Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲೆಯ 4 ಕ್ಷೇತ್ರಗಳಲ್ಲಿ 8 ನಾಮಪತ್ರಗಳು ತಿರಸ್ಕೃತ

ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಳಾದ ಮಳವಳ್ಳಿ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ 8 ನಾಮಪತ್ರಗಳು ತಿರಸ್ಕೃತಗೊಂಡಿವೆ. ಆದರೆ ಇನ್ನಿತರೆ ಮೂರು ಕ್ಷೇತ್ರಗಳಾದ ಕೆ.ಆರ್.ಪೇಟೆ, ನಾಗಮಂಗಲ ಹಾಗೂ ಮೇಲುಕೋಟೆ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ತಿರಸ್ಕೃತವಾಗಿಲ್ಲ.

ಮಳವಳ್ಳಿ ವಿಧಾನಸಭಾ ಕ್ಷೇತ್ರ
ಹೆಚ್ ಕೆ ಕೃಷ್ಣ – ಕರುನಾಡು ಪಾರ್ಟಿ-1 ನಾಮಪತ್ರ, ಆರ್ ನಾಗೇಶ್ – ಪಕ್ಷೇತರ-1 ನಾಮಪತ್ರ ಮತ್ತು ನಾಗರಾಜಮೂರ್ತಿ ಸಿ.ಎಂ– ಭಾರತೀಯ ಬೆಳಕು ಪಾರ್ಟಿ ಇವರು ಸಲ್ಲಿಸಿರುವ 2 ನಾಮಪತ್ರದಲ್ಲಿ 1 ನಾಮಪತ್ರ ತಿರಸ್ಕೃತವಾಗಿದೆ. ಒಟ್ಟು 3 ನಾಮಪತ್ರಗಳು ತಿರಸ್ಕೃತವಾಗಿರುತ್ತದೆ.

ಮದ್ದೂರು ವಿಧಾನಸಭಾ ಕ್ಷೇತ್ರ
ಮಂಜುಳ-ಆಮ್ ಆದ್ಮಿ ಪಕ್ಷ-1 ನಾಮಪತ್ರ, ಎನ್ ಸಿ ಪುಟ್ಟರಾಜು-ಪಕ್ಷೇತರ-1 ನಾಮಪತ್ರ ಮತ್ತು ನದೀಂ ಬೇಗ್-ಪಕ್ಷೇತರ-1 ನಾಮಪತ್ರ ತಿರಸ್ಕೃತವಾಗಿದೆ. ಒಟ್ಟು 03 ನಾಮತ್ರಗಳು ತಿರಸ್ಕೃತವಾಗಿರುತ್ತವೆ.

ಮಂಡ್ಯ ವಿಧಾನಸಭಾ ಕ್ಷೇತ್ರ
ಪುಟ್ಟಸ್ವಾಮಿ – ಆಮ್ ಆದ್ಮಿ ಪಕ್ಷ-1 ನಾಮಪತ್ರ ತಿರಸ್ಕೃತವಾಗಿದೆ. 1 ನಾಮಪತ್ರ ತಿರಸ್ಕೃತವಾಗಿರುತ್ತದೆ.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ
ಪುಷ್ಪ ಬಿ – ಆಮ್ ಆದ್ಮಿ ಪಕ್ಷ-1 ನಾಮಪತ್ರ ತಿರಸ್ಕೃತವಾಗಿದೆ. 1 ನಾಮಪತ್ರ ತಿರಸ್ಕೃತವಾಗಿದೆ.

ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 112 ಅಭ್ಯರ್ಥಿಗಳ 173 ನಾಮಪತ್ರಗಳು ಕ್ರಮ ಬದ್ಧವಾಗಿವೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ