Friday, November 20, 2026

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಗೆಲ್ಲಿಸುವ ಮೂಲಕ ಜನಸೇವೆಗೆ ಅವಕಾಶ ನೀಡಿ – ಕದಲೂರು ಉದಯ್

ವರದಿ : ಪ್ರಭು. ವಿ.ಎಸ್.

ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿದ್ದು ಪಕ್ಷವು ಅಧಿಕಾರಕ್ಕೆ ಬರಲಿದ್ದು ಇದನ್ನರಿತು ಮದ್ದೂರು ಕ್ಷೇತ್ರದಿಂದ ತಮ್ಮನ್ನು ಆಯ್ಕೆ ಮಾಡುವ ಮೂಲಕ ತಮ್ಮಗಳ ಸೇವೆಗೆ ಅವಕಾಶ ಕಲ್ಪಿಸಬೇಕೆಂದು ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕದಲೂರು ಉದಯ್ ತಿಳಿಸಿದರು.

ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಗೊಲ್ಲರದೊಡ್ಡಿ ಜುಂಜಪ್ಪ ದೇವಾಲಯದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರೊಡನೆ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.

ಕಳೆದ 20 ವರ್ಷಗಳಿಂದಲೂ ಮದ್ದೂರು ಕ್ಷೇತ್ರ ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನೆಡೆ ಅನುಭವಿಸಿದ್ದು, ಅಧಿಕಾರ ನಡೆಸಿದ ನಿರ್ಲಕ್ಷ್ಯ ಧೋರಣೆಯಿಂದಾಗಿ ಹಲವು ಕಾಮಗಾರಿಗಳು ಕುಂಠಿತಗೊಳ್ಳಲು ಕಾರಣವಾಗಿದೆ ಎಂದರು.

ಹಲವು ವರ್ಷಗಳಿಂದಲೂ ಅಧಿಕಾರದಲ್ಲಿದ್ದರೂ ಸ್ಥಳೀಯರಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದು ಸರ್ಕಾರ ಅನುದಾನಗಳನ್ನು ಮಾತ್ರ ಬಳಕೆ ಮಾಡಿಕೊಂಡರೇ ಹೊರತು ಮತ ನೀಡಿದ ಜನರಿಗೆ ಯಾವುದೇ ಸೌಲಭ್ಯಗಳನ್ನು ನೀಡಿಲ್ಲವೆಂದು ದೂರಿದರು.

ಕಾಂಗ್ರೆಸ್ ಪಕ್ಷವು ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಅಧಿಕಾರ ಪಕ್ಷದ ಪಾಲಾಗಲಿದ್ದು ಎಲ್ಲಾ ಯೋಜನೆಗಳನ್ನು ಜಾರಿಗೊಳಿಸುವ ಜತೆಗೆ ತಾವೂ ಸಹ ಕ್ಷೇತ್ರದ ಅಭಿವೃದ್ಧಿಗೆ ಹಿರಿಯರ ಜತೆಗೂಡಿ ಶ್ರಮಿಸುವುದಾಗಿ ತಮ್ಮನ್ನು ಆಶೀರ್ವದಿಸುವಂತೆ ಮನವಿ ಮಾಡಿದರು.

ಶಾಸಕ ಮಧು.ಜಿ.ಮಾದೇಗೌಡ ಮಾತನಾಡಿ, ಮಳೆಯಾಶ್ರಿತ ಪ್ರದೇಶವಾಗಿದ್ದ ಆತಗೂರು ಹೋಬಳಿಯು ಪ್ರಸ್ತುತ ದಿನಗಳಲ್ಲೂ ನೀರಾವರಿ ಸೌಲಭ್ಯದಿಂದ ವಂಚಿತವಾಗಿದ್ದು ಸ್ಥಳೀಯರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳ ಪೂರೈಕೆಗಾಗಿ ಕೆ.ಎಂ. ಉದಯ್ ಅವರನ್ನು ಚುನಾಯಿಸಿ ತಾವೂ ಸೇರಿದಂತೆ ದಿನೇಶ್‌ಗೂಳೀಗೌಡ ಜತೆಗೂಡಿ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಮಾಜಿ ಶಾಸಕ ಬಿ. ರಾಮಕೃಷ್ಣ, ಜಿಲ್ಲಾ ಎಸ್‌ಸಿ, ಎಸ್‌ಟಿ ಘಟಕದ ಅಧ್ಯಕ್ಷ ಸುರೇಶ್‌ಕಂಠಿ, ಮೈಷುಗರ್ ಮಾಜಿ ನಿರ್ದೇಶಕ ಹೊಂಬಯ್ಯ ಮತ್ತಿತರರು ಮಾತನಾಡಿದರು.

ಮದ್ದೂರು ತಾಲೂಕಿನ ಮಲ್ಲನಕುಪ್ಪೆ, ಚಾಕನಕೆರೆ, ಸಿದ್ಧೇಗೌಡನದೊಡ್ಡಿ, ಛತ್ರಲಿಂಗನದೊಡ್ಡಿ, ಮಲ್ಲನಾಯಕನಹಳ್ಳಿ, ಲಿಂಗಸಂದ್ರ, ಕುಂದನಕುಪ್ಪೆ, ಹರಕನಹಳ್ಳಿ, ಅಂಕನಾಥಪುರ, ನವಿಲೆ, ಬ್ಯಾಲದಕೆರೆ, ಹೆಬ್ಬೆರಳು ಇನ್ನಿತರೆ ಗ್ರಾಮಗಳಿಗೆ ತೆರೆದ ವಾಹನದ ಮೂಲಕ ತೆರಳಿ ಬಿರುಸಿನ ಮತಪ್ರಚಾರ ಕೈಗೊಂಡರು.
ಗ್ರಾಮಕ್ಕೆ ಆಗಮಿಸಿದ ಅಭ್ಯರ್ಥಿ ಕದಲೂರು ಉದಯ್ ಅವರನ್ನು ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿ ಅಭಿನಂದನೆ ಸಲ್ಲಿಸಿದರು.

ಈ ವೇಳೆ ಕೆಪಿಸಿಸಿ ಸದಸ್ಯ ಕದಲೂರು ರಾಮಕೃಷ್ಣ, ತಾ.ಪಂ.ಮಾಜಿ ಸದಸ್ಯ ಕೆ.ಆರ್.ಮಹೇಶ್, ಆರ್.ಕೆ. ವಿದ್ಯಾಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿನಯ್‌ ರಾಮಕೃಷ್ಣ, ಸ್ಥಳೀಯ ಮುಖಂಡರಾದ ಕೆ.ಟಿ.ರಾಜಣ್ಣ, ಬಿಳಿಯಪ್ಪ, ತಿಮ್ಮಣ್ಣ, ಶ್ರೀನಿವಾಸ್, ರವಿ, ಚಾಕನಕೆರೆ ಕುಮಾರ್, ಗಿರಿಯಪ್ಪ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ