ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಳಾದ ಮಳವಳ್ಳಿ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ 8 ನಾಮಪತ್ರಗಳು ತಿರಸ್ಕೃತಗೊಂಡಿವೆ. ಆದರೆ ಇನ್ನಿತರೆ ಮೂರು ಕ್ಷೇತ್ರಗಳಾದ ಕೆ.ಆರ್.ಪೇಟೆ, ನಾಗಮಂಗಲ ಹಾಗೂ ಮೇಲುಕೋಟೆ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ತಿರಸ್ಕೃತವಾಗಿಲ್ಲ.
ಮಳವಳ್ಳಿ ವಿಧಾನಸಭಾ ಕ್ಷೇತ್ರ
ಹೆಚ್ ಕೆ ಕೃಷ್ಣ – ಕರುನಾಡು ಪಾರ್ಟಿ-1 ನಾಮಪತ್ರ, ಆರ್ ನಾಗೇಶ್ – ಪಕ್ಷೇತರ-1 ನಾಮಪತ್ರ ಮತ್ತು ನಾಗರಾಜಮೂರ್ತಿ ಸಿ.ಎಂ– ಭಾರತೀಯ ಬೆಳಕು ಪಾರ್ಟಿ ಇವರು ಸಲ್ಲಿಸಿರುವ 2 ನಾಮಪತ್ರದಲ್ಲಿ 1 ನಾಮಪತ್ರ ತಿರಸ್ಕೃತವಾಗಿದೆ. ಒಟ್ಟು 3 ನಾಮಪತ್ರಗಳು ತಿರಸ್ಕೃತವಾಗಿರುತ್ತದೆ.
ಮದ್ದೂರು ವಿಧಾನಸಭಾ ಕ್ಷೇತ್ರ
ಮಂಜುಳ-ಆಮ್ ಆದ್ಮಿ ಪಕ್ಷ-1 ನಾಮಪತ್ರ, ಎನ್ ಸಿ ಪುಟ್ಟರಾಜು-ಪಕ್ಷೇತರ-1 ನಾಮಪತ್ರ ಮತ್ತು ನದೀಂ ಬೇಗ್-ಪಕ್ಷೇತರ-1 ನಾಮಪತ್ರ ತಿರಸ್ಕೃತವಾಗಿದೆ. ಒಟ್ಟು 03 ನಾಮತ್ರಗಳು ತಿರಸ್ಕೃತವಾಗಿರುತ್ತವೆ.
ಮಂಡ್ಯ ವಿಧಾನಸಭಾ ಕ್ಷೇತ್ರ
ಪುಟ್ಟಸ್ವಾಮಿ – ಆಮ್ ಆದ್ಮಿ ಪಕ್ಷ-1 ನಾಮಪತ್ರ ತಿರಸ್ಕೃತವಾಗಿದೆ. 1 ನಾಮಪತ್ರ ತಿರಸ್ಕೃತವಾಗಿರುತ್ತದೆ.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ
ಪುಷ್ಪ ಬಿ – ಆಮ್ ಆದ್ಮಿ ಪಕ್ಷ-1 ನಾಮಪತ್ರ ತಿರಸ್ಕೃತವಾಗಿದೆ. 1 ನಾಮಪತ್ರ ತಿರಸ್ಕೃತವಾಗಿದೆ.
ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 112 ಅಭ್ಯರ್ಥಿಗಳ 173 ನಾಮಪತ್ರಗಳು ಕ್ರಮ ಬದ್ಧವಾಗಿವೆ.




