Wednesday, November 18, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ವಿನಾಶದ ಅಂಚಿನಲ್ಲಿ ಹಳ್ಳಿಕಾರ್ ಗೋ ತಳಿ – ಹೆಚ್.ಟಿ.ಮಂಜು

ಭಾರತದ ಗೋ ಪರಂಪರೆಯಲ್ಲಿ ವಿನಾಶದ ಅಂಚಿನಲ್ಲಿರುವ ತಳಿಗಳಲ್ಲಿ ಹಳ್ಳಿಕಾರ್ ಕೂಡ ಒಂದು. ಅಂತಹ ಪರಂಪರೆ ಉಳ್ಳ, ತಳಿಯ ಉಳಿಯುವಿಗಾಗಿ ಕೃಷಿಯಲ್ಲೇ ಅಭಿವೃದ್ಧಿ ಕಾಣುತ್ತಿರುವ ಗ್ರಾಮೀಣ ಯುವ ರೈತ ಗೋವರ್ಧನ್ ಚಿಂತನೆಗೆ ನಡೆಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.

ಕೆ.ಆರ್.ಪೇಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ಯುವರೈತ ಗೋವರ್ಧನ್ ಅವರ ಕುಶಾಲ ಹಳ್ಳಿಕಾರ್ ಫಾರಂ ಹೌಸ್ ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಕಾರ್ ತಳಿ ದನಗಳು ಈಗೀಗ ಕಣ್ಮರೆಯಾಗುತ್ತಿವೆ. ವ್ಯವಸಾಯದ ಕೆಲಸಗಳು ಯಾಂತ್ರಿಕವಾಗಿ ದನಗಳನ್ನು ವ್ಯವಸಾಯಕ್ಕಾಗಿ ಸಾಕುವ ಪ್ರವೃತ್ತಿ ಕಡಿಮೆಯಾಗುತ್ತಿದೆ ಎಂದರು.

ಸ್ಥಳೀಯ ವಾತಾವರಣ ಹಾಗೂ ಮೇವಿನ ಲಭ್ಯತೆಗೆ ಅನುಗುಣವಾಗಿ ಸಾವಿರಾರು ವರ್ಷಗಳಿಂದ ಸ್ವಾಭಾವಿಕವಾಗಿ ಬೆಳೆದ ದನಗಳ ತಳಿಗಳು ನಮ್ಮ ದೇಶದ ಗ್ರಾಮೀಣ ಆರ್ಥಿಕತೆಯ ಬೆನ್ನಲುಬಾಗಿವೆ. ಇವುಗಳನ್ನು ಸಾಕಲು ಬೇಕಾಗಿರುವ ಬಂಡವಾಳ ಕಡಿಮೆ. ಸ್ಥಳೀಯವಾಗಿ ಲಭ್ಯವಿರುವ ಮೇವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಸಹ ಇರುವುದರಿಂದ ಬಡಕುಟುಂಬದವರು ಕೂಡ ಸಾಕಿ ತಮ್ಮ ಕುಟುಂಬಕ್ಕೆ ಬೇಕಾಗಿರುವ ಉತ್ಕೃಷ್ಟವಾದ ಹಾಲನ್ನು ಪಡೆಯಬಹುದಾದ ಹಳ್ಳಿಕಾರ್ ತಳಿ ವಿನಾಶದ ಹಂಚಿನಲ್ಲಿದ್ದು ಹಾಲಿನ ಉತ್ಪಾದನೆಗಾಗಿ ಮಿಶ್ರತಳಿ ಹಸುಗಳನ್ನು ಸಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಇಂತಹ ಸಂದರ್ಭದಲ್ಲಿ ಕೃಷಿಯಲ್ಲಿ ಅಭಿವೃದ್ಧಿ ಕಾಣುತ್ತಾ ಉಳಿದ ಯುವಕರಿಗೂ ಮಾದರಿಯಾಗುವ ರೀತಿಯಲ್ಲಿ ಯುವ ರೈತ ಗೋವರ್ಧನ ಹಳ್ಳಿಕಾರ್ ತಳಿಯ ರಾಸುಗಳ ಉಳಿವಿಗಾಗಿ ತನ್ನ ಅಭಿವೃದ್ಧಿಗಾಗಿ ಈ ಯೋಚನೆಗೆ ಚಿಂತಿಸಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಚಂದ್ರಹಾಸ, ಸುಜಾತ,ಚಂದ್ರೆಗೌಡ,ರೈಸ್ ಮಿಲ್ ರಮೇಶ್,ಹೊಸಹೊಳಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲು, ಯುವ ಮುಖಂಡ ಅಜಯ್, ಗೌತಮ್, ಚನ್ನರಾಯಪಟ್ಟಣ ಅಕ್ಷಯ್, ಪವನ್, ಚೇತನ್, ವರದರಾಜು, ಅರುಣ್ ಕುಮಾರ್, ಕುಮಾರ್, ಮಂಜುನಾಥ್, ಯಾಕೂಬ್ ಪಾಷ, ಸುರೇಶ್, ಯೋಗ ಲಕ್ಷ್ಮಿ, ಜಮುನಾ, ಶಾಂತಮ್ಮ ಪೂರ್ಣಿಮಾ, ಸೇರಿದಂತೆ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ