ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗಣಿಗ ರವಿಕುಮಾರ್ ಒಟ್ಟು 60,845 ಮತಗಳನ್ನು ರೋಚಕ ಗೆಲುವು ದಾಖಲಿಸಿದ್ದಾರೆ. ಅಂತಿಮವಾಗಿ 1,849 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ.
ಹಲವು ಸುತ್ತುಗಳು ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ನ ರವಿ ಕುಮಾರ್ ಹಾಗೂ ಜೆಡಿಎಸ್ ನ ಬಿ.ಆರ್.ರಾಮಚಂದ್ರು ಅವರ ನಡುವೆ ಹಾವು ಏಣಿ ಆಟವೇ ನಡೆಯಿತು. ಒಂದು ಭಾರಿ ಜೆಡಿಎಸ್ ಮುನ್ನಡೆ ಸಾಧಿಸಿದರೆ, ಮತ್ತೊಂದು ಭಾರಿ ಜೆಡಿಸ್ ಮುನ್ನಡೆ ಸಾಧಿಸುತ್ತಿದ್ದು, ಅಂತಿಮವಾಗಿ ಕಾಂಗ್ರೆಸ್ ಗೆಲವು ದಾಖಲಿಸಿದೆ.

ಜೆಡಿಎಸ್ ನ ಬಿ.ಆರ್.ರಾಮಚಂದ್ರು 58,996 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಇನ್ನು ಬಿಜೆಪಿಯ ಅಶೋಕ್ ಜಯರಾಂ 30,240 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.




