ಮಂಡ್ಯ ಜಿಲ್ಲಾ ತೋಟದ ಬೆಳೆಗಾರರ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಳವಳ್ಳಿ ತಾಲೂಕಿನ ಡಿ.ಕೃಷ್ಣೇಗೌಡ ಹಾಗೂ ಮದ್ದೂರು ತಾಲೂಕಿನ ಕೆ ಕಾಳಯ್ಯ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ನೂತನ ಅಧ್ಯಕ್ಷ ಡಿ.ಕೃಷ್ಣೇಗೌಡ ಮಾತನಾಡಿ, ಸಂಸ್ಥೆಯ ಎಲ್ಲಾ ನಿರ್ದೇಶಕ ಒಮ್ಮತದಿಂದ ನನ್ನನ್ನು ಸಂಘದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದಕ್ಕೆ ಸರ್ವರಿಗೂ ಧನ್ಯವಾದಗಳನ್ನು ತಿಳಿಸುತ್ತಾ, ಇದಕ್ಕೆ ಪ್ರತ್ಯಕ್ಷ – ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಹಾಪ್ ಕಾಮ್ಸ್ ಅನ್ನು ಮಾದರಿ ಸಂಘವಾಗಿ ರೂಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಜಿಲ್ಲೆಯಾದ್ಯಂತ ಮತ್ತಷ್ಟು ಹಾಪ್ ಕಾಮ್ಸ್ ಮಾರಾಟ ಮಳಿಗೆಗಳನ್ನು ತೆರೆಯುವ ಮೂಲಕ ರೈತರ ತೋಟಗಾರಿಕೆ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಖರೀದಿಸಿ ತಾಜಾ ಹಾಗೂ ನಿಖರ ತೂಕ ಕರಾರುವಕ್ಕಾದ ಬೆಲೆಯಲ್ಲಿ ಗ್ರಾಹಕರಿಗೆ ದೊರಕುವಂತೆ ಮಾಡುವುದರ ಜೊತೆಗೆ, ನೌಕರರಿಗೆ ಉತ್ತಮ ಸೌಲಭ್ಯ ನೀಡಲು ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಕೆ.ಜೆ.ತಮ್ಮಣ್ಣ, ಎಸ್.ನಾಗೇಂದ್ರ, ಬಿ.ಎಸ್. ರಾಮಚಂದ್ರು, ಕೆ. ಎನ್. ಕೃಷ್ಣೇಗೌಡ, ಯು.ಸಿ.ಶೇಖರ್, ಎಸ್.ಬಿ.ಸಿದ್ದರಾಮೇಗೌಡ, ಜಯರಾಮ ನಾಯಕ್, ಕೆ.ಮಹೇಶ್ ಬಿ, . ಪುಟ್ಟಬಸವೇಗೌಡ, ಪುಟ್ಟಲಿಂಗಮ್ಮ, ಇಂದ್ರಮ್ಮ, ವ್ಯವಸ್ಥಾಪಕ ನಿರ್ದೇಶಕ ಸಂಪತ್ ಕುಮಾರ್, ಮನ್ ಮುಲ್ ನಿರ್ದೇಶಕ ಉಮ್ಮಡಹಳ್ಳಿ ಯು. ಸಿ. ಶಿವಪ್ಪ, ಕಾಡೇನಹಳ್ಳಿ ಕೆ.ರಾಮಚಂದ್ರು, ಮಂಡ್ಯ ಸಹಕಾರ ಯೂನಿಯನ್ ಅಧ್ಯಕ್ಷ ಸುಂದ್ರಪ್ಪ ಉಪಸ್ಥಿತರಿದ್ದರು. ಸಹಕಾರ ಇಲಾಖೆಯ ಮಾರಾಟಾಧಿಕಾರಿ ಸುಧಾಕರ್ ಚುನಾವಣಾಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸಿದರು.




