆರ್ ಪೇಟೆ
ವಿಜಯರಾಮು.ಹೆಚ್.ಜೆ – ಉತ್ತಮ ಪ್ರಜಾಕೀಯ ಪಾರ್ಟಿ 1, ಹೆಚ್.ಟಿ ಮಂಜು ಜನತಾದಳ (ಜಾತ್ಯಾತೀತ) 2, ಬಿ ಎಲ್ ದೇವರಾಜ – ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ 1 ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನಾಂಕವಾಗಿದ್ದು, ನಾಮಪತ್ರಗಳ ಪರಿಶೀಲನೆ ಏಪ್ರಿಲ್ 21 ರಂದು ನಡೆಯಲಿದೆ. ಉಮೇದುವಾರಿಕೆಯನ್ನು ಹಿಂಪಡೆಯಲು ಏಪ್ರಿಲ್ 24 ಕೊನೆಯ ದಿನಾಂಕವಾಗಿದ್ದು ಮತದಾನವು ಮೇ 10 ರಂದು ನಡೆಯಲಿದ್ದು, ಮತ ಎಣಿಕೆಯು ಮೇ 13 ರಂದು ನಡೆಯಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!