Monday, November 23, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ನಾಲೆಗೆ ಇಳಿದ ವಿದ್ಯಾರ್ಥಿನಿ ಸಾವು, ಮೂವರು ನಾಪತ್ತೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯಕೊಪ್ಪಲು ಸಮೀಪದ ಕಾವೇರಿ ಬೋರೇದೇವರ ದೇವಾಲಯದ ಸಮೀಪದ ರಾಮಸ್ವಾಮಿ ನಾಲೆಯಲ್ಲಿ ನೀರಾಟವಾಡಲು ಇಳಿದು ನಾಲ್ವರು ವಿದ್ಯಾರ್ಥಿಗಳ ಪೈಕಿ, ಓರ್ವ ವಿದ್ಯಾರ್ಥಿನಿ ಸಾವಿಗೀಡಾಗಿದ್ದು, ಮೂವರು ನಾಪತ್ತೆಯಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ.

ಮೈಸೂರಿನ ಶಾಂತಿನಗರದ ಆಯಿಷಾ ಅಫ್ರೀನ್ (14) ಮೃತಪಟ್ಟಿದ್ದು, ಅದೇ ಶಾಲೆಯ ತರ್ಬೀನ್ (13), ಅಮೀನಾ (13) ಮತ್ತು ಅನಿಷಾ (14) ಅವರ ಸುಳಿವು ಸಿಕ್ಕಿಲ್ಲ.

ಒಟ್ಟು 6 ವಿದ್ಯಾರ್ಥಿಗಳು ಆಟವಾಡಲು ನಾಲೆಗೆ ಇಳಿದಿದ್ದರು, ಈ  ಪೈಕಿ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ಧಾರೆ. ಇನ್ನೂ ಮೂವರು ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ