Wednesday, April 24, 2024

ಪ್ರಾಯೋಗಿಕ ಆವೃತ್ತಿ

ರೈತರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಸಂಘಟನೆ ಅತ್ಯವಶ್ಯಕ – ಜಿ.ಎ. ಶಂಕರ್

ವರದಿ : ಪ್ರಭು ವಿ ಎಸ್

ಪ್ರತಿ ಗ್ರಾಮಗಳಲ್ಲೂ ಗ್ರಾಮ ಘಟಕಗಳನ್ನು ರಚನೆ ಮಾಡಿ ಅನ್ಯಾಯ ವಿರುದ್ಧ ಧ್ವನಿ ಎತ್ತುವ ಜತೆಗೆ ರೈತ ಪರ ಹೋರಾಟಗಳ ಮೂಲಕ ನೊಂದ ರೈತರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಸಂಘಟನೆ ಅತ್ಯವಶ್ಯಕವಾಗಿದೆ ಎಂದು ಸಂಘಟನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ ಎ ಶಂಕರ್ ತಿಳಿಸಿದರು.

ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ರೈತ ಸಂಘಟನೆಯ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನ ಕೆಲ ಗ್ರಾಮಗಳಲ್ಲಿ ರೈತ ಸಂಘಟನೆಯ ಗ್ರಾಮ ಘಟಕಗಳನ್ನು ರಚನೆ ಮಾಡಿದ್ದು ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಗಳಲ್ಲಿಗ್ರಾಮ ಘಟಕಗಳನ್ನು ರಚನೆ ಮಾಡಿ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಜೊತೆಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು‌ ಗ್ರಾಮ ಘಟಕ ಸಹಕಾರಿಯಾಗಲಿದೆ ಎಂದರು.‌‌‌

ಮುಂದಿನ ತಾಪಂ ಹಾಗೂ‌ ಜಿ ಪಂ ಚುನಾವಣೆಯಲ್ಲಿ ಸಂಘಟನೆ ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕೇ ‌ ಅಥವಾ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆ ಎಂಬುದರ ಬಗ್ಗೆ ಕಾರ್ಯಕರ್ತರು ಚರ್ಚೆ ನಡೆಸಿದರು. ಸಂಘಟನೆಯ ನಿಲುವುಗಳ ವಿರುದ್ಧವಾಗಿ ಕೆಲ ವ್ಯಕ್ತಿಗಳು‌ ಕರ್ತವ್ಯ ನಿರ್ವಹಿಸುತ್ತಿದ್ದು ಕಾರ್ಯಕರ್ತರ ವಿರುದ್ಧ  ಶಿಸ್ತುಕ್ರಮ ಜರುಗಿಸಲು ಸಭೆ ತೀರ್ಮಾನಿಸಲಾಯಿತು. ‌‌‌ತಾಲೂಕಿನಲ್ಲಿ ‌ ಹಲವಾರು ಸ್ಥಳೀಯ ಸಮಸ್ಯೆಗಳಿದ್ದು ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ ವಹಿಸಿರುವ ಪರಿಣಾಮವಾಗಿ ಸಾರ್ವಜನಿಕರು ರೈತರು ಪ್ರತಿನಿತ್ಯ ಹಳೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಸಭೆ ವೇಳೆ ಒತ್ತಾಯಿಸಿದರು‌‌.

ಮಂಡ್ಯ ಹಾಲು ಒಕ್ಕೂಟದಲ್ಲಿ ನಡೆದಿರುವ 72 ಕೋಟಿ ರೂಗಳ ನಷ್ಟವನ್ನು ವಸೂಲಿ ‌ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದ್ದರೂ ಇದುವರೆಗೂ ಕ್ರಮ‌ ವಹಿಸದೆ ಆಡಳಿತ ಮಂಡಳಿ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದು ಕೂಡಲೇ ಆಡಳಿತ ಮಂಡಳಿಯನ್ನು‌ ರದ್ದುಗೊಳಿಸಬೇಕೆಂದರು‌‌‌‌ ಹಾಲು ನೀರು ‌ ಹಗರಣವನ್ನು ಸಿಬಿಐ ಗೆ ಒಳಪಡಿಸುಲು ನೂತನ ಸಚಿವರು ಸರ್ಕಾರಕ್ಕೆ ಶಿಫಾರಸು ‌ ಮಾಡುವಂತೆ ಆರೋಪಿಗಳಿಗೆ ಕಠಿಣ ಕಾನೂನು ಶಿಕ್ಷೆ ಗುರಿಪಡಿಸಬೇಕೆಂದರು‌.

‌‌‌‌‌ರೇಷ್ಮೆ ತೋಟಗಾರಿಕೆ ಇಲಾಖೆಗೆ ಸೇರಿದ ಆಸ್ತಿಗಳನ್ನು ಬೇರೆ ಬೇರೆ ಇಲಾಖೆಗೆ ವರ್ಗಾಯಿಸಿದ್ದು ಕೂಡಲೇ ರದ್ದುಪಡಿಸಿ ಮಾತೃ ಇಲಾಖೆಗೆ ನೀಡುವಂತೆ ಹಾಗೂ ಹಸಿರು ವಲಯದ ಆಸ್ತಿಗಳನ್ನು ಹಸಿರು ವಲಯದಲ್ಲಿ ಮುಂದುವರಿಸಬೇಕೆಂದರು‌‌‌‌  ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ರೈತರಿಗೆ ಅನುಕೂಲ ಕಲ್ಪಿಸಿ ಮತ್ತು ವಿ.ಸಿ ಫಾರಂ ನಲ್ಲಿ ಕಬ್ಬು ಅಭಿವೃದ್ಧಿ ತಳಿ ಸಂಶೋಧನಾ ಕೇಂದ್ರ ವಿದ್ದು ಕಾರ್ಮಿಕರ ಹಾಗೂ ಮೂಲ ಸೌಲಭ್ಯಗಳಿಂದ ಮುಂಚಿತವಾಗಿದ್ದು ಕೂಡಲೇ ಸರ್ಕಾರ ಅಗತ್ಯ ‌ ಸೌಲಭ್ಯ ಕಲ್ಪಿಸಬೇಕೆಂದರು.

‌ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ರೈತ ಯೋಜನೆಗಳನ್ನು ಜಾರಿಗೊಳಿಸಿ ಎಲ್ಲಾ ವರ್ಗದ ಜನರ ‌ ಅಭ್ಯುದಯಕ್ಕೆ ನಿ ರಂತರವಾಗಿ ಶ್ರಮಿಸಬೇಕೆಂದು ಮನವಿ ಮಾಡಿದರು.‌‌‌

ಸಭೆ ವೇಳೆ ತಾಲೂಕು ಅಧ್ಯಕ್ಷ ರಾಮಕೃಷ್ಣ ಪ್ರಧಾನ ಕಾರ್ಯದರ್ಶಿ ವಿನೋದ್ ಬಾಬು ಮುಖಂಡರಾದ ಲಿಂಗಪ್ಪಾಜಿ ಕೀಳಘಟ್ಟ ನಂಜುಂಡಯ್ಯ ವರದರಾಜು ರವಿಕುಮಾರ್ ಸಿದ್ದೇಗೌಡ ವೆಂಕಟೇಶ್ ಪುಟ್ಟಸ್ವಾಮಿ ರಮೇಶ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!