Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಅಂತರಾಷ್ಟ್ರೀಯ ಟೀ ದಿನ ಆಚರಣೆ

ಆಹ್ಲಾದ ನೀಡುವ ಚಹಾ ಇಲ್ಲದೆ ದಿನಚರಿಯೇ ಶುರುವಾಗದು ಎಂದು ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ. ಡೇವಿಡ್ ಹೇಳಿದರು.

ಮಂಡ್ಯ ನಗರದ ಸುಭಾಷ್ ನಗರದಲ್ಲಿರುವ ಟೀ ಡೇ ಆವರಣದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಹಾಗೂ ಕೃಷಿಕ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ಅಂತರಾಷ್ಟ್ರೀಯ ಟಿ ದಿನಾಚರಣೆ ಅಂಗವಾಗಿ ಉಚಿತ ಟೀ ವಿತರಣೆ ಕಾರ್ಯ ಹಾಗೂ ಟೀ ಕಾರ್ಮಿಕರಿಗೆ ಅಭಿನಂದನಾ ಸಮಾರಂಭದಲ್ಲಿ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.

ಬಹುತೇಕರ ಜೀವನದಲ್ಲಿ ಚಹಾಕ್ಕೆ ಮಹತ್ವದ ಸ್ಥಾನವೇ ಇದೆ. ಚಹಾ ಇಲ್ಲದೆ ಹಲವರ ದಿನಚರಿಯೇ ಶುರುವಾಗದು, ಮಾನಸಿಕ ಉಲ್ಲಾಸ ಮತ್ತು ಅನಗತ್ಯ ವೇಳೆಯ ನಿದ್ದೆ ತೊಲಗಿಸಲು, ಒತ್ತಡದಿಂದ ಅಹ್ಲಾದದೆಡೆಗೆ ಸಾಗಲು ಟೀ ಪಾನಿಯಕ್ಕೆ ಮೊರೆಯೋಗುವುದು ಸಾಮಾನ್ಯ ಸಂಗತಿಯಾಗಿದೆ ಎಂದು ನುಡಿದರು.

nudikarnataka.com

ಚೀನಾದ ಬಳಿಕ ಭಾರತ ಅತೀ ಹೆಚ್ಚು ಚಹಾ ಉತ್ಪಾದಿಸುವ ದೇಶವಾಗಿ ಹೊರಹೊಮ್ಮಿದೆ. ಅಸ್ಸಾಂ, ಡಾರ್ಜಿಲಿಂಗ್, ಕರ್ನಾಟಕ ಹೀಗೆ ದೇಶದ ಪ್ರಮುಖ ರಾಜ್ಯಗಳು ಟೀ ಉತ್ಪಾದನೆಯಲ್ಲಿ ವಿಶ್ವದ ಗಮನ ಸೆಳೆದಿವೆ, ಟೀ ಆರೋಗ್ಯಕ್ಕೂ ಒಳ್ಳೆಯದು ಎಂಬ ನಂಬಿಕೆ ಇದೆ. ಟೀ ಕುಡಿಯುವುದರಿಂದ ನಮ್ಮ ದೇಹವನ್ನು ಹೈಡ್ರೇಡೆಡ್ ಆಗಿಡಬಹುದು. ಜೊತೆಗೆ, ಇದರಿಂದ ಚರ್ಮ, ಕೂದಲು, ಚಯಾಪಚಯ ಕ್ರಿಯೆಗಳಿಗೂ ಲಾಭವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಟೀ ಕುಡಿಯುವ ಮೂಲಕ ಟೀ ಪ್ರಿಯರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಟೀ ಕಾರ್ಮಿಕರಾದ ಮಧ್ಯಪ್ರದೇಶದ ಅರವಿಂದ್ , ಸಿದ್ದರಾಜು ಇವರನ್ನು ಗಣ್ಯರು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಸಕ್ಕರೆ ನಾಡು ಲೈವ್ ಸಂಸ್ಥೆಯ ಅಧ್ಯಕ್ಷ ಶಶಿಧರ್ ಈಚೆಗೆರೆ, ಪ್ರೊಫೆಸರ್ ಜೋಗಿಗೌಡ ಪ್ರೊಫೆಸರ್ ಭವ್ಯ, ಪ್ರೊಫೆಸರ್ ಸಹನಾ , ಕೃಷಿಕ ಲಯನ್ ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್, ನಂದ ಕಿಶೋರ್ ವೇದಮೂರ್ತಿ, ನಿತಿನ್ ಗೌಡ, ಶಶಾಂಕ್ ಹಾಗು ಟೀ ಪಾನಿಯ ಪ್ರಿಯರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!