ಕೆ.ಆರ್.ಪೇಟೆ ಪಟ್ಟಣದ ಕೆಎಸ್ಆರ್’ಟಿಸಿ ಬಸ್ ನಿಲ್ದಾಣದಲ್ಲಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿ, ಆಕೆಯನ್ನು ಸ್ಪರ್ಶಿಸಲು ಮುಂದಾದ ಕಾಮುಕನೊಬ್ಬನಿಗೆ ಯುವತಿಯೇ ಕತ್ತಿನ ಪಟ್ಟಿ ಹಿಡಿದು ಕೊಂಡು ಕಪಾಳ ಮೋಕ್ಷ ಮಾಡಿರುವ ಘಟನೆ ಶನಿವಾರ ಸಂಜೆ ನಡೆಸಿದೆ.
A woman beat her eve teaser at KR Pete bus stand in #Mandya. The lady was travelling in the local bus – the unidentified man was teasing her and tried to touch her inappropriately. Even after she warned- he continued to touch her (1/2) pic.twitter.com/69wEWFuTgZ
— Imran Khan (@KeypadGuerilla) June 3, 2023
“>
ಯುವತಿಯು ಸ್ಥಳೀಯ ಬಸ್ನಲ್ಲಿ ಪ್ರಯಾಣಿಸುತ್ತಿದ್ದಳು, ಅಪರಿಚಿತ ವ್ಯಕ್ತಿ ಅವಳನ್ನು ಚುಡಾಯಿಸುತ್ತಿದ್ದ ಮತ್ತು ಅನುಚಿತವಾಗಿ ಸ್ಪರ್ಶಿಸಲು ಪ್ರಯತ್ನಿಸಿದ. ಆಕೆ ಎಚ್ಚರಿಸಿದ ನಂತರವೂ, ಅವನು ಆಕೆಯನ್ನು ಮುಟ್ಟುವುದನ್ನು ಮುಂದುವರೆಸಿದ, ಇದರಿಂದ ಕುಪಿತಗೊಂಡ ಯುವತಿ ಆತನಿಗೆ ಕಪಾಳಮೋಕ್ಷ ಮಾಡಿದರು.
ಆದರೆ ಈ ಸಂದರ್ಭದಲ್ಲಿ ಬಸ್ಸಿನಲ್ಲಿದ್ದ ಯಾರೂ ಸಹ ಯುವತಿಯ ಸಹಾಯಕ್ಕೆ ಬರಲಿಲ್ಲ. ಇದರಿಂದ ಕಾಮುಕ ಯುವತಿಯಿಂದ ಬಿಡಿಸಿಕೊಂಡು ಓಡಿ ಹೋಗಿದ್ದಾನೆ. ಈ ಬಗ್ಗೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲವಾದರೂ ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.




