Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮನ್’ಮುಲ್ ಹಾಲು‌-ನೀರು‌ ಹಗರಣ ಸಿಬಿಐಗೆ : ರಘುನಂದನ್ ಸ್ವಾಗತ

ಮಂಡ್ಯದ ಮನ್’ಮುಲ್ ಹಾಲು‌-ನೀರು‌ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವ ನಿರ್ಧಾರ ಸ್ವಾಗತಾರ್ಹ ಎಂದು ಮನ್’ಮುಲ್ ಪ್ರಭಾರ ಅಧ್ಯಕ್ಷ ರಘುನಂದನ್ ಹೇಳಿದರು.

ಮಂಡ್ಯ ನಗರದ ಮನ್’ಮುಲ್ ಉಪ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ನೂತನ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ಬಳಿಕ ಸಿಬಿಐ ತನಿಖೆಗೆ ವಹಿಸಲಾಗುವುದು ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ್ದೇನೆ. ಯಾವುದೇ ತನಿಖಾ ಸಂಸ್ಥೆ ಮೇಲೆ ವಿಶ್ವಾಸವಿಡಬೇಕು. ಹಿಂದಿನ ಬಿಜೆಪಿ ಸರ್ಕಾರ ಸಿಐಡಿ ತನಿಖೆಗೆ ವಹಿಸಿ‌ 3 ಬಾರಿ ಮದ್ದೂರು ನ್ಯಾಯಾಲಯಕ್ಕೆ ಚಾಜ್೯ ಶೀಟ್ ಸಲ್ಲಿಸಲಾಗಿದೆ. ಅದರ ಮೇಲೆ ಸದ್ಯದ ಸರ್ಕಾರಕ್ಕೆ ವಿಶ್ವಾಸವಿಲ್ಲ, ಸಿಬಿಐಗೆ ವಹಿಸುವುದಾದರೆ ಅಕ್ಷೇಪವಿಲ್ಲ ಎಂದರು.

ನಮ್ಮ ಆಡಳಿತ ಮಂಡಳಿ ಪರಿಶ್ರಮದಿಂದಲೇ ಹಾಲು ನೀರು ಹಗರಣ ಬೆಳಕಿಗೆ ಬಂದಿದೆ. ಆಡಳಿತ ಮಂಡಳಿ ಸಭೆಯಲ್ಲಿ‌ ನಿರ್ಣಯ ಕೈಗೊಂಡಿದ್ದು, ಅ ಹಿನ್ನಲೆಯಲ್ಲಿ 2 ವರ್ಷ ತನಿಖೆ ನಡೆಸಿ ಮದ್ದೂರು ಜೆಎಂಎಫ್’ಸಿ ನ್ಯಾಯಾಲಯದಲ್ಲಿ ಚಾಜ್೯ಶೀಟ್ ಸಲ್ಲಿಕೆಯಾಗಿದೆ ಎಂದರು. ಮುಂದೆ ನ್ಯಾಯಲಯದಲ್ಲಿ ವಿಚಾರಣೆ ನಡೆಯಲಿದೆ ಎಂದರು.

ಮೆಗಾ ಡೇರಿ ನಿರ್ಮಾಣದಲ್ಲಿ 72 ಕೋಟಿ ಅವ್ಯವಹಾರ ನಡೆದಿರುವ ಸಂಬಂಧ ಪ್ರಕರಣ ನ್ಯಾಯಾಲಯದ ಹಂತದಲ್ಲಿದ್ದು, ಸರ್ಕಾರ ಅದನ್ನು ಪೂರ್ಣಗೊಳಿಸಿ ರೈತರ ಏಳಿಗೆಗೆ ಸಹಕರಿಸಲಿ‌ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ