Sunday, May 19, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಕೆಪಿಟಿಸಿಎಲ್-ಎಸ್ಕಾಂ ನೌಕರರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

ಕೆ.ಆರ್.ಪೇಟೆ ಪಟ್ಟಣದ ಶಂಕರ್ ಸ್ಪೋಟ್ಸ್ ಅಕಾಡೆಮಿಯ ಒಳ ಕ್ರೀಡಾಂಗಣದಲ್ಲಿ ಪವರ್ ವಾರಿರ‍್ಸ್ ಕೆ.ಆರ್.ಪೇಟೆ ಇವರ ವತಿಯಿಂದ ರಾಜ್ಯ ಮಟ್ಟದ ಕೆಪಿಟಿಸಿಎಲ್ ಮತ್ತು ಎಸ್ಕಾಂ ಅಧಿಕಾರಿಗಳು ಮತ್ತು ನೌಕರರಿಗಾಗಿ ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಚಾಮುಂಡೇಶ್ವರಿ ಕಪ್-2023ರ  ಪಂದ್ಯಾವಳಿಗಳು ನಡೆದವು.

ಶಾಸಕ ಹೆಚ್.ಟಿ.ಮಂಜುಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಸದೃಢ ದೇಹ ಹಾಗೂ ಚೈತನ್ಯಶೀಲ ಆರೋಗ್ಯಕ್ಕಾಗಿ ಕ್ರೀಡೆಗಳು ಮನುಷ್ಯನಿಗೆ ಅಗತ್ಯಗತ್ಯವಾಗಿದೆ. ಸದಾ ಕಚೇರಿ ಕೆಲಸ, ವಿದ್ಯುತ್ ಮಾರ್ಗದ ದುರಸ್ತಿ ಕೆಲಸ, ಟಿ.ಸಿ ಅಳವಡಿಸುವುದು, ಹೊಸ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸೇರಿದಂತೆ ಜನಸಾಮಾನ್ಯರಿಗೆ ಅತ್ಯುತ್ತಮ ಸೇವೆ ನೀಡಲು ಪ್ರಾಮಾಣಿಕ ಮಾಡುತ್ತಿರುವ ವಿದ್ಯುತ್ ಇಲಾಖೆಯ ನೌಕರರಿಗೆ ಕ್ರೀಡೆ ಅವಶ್ಯಕ ಎಂದರು.

ಕೆ.ಆರ್.ಪೇಟೆ ತಾಲ್ಲೂಕು ಘಟಕದ ವಿದ್ಯುತ್ ಇಲಾಖೆ ಪವರ್ ವಾರಿರ‍್ಸ್ ತಂಡವು ರಾಜ್ಯ ಮಟ್ಟದ ಕ್ರೀಡಾಕೂಡ ಆಯೋಜಿಸಿರುವುದು ಶ್ಲಾಘನೀಯ. ಕ್ರೀಡೆಗಳಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಒಂದಲ್ಲ. ಒಂದು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಶಾಸಕರಾದ ಹೆಚ್.ಟಿ.ಮಂಜು ಸಲಹೆ ನೀಡಿದರತು.

ಪುರುಷ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಬೇಲೂರು ತಾಲ್ಲೂಕು ವಿದ್ಯುತ್ ನೌಕರರು ಪಡೆದುಕೊಂಡರು. ಮಂಗಳೂರು ತಂಡವು ಎರಡನೇ ಬಹುಮಾನ ಪಡೆಯಿತು. ಮಂಡ್ಯ ತಂಡವು ಮೂರನೇ ಬಹುಮಾನ ಪಡೆದರೆ, ಶಿರಸಿ ತಾಲ್ಲೂಕು ತಂಡವು ನಾಲ್ಕನೇ ಬಹುಮಾನ ಪಡೆಯಿತು.

ಮಹಿಳಾ ವಿಭಾಗದಲ್ಲಿ ಚಿತ್ರದುರ್ಗ ಪ್ರಥಮ ಬಹುಮಾನ ಪಡೆದರೆ, ತಿಪಟೂರು ತಂಡ ದ್ವೀತೀಯ ಬಹುಮಾನ ಪಡೆಯಿತು.

ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್, ಆರ್.ಟಿ.ಓ ಮಲ್ಲಿಕಾರ್ಜುನ್, ಶಂಕರ್ ಸ್ಪೋಟ್ಸ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಕೆ.ಟಿ.ಶಂಕರ್, ತಾಲ್ಲೂಕು ಚೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ವಿನೂತ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜಶೇಖರಮೂರ್ತಿ, ಮಂಡ್ಯ ಅಧೀಕ್ಷಕ ಇಂಜಿನಿಯರ್ ಬಿ.ಕೃಷ್ಣಮೂರ್ತಿ, ಲೆಕ್ಕಾಧಿಕಾರಿಗಳಾದ ಮಹದೇವಪ್ಪ, ಆರ್.ರಘು, ಸತೀಶ್, ಹರೀಶ್, ಶಿವಕುಮಾರ್, ಮನುಕುಮಾರ್, ಕೆ.ರಘು, ರವೀಂದ್ರಕುಮಾರ್ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!