Tuesday, November 24, 2026

ಪ್ರಾಯೋಗಿಕ ಆವೃತ್ತಿ

ಐಪಿಎಲ್ ಬೆಟ್ಟಿಂಗ್ ಆಯೋಜಕರ ವಿರುದ್ದ ಕ್ರಮಕೈಗೊಳ್ಳಲು ಒತ್ತಾಯ : ಆಶಯ್ ಮಧುಮಾದೇಗೌಡ

ಐಪಿಎಲ್ ಬೆಟ್ಟಿಂಗ್ ಆಯೋಜಕರನ್ನು ಪತ್ತೆಹಚ್ಚಿ, ಕ್ರಮಕೈಗೊಳ್ಳುವ ಜೊತೆಗೆ ಕಡಿವಾಣ ಹಾಕಲು ಮುಂದಾಗಬೇಕೆಂದು ಪೊಲೀಸ್ ಇಲಾಖೆಯನ್ನು ಕಾಂಗ್ರೆಸ್ ಮುಖಂಡ ಆಶಯ್ ಮಧುಮಾದೇಗೌಡ ಒತ್ತಾಯಿಸಿದ್ದಾರೆ.

ಐಪಿಎಲ್ ಬೆಟ್ಟಿಂಗ್ ವಿಚಾರವಾಗಿ ಮದ್ದೂರು ತಾಲ್ಲೂಕು ಬೋರಾಪುರ ಬಳಿ ಕೊಲೆಯಾದ ಚಿಕ್ಕರಸಿನಕೆರೆ ಗ್ರಾಮದ ಪುನೀತ್ ಮನೆಗೆ ಸೋಮವಾರ ಸಂಜೆ ಕಾಂಗ್ರೆಸ್ ಮುಖಂಡ ಆಶಯ್ ಮಧುಮಾದೇಗೌಡ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.

ಈ ಸಂದರ್ಭದಲ್ಲಿ ಆಶಯ್ ಮಧುಮಾದೇಗೌಡ ಮಾತನಾಡಿ, ಚಿಕ್ಕರಸಿನಕೆರೆ ಹೋಬಳಿ ಶೈಕ್ಷಣಿಕ ಕ್ಷೇತ್ರವಾಗಿದ್ದು, ದಿವಂಗತ ಜಿ.ಮಾದೇಗೌಡರು ಈ ಭಾಗ ಕುಗ್ರಾಮವಾಗಿದ್ದ ಸಂದರ್ಭದಲ್ಲಿ ವಿದ್ಯಾಸಂಸ್ಥೆ ತೆರೆದು ಶೈಕ್ಷಣಿಕ ತಾಣವನ್ನಾಗಿ ಮಾಡಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು  ವಿದ್ಯಾಭ್ಯಾಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಇಂತಹ ಐಪಿಎಲ್ ಬಿಟ್ಟಿಂಗ್ ಹಾಗೂ ಮಾದಕ ವಸ್ತುಗಳಿಂದ  ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ. ಹಾಗಾಗಿ ಐಪಿಎಲ್ ಬೆಟ್ಟಿಂಗ್ ಆಯೋಜಕರನ್ನ ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಮತ್ತು ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಇಂತಹ ಕೊಲೆಗಳು ಹೆಚ್ಚಾಗುತ್ತವೆ. ಈ ಐಪಿಎಲ್ ದಂಧೆ ಹಿಂದೆ ದೊಡ್ಡ ಜಾಲವೇ ಇದೆ. ಇದನ್ನು ಪತ್ತೆ ಹಚ್ಚಿ ದಂಧೆಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳಬೇಕು ಎಂದರು. ನಮ್ಮ ತಂದೆ ಮಧು ಜಿ.ಮಾದೇಗೌಡ ಅವರು ಸಹ ವಿಧಾನ ಪರಿಷತ್ತಿನಲ್ಲಿ ಈ ಬಗ್ಗೆ  ಚರ್ಚೆ ಮಾಡಲ್ಲಿದ್ದಾರೆಂದು ಹೇಳಿದರು.

ಐಪಿಎಲ್ ಕ್ರಿಕೆಟ್ ಮ್ಯಾಚ್ ಪ್ರಾರಂಭವಾದಗೆಲ್ಲಾ ಇಂತಹ ಕೊಲೆಗಳು, ಒಡೆದಾಟ ಹೆಚ್ಚಾಗುತ್ತಲೇ ಇವೆ. ಕಳೆದ ವರ್ಷವು ಸಹ ಇದೇ ಚಿಕ್ಕರಸಿನಕೆರೆ ಗ್ರಾಮದಲ್ಲಿ ಕೊಲೆಯಾದಾಗ ಇದರ ಬಗ್ಗೆಯೂ ನಮ್ಮ ತಂದೆಯವರು ಕ್ರಮಕೈಗೊಳ್ಳಬೇಕೆಂದು ಪ್ರತಿಭಟಿಸಿದ್ದರು. ಆದರೂ ಸಹ ಇಂತಹ ಐಪಿಎಲ್ ಬೆಟ್ಟಿಂಗ್ ಆಯೋಜಕರ ಕಡಿವಾಣಕ್ಕೆ ಕ್ರಮಕೈಗೊಳ್ಳದಿರುವುದು ಬೇಸರ ತಂದಿದೆ ಎಂದರು.

ನಮ್ಮ ಮಗನ ಕೊಲೆಯ ಸಂಬಂಧವಾಗಿ ಈ ಐಪಿಎಲ್ ಬೆಟ್ಟಿಂಗ್ ಆಯೋಜಕರ ಪತ್ತೆಗೆ ಕ್ರಮಕೈಗೊಳ್ಳದಿದ್ದರೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕೊಲೆಯಾದ ಪುನೀತ್ ತಂದೆ ರಾಜೇಂದ್ರ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ತಂದೆ ರಾಜೇಂದ್ರ, ತಾಯಿ ವಸಂತ ಮತ್ತು ಸಹೋದರ ಅಜಿತ್ ಅವರಿಗೆ ಧೈರ್ಯ ತುಂಬಿ ಸಾಂತ್ವಾನ ಹೇಳಿದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ