Wednesday, November 18, 2026

ಪ್ರಾಯೋಗಿಕ ಆವೃತ್ತಿ

”ಸ್ಲಂ ಬೋರ್ಡ್ ನಿವಾಸಿಗಳಿಗೆ ಲೈಟ್ ಹಾಕಿಲ್ಲ ಎಂಬ ದೂರಿದೆ, ಮೊದಲು ವ್ಯವಸ್ಥೆ ಮಾಡಿ” – ಶಾಸಕ ರವಿಕುಮಾರ್ ಸೂಚನೆ

ಮಂಡ್ಯ ನಗರದ ಹಾಲಹಳ್ಳಿ ಸ್ಲಂ ಬೋರ್ಡ್ ನಿವಾಸಿಗಳು ನಮಗಿನ್ನೂ ಲೈಟ್ ಬಂದಿಲ್ಲ, ನಮ್ಮ ಸ್ಲಂನಲ್ಲಿ ಲೈಟ್ ಹಾಕಿಲ್ಲ ಎಂದು ನನ್ನದೇ ವಿಡಿಯೋಗಳನ್ನು ಪ್ರತಿದಿನ ಹಾಕುತ್ತಿದ್ದಾರೆ. ಅಲ್ಲಿಗೆ ಮೊದಲು ಲೈಟ್ ವ್ಯವಸ್ಥೆ ಮಾಡಿ ಎಂದು ಶಾಸಕ ರವಿಕುಮಾರ್ ಗೌಡ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಮಂಡ್ಯ ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಮಂಡ್ಯದ ಹಾಲಹಳ್ಳಿ ಸ್ಲಂ ಬೋರ್ಡ್ ಗೆ ನಾನು ಚುನಾವಣೆಗೂ ಮುನ್ನ ಪ್ರಚಾರಕ್ಕೆ ಹೋಗಿದ್ದೆ.ಲೈಟ್ ಇಲ್ಲದ ಕಾರಣ ಕತ್ತಲಲ್ಲಿ ಭಾಷಣ ಮಾಡಿದ್ದೆ.ಆ ಸಂದರ್ಭದಲ್ಲಿ ನಾನು ಶಾಸಕನಾಗಿ ಆಯ್ಕೆಯಾದರೆ ಕೂಡಲೇ ಲೈಟ್ ವ್ಯವಸ್ಥೆ ಮಾಡುತ್ತೇನೆಂದು ಭರವಸೆ ಕೂಡಾ ನೀಡಿದ್ದೆ.ಶಾಸಕನಾದ ನಂತರ ಅಲ್ಲಿಯ ಜನರು ಪ್ರತಿದಿನ ನನ್ನದೇ ವೀಡಿಯೋವನ್ನು ನನಗೆ ವಾಟ್ಸಪ್ ಮಾಡಿ ಇನ್ನು ಲೈಟ್ ಬಂದಿಲ್ಲ, ಇನ್ನೂ ನಮಗೆ ಲೈಟ್ ಹಾಕಿಸಿಲ್ಲ ಎಂದು ಕೇಳುತ್ತಿದ್ದಾರೆ. ಮೊದಲು ಅಲ್ಲಿಯ ಜನರಿಗೆ ಲೈಟ್ ವ್ಯವಸ್ಥೆ ಮಾಡಿ ಎಂದು ನಗರಸಭೆ ಅಧಿಕಾರಿಗಳಿಗೆ ವಿಡಿಯೋ ತೋರಿಸಿ ಸೂಚಿಸಿದರು.

ನನ್ನ ಫ್ಲೆಕ್ಸ್ ಇದ್ರೂ ಕಿತ್ತು ಹಾಕಿ
ಮಂಡ್ಯ ನಗರದಲ್ಲಿ ಹಲವೆಡೆ ದೊಡ್ಡ ದೊಡ್ಡ ಹೋಲ್ಡಿಂಗ್ಸ್ ಗಳನ್ನು ಹಾಕಿದ್ದಾರೆ.ಕಾನೂನು ಪ್ರಕಾರ ಈ ಹೋಲ್ಡಿಂಗ್ಸ್ ಗಳನ್ನು ಹಾಕಿದ್ದಾರೆ ಪರವಾಗಿಲ್ಲ.ಕಾನೂನು ಪ್ರಕಾರ ಅನುಮತಿ ಪಡೆಯದಿದ್ದರೆ ಅಂತಹ ಹೋಲ್ಡಿಂಗ್ಸ್ ಮಾಲೀಕರಿಗೆ ಮೊದಲು ನೋಟಿಸ್ ಕೊಡಿ. ಒಂದು ವೇಳೆ ನನ್ನ ಫ್ಲೆಕ್ಸ್,ಹೋಲ್ಡಿಂಗ್ಸ್ ಹಾಕಿದ್ದರೂ ಕಿತ್ತು ಹಾಕಿ ಎಂದು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಆ ಮೂಲಕ ಇದರಿಂದ ಬರುವ ಆದಾಯವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ನಾನೇ ಅಡ್ಡ ಹಾಕ್ತೇನೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹನೆಕೆರೆ ಬಳಿ ಅಂಡರ್ ಪಾಸ್ ನಿರ್ಮಾಣ ಮಾಡದಿದ್ದರೆ ನಾನೇ ಜನರೊಂದಿಗೆ ಹೋಗಿ ವಾಹನಗಳಿಗೆ ಅಡ್ಡ ಹಾಕ್ತೇನೆ. ಚುನಾವಣೆಗೂ ಮುನ್ನ ನಾನು ಕೂಡ ಅಂಡರ್ ಪಾಸ್ ಗೆ ಆಗ್ರಹಿಸಿ ಧರಣಿ ಕುಳಿತಿದ್ದೆ. ಕೂಡಲೇ ಜನರಿಗೆ ಅಂಡರ್ ಪಾಸ್ ನಿರ್ಮಿಸಿ ಕೊಡಬೇಕು. ಈ ಬಗ್ಗೆ ತಕ್ಷಣ ಕಾರ್ಯ ಪ್ರವೃತ್ತರಾಗದಿದ್ದರೆ ಜನರ ಜೊತೆ ಕುಳಿತು ವಾಹನಗಳಿಗೆ ನಾನೇ ಅಡ್ಡ ಹಾಕ್ತೇನೆ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಜನರು ಸಾಯುತ್ತಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದ ಈ ಹೆದ್ದಾರಿ ಸಾವಿನ ಹೆದ್ದಾರಿಯಾಗಿದೆ ಎಂದು ಜನರೇ ಮಾತನಾಡುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಮೊದಲು ವೇಗ ನಿಯಂತ್ರಣ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ನೀವು ಮುಚ್ತೀರಾ…ಅವ್ರು ಅಗೀತಾರೆ
ನಗರಸಭೆ ಮತ್ತು ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ, ಮಧ್ಯೆ ಸಮನ್ವಯ ಇರಬೇಕು. ಪರಸ್ಪರ ಮಾತುಕತೆಯ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕು.ರಸ್ತೆ ಮಾಡಿದ ನಂತರ ನೀವು ಅಗೆದು ಒಳಚರಂಡಿ ಮಾಡ್ತೀರಾ, ಅವರು ಮಚ್ವಿದ ನಂತರ ಇವ್ರು ಅಗೀತಾರೆ.ಹಾಗಾಗಿ ನಗರಸಭೆ ಮತ್ತು ಕುಡಿಯುವ ನೀರು-ಒಳಚರಂಡಿ ಇಲಾಖೆ ನಡುವೆ ಪರಸ್ಪರ ಹೊಂದಾಣಿಕೆ ಇರಬೇಕೆಂದು ಶಾಸಕ ರವಿಕುಮಾರ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ