Wednesday, July 24, 2024

ಪ್ರಾಯೋಗಿಕ ಆವೃತ್ತಿ

ಸಿಎಂ ಸಿದ್ದರಾಮಯ್ಯ ಸಂಪುಟ ಸೇರಿದ ಇನ್ನು 24 ಸಚಿವರು ; ಮಂಡ್ಯದ ಚಲುವರಾಯಸ್ವಾಮಿಗೆ ಒಲಿದ ಮಂತ್ರಿಗಿರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟಕ್ಕೆ ಶನಿವಾರ 24 ಸಚಿವರು ಸೇರ್ಪಡೆಯಾಗಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ರಾಜ್ಯಪಾಲ ತಾವರ್ ಚಂದ್  ಗೆಹ್ಲೋಟ್ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ 8 ಮಂದಿ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಈಗ 24 ಮಂದಿ ಸೇರಿ ಒಟ್ಟು ಸಚಿವರ 32ಕ್ಕೆ ಏರಿಕೆಯಾದಂತಾಗಿದೆ. ಎಲ್ಲ ಸಚಿವರಿಗೆ ಸದ್ಯದಲ್ಲೇ ಖಾತೆಗಳ ಹಂಚಿಕೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಪ್ರಮಾಣ ವಚನ ಸ್ವೀಕರಿಸಿದ ಸಚಿವರು

ಹೆಚ್.ಕೆ.ಪಾಟೀಲ್​​​​
ಕೃಷ್ಣ ಭೈರೇಗೌಡ
ಚಲುವರಾಯಸ್ವಾಮಿ
ಪಿರಿಯಾಪಟ್ಟಣ ವೆಂಕಟೇಶ್​
ಡಾ.ಹೆಚ್.ಸಿ.ಮಹದೇವಪ್ಪ
ಈಶ್ವರ ಖಂಡ್ರೆ
ಕೆ.ಎನ್.ರಾಜಣ್ಣ
ದಿನೇಶ್ ಗುಂಡೂರಾವ್ಶ
ರಣಬಸಪ್ಪ ದರ್ಶನಾಪುರ
ಶಿವಾನಂದ ಪಾಟೀಲ್
ಆರ್.ಬಿ.ತಿಮ್ಮಾಪುರ
ಎಸ್.ಎಸ್.ಮಲ್ಲಿಕಾರ್ಜುನ
ಶಿವರಾಜ ತಂಗಡಗಿ
ಡಾ.ಶರಣ ಪ್ರಕಾಶ್ ಪಾಟೀಲ್​​​
ಮಂಕಾಳು ವೈದ್ಯ
ಲಕ್ಷ್ಮೀ ಹೆಬ್ಬಾಳ್ಕರ್​
ರಹೀಂ ಖಾನ್​​
ಡಿ.ಸುಧಾಕರ್​​
ಸಂತೋಷ್ ಲಾಡ್​
ಬೋಸರಾಜು
ಭೈರತಿ ಸುರೇಶ್
ಮಧು ಬಂಗಾರಪ್ಪ
ಎಂ.ಸಿ.ಸುಧಾಕರ್
ನಾಗೇಂದ್ರ

ಮಂಡ್ಯ ಜಿಲ್ಲೆಯಿಂದ ಏಕೈಕ ಸಚಿವರಾಗಿ ಆಯ್ಕೆಯಾಗಿರುವ ಎನ್.ಚಲುವರಾಯಸ್ವಾಮಿ ಅವರ ಸ್ವ  ವಿವರ

ಹೆಸರು: ಎನ್.ಚಲುವರಾಯಸ್ವಾಮಿ.
ತಂದೆ ಹೆಸರು: ಲೇ.ನರಸಿಂಹೇಗೌಡ.
ತಾಯಿ ಹೆಸರು: ಸಾಕಮ್ಮ
ಜನ್ಮದಿನಾಂಕ: 01-06-1960
ಪತ್ನಿ ಹೆಸರು: ಧನಲಕ್ಷ್ಮಿ
ಮಕ್ಕಳ ಹೆಸರು: ಸಚಿನ್ ಗೌಡ,ಮತ್ತು ಸಂಜಯ್ ಗೌಡ
ವಿಳಾಸ:ಎನ್.ಚಲುವರಾಯಸ್ವಾಮಿ ಬಿನ್.ಲೇ.ನರಸಿಂಹೇಗೌಡ
ಇಜ್ಜಲಘಟ್ಟ ಗ್ರಾಮ
ಬ್ರಹ್ಮದೇವರಹಳ್ಳಿ ಅಂಚೆ
ಹೊಣಕೆರೆ ಹೋಬಳಿ.ನಾಗಮಂಗಲ ತಾಲ್ಲೂಕು. ಮಂಡ್ಯ ಜಿಲ್ಲೆ

ಇವರ ಸಹೋದರರು 5
ಸಹೋದರಿಯರು.3
ಒಟ್ಟು 8 ಜನ ಇವರೇ ಕೊನೆಯವರು
ಇವರ ವಿಧ್ಯಾಭ್ಯಾಸ: ಪ್ರಾಥಮಿಕ ಶಿಕ್ಷಣ ಇಜ್ಜಲಘಟ್ಟ
ಮಾಧ್ಯಮಿಕ ಶಿಕ್ಷಣ ಬ್ರಹ್ಮದೇವರಹಳ್ಳಿ.
ಪ್ರೌಢ ಶಿಕ್ಷಣ ಸಿದ್ದಗಂಗಾ ಪ್ರೌಢಶಾಲೆ.ತುಮಕೂರು.

ವೃತ್ತಿ ವ್ಯಾಸಂಗ:ಡಿಪ್ಲೋಮೋ. ಸರ್ಕಾರಿ ಪಾಲಿಟೆಕ್ನಿಕ್.ಕೆ.ಆರ್.ಪೇಟೆ.ಮಂಡ್ಯ ಜಿಲ್ಲೆ.

ಇವರ ಸಾಧನೆ

1) 1991 ರಲ್ಲಿ – ವೃತ್ತಿ ಗುತ್ತಿಗೆದಾರರಾಗಿ ಪ್ರವೇಶ.

2) ಗಂಗಾಧರಮೂರ್ತಿ ಕೊಲೆ ಪ್ರಕರಣ ಖಂಡಿಸಿ ರಾಜಕೀಯ ಪ್ರವೇಶ

3) 1994 ರಲ್ಲಿ ನಾಗಮಂಗಲ ತಾಲ್ಲೂಕಿನ ಚೀಣ್ಯ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಜಿಪಂ ಸದಸ್ಯರಾಗಿ ರಾಜಕೀಯ ಆರಂಭ

4) 1996 ರಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಗಮನ ಸೆಳೆಯುವಂತೆ ಕೆಲಸ

5) 1999 ರಲ್ಲಿ ಪ್ರಥಮ ಭಾರಿಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆ.

6) 2004 ರಲ್ಲಿ ಎರಡನೇ ಭಾರಿಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿ ಜನತಾದಳ ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಪ್ರಥಮ ಭಾರಿಗೆ ಆರೋಗ್ಯ ಮಂತ್ರಿಯಾಗಿ ಸಚಿವ ಸಂಪುಟ ಪ್ರವೇಶ ಹಾಗೂ ನಾಗಮಂಗಲ ತಾಲ್ಲೂಕಿಗೆ 21 ವರ್ಷಗಳ ನಂತರ ಸಚಿವ ಸ್ಥಾನ ಲಭ್ಯ.

7) 2006 ರಲ್ಲಿ ಜನತಾದಳ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಾರಿಗೆ ಮಂತ್ರಿಯಾಗಿ ಸಂಪುಟ ಪ್ರವೇಶ.

8) 2009 ರಲ್ಲಿ ಪ್ರಥಮ ಭಾರಿಗೆ ನಾಗಮಂಗಲ ತಾಲ್ಲೂಕು ಇತಿಹಾಸದಲ್ಲೇ ಮಂಡ್ಯ ಜಿಲ್ಲೆಯಿಂದ ಲೋಕಸಭೆಯ ಸಂಸತ್ ಸದಸ್ಯರಾಗಿ ಆಯ್ಕೆ.

9) 2013 ರಲ್ಲಿ ಮೂರನೇ ಭಾರಿಗೆ ವಿಧಾನ ಸಭೆಯ ಸದಸ್ಯರಾಗಿ ದಾಖಲೆ.

10) 2023 ರಲ್ಲಿ ನಾಲ್ಕನೇ ಭಾರಿಗೆ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗುವ ಜೊತೆಗೆ . ಮಂಡ್ಯ ಜಿಲ್ಲೆಯ 7 ವಿಧಾನ ಸಭೆ ಕ್ಷೇತ್ರಗಳಲ್ಲಿ 6 ಸ್ಥಾನ ಗೆಲ್ಲಿಸಿಕೊಂಡಿರುವ ಜನನಾಯಕ.

ಈ ಹಿಂದೆ ನಡೆದ ಎರಡು ಎಂ ಎಲ್ ಸಿ ಚುನಾವಣೆಯಲ್ಲಿ ದಿನೇಶ್ ಗೂಳಿಗೌಡ ಮತ್ತು ಮಧು ಜಿ.ಮಾದೇಗೌಡ ರನ್ನು ಗೆಲ್ಲಿಸಿಕೊಂಡು ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಭದ್ರ ಬೂನಾದಿ ಹಾಕಿರುವ ಚಾಣಕ್ಯ ಎಂದೇ ಹೆಸರು ಗಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!