Friday, October 18, 2024

ಪ್ರಾಯೋಗಿಕ ಆವೃತ್ತಿ

ಹಣದುಬ್ಬರ ತಡೆಯಲು RBI ವಿಫಲ ವಾಗುತ್ತಿರುವುದಕ್ಕೆ ಪ್ರಧಾನ ಕಾರಣವೇನು ?

✍️ ಶಿವಸುಂದರ್

ಇದು ಹೋದ ವರ್ಷ ಇದೆ ದಿನ ಹಾಕಿದ ಪೋಸ್ಟು….. ಈ ಸಂದರ್ಭದಲ್ಲಿ ಯಾವುದೇ ಬದಲಾವಣೆ ಇಲ್ಲವಾದ್ದರಿಂದ ಮತ್ತೆ ಹಂಚಿಕೊಳ್ಳಬೇಕೇನಿಸಿತು…..

ಜಸ್ಟ್ ಆಸ್ಕಿಂಗ್

“ಹಣದುಬ್ಬರವನ್ನು ತಡೆಯಲು RBI ವಿಫಲ ವಾಗುತ್ತಿರುವುದಕ್ಕೆ ಪ್ರಧಾನ ಕಾರಣ….ಅದು ಸ್ವತಂತ್ರ ಸಂಸ್ಥೆಯಾಗಿ ವರ್ತಿಸದೆ ಮೋದಿ ಸರ್ಕಾರದ ಅನುಚರನಾಗಿ ವರ್ತಿಸುತ್ತಿರುವುದು “

ಅರವಿಂದ್ ಸುಬ್ರಹ್ಮಣ್ಯಂ

(ಮೋದಿ ಸರ್ಕಾರದ ಮಾಜಿ ಪ್ರಧಾನ ಆರ್ಥಿಕ ಸಲಹೆಗಾರ 2014-18)

ಭಾರತದಲ್ಲಿ ಹಣದುಬ್ಬರ ದಿನೇದಿನೇ ಹೆಚ್ಚಾಗುತ್ತಿದೆ. ರೂಪಾಯಿ ಮೌಲ್ಯ ಐತಿಹಾಸಿಕ ಅಧಃಪತನದತ್ತ ಸಾಗುತ್ತಿದೆ. ನಿನ್ನೆ ಅದು ಒಂದು ಡಾಲರಿಗೆ 78.28 ರೂ. ಗೆ ಇಳಿದಿತ್ತು. ಇದರಿಂದ ಅಗತ್ಯ ವಸ್ತುಗಳ ಬೆಲೆ ಇನ್ನಷ್ಟು ಗಗನಮುಟ್ಟಿ ಭಾರತದ ಶ್ರೀ ಸಾಮಾನ್ಯರ ಅದರಲ್ಲೂ ಬಡವರ ಬದುಕು ಇನ್ನಷ್ಟು ದುಸ್ತರವಾಗುತ್ತಿದೆ…

ಈ ಬಗೆಯ ದುರಂತಗಳನ್ನು ತಡೆಯಲೆಂದೇ ಅದರಲ್ಲೂ ವಿಶೇಷವಾಗಿ ಹಣದುಬ್ಬರವನ್ನು ತಡೆಯಲೆಂದೇ Reserve Bank Of India (RBI) ಗೆ ವಿಶೇಷ ಹಾಗೂ ಸ್ವತಂತ್ರ ಸಾಂವಿಧಾನಿಕ ಜವಾಬ್ದಾರಿಯನ್ನು ಕೊಡಲಾಗಿದೆ.

ಆದರೆ RBI ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆಯೇ?

ಬಿಲ್ಕುಲ್ ಇಲ್ಲ ಎನ್ನುತ್ತಿರುವುದು ಯಾರೋ ಎಡಪಂಥೀಯ , ಮೋದಿ ನಿಂದಕ ಅರ್ಥಶಾಸ್ತ್ರಜ್ಞರಲ್ಲ.

ಬದಲಿಗೆ ಮೋದಿ ಸರ್ಕಾರಕ್ಕೆ 2014-18 ರ ವರೆಗೆ ಪ್ರಧಾನ ಆರ್ಥಿಕ ಸಲಹೆಗಾರ ರಾಗಿ ಕೆಲಸ ಮಾಡಿದ್ದ ಅರವಿಂದ್ ಸುಬ್ರಹ್ಮಣ್ಯಂ ಅವರು.

ಅವರು ಇಂದಿನ The Indian Express ಪತ್ರಿಕೆಯಲ್ಲಿ ” On Inflation, how the RBI failed, why it matters” ಎಂಬ ಶೀರ್ಷಿಕೆಯಲ್ಲಿ ಒಂದು ಸುದೀರ್ಘ ಲೇಖನ ಬರೆದಿದ್ದಾರೆ .

ಅದರಲ್ಲಿ ಅವರು RBI ನ ಸಾಂವಿಧಾನಿಕ ವೈಫಲ್ಯತೆಗೆ ಮುಂದಿಟ್ಟಿರುವ ಕಾರಣಗಳಿಷ್ಟು:

 ಮೋದಿ ಸರ್ಕಾರ ಬಂದ ಮೇಲೆ RBI ಒಂದು ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಭಾರತದ ಆರ್ಥಿಕತೆಯ ಹಣಕಾಸು ಶಿಸ್ತು , ನಿರ್ವಹಣೆ ಮತ್ತು ಹಣದುಬ್ಬರವನ್ನು ಸರಾಸರಿ ಶೇ. 4 ರ ಮಟ್ಟದಲ್ಲಿ ಉಳಿಸಿಕೊಳ್ಳ ಬೇಕಾದ ನಿರ್ದಾಕ್ಷಿಣ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಂವಿಧಾನ ಹೊರಿಸಿದ್ದ ಜವಾಬ್ದಾರಿಯನ್ನು ಮರೆತು, ಅದು ಮೋದಿ ಸರ್ಕಾರದ ತತ್ ಕ್ಷಣದ ಹಣಕಾಸು ಅಗತ್ಯಗಳನ್ನು ಪೂರೈಸುವುದರಲ್ಲಿ ಮಗ್ನವಾಗಿದೆ.

ಜಾಹೀರಾತು

ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಮಾರುಕಟ್ಟೆಯಲ್ಲಿ ವಿಶ್ವಾಸ ಉಳಿಸುವ ಸಲುವಾಗಿ ಶತಾಯ ಗತಾಯ ರೂಪಾಯಿ ಬೆಲೆ ಕುಸಿಯದಂತೆ ಮಾಡಲು ವಿದೇಶಿ ವಿನಿಮಯ ಸಂಗ್ರಹವನ್ನು ರೂಪಾಯಿ ಮರುಖರೀದಿಗೆ ವ್ಯಯಮಾಡುತ್ತಿದೆ.

ಹಣದುಬ್ಬರವು ೨೦೧೯ರಿಂದಲೇ ಕಾನೂನು ವಿಧಿಸಿದ ಮಟ್ಟವನ್ನು ಮೀರಿದ್ದರೂ ಆರ್ಬಿಐ ಮೋದಿ ಸರ್ಕಾರ ಬಯಸಿದಂತೆ ಅದನ್ನು ಕೇವಲ ತಾತ್ಕಾಲಿಕ ವಿದ್ಯಮಾನ ಎಂದು ಘೋಷಿಸುತ್ತ ಬಂದಿತು

ಅದರ ಬದಲಿಗೆ ಆಗಲೇ ಸೂಕ್ತ ಹಣಕಾಸು ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಹಣದುಬ್ಬರ ತಗ್ಗುತ್ತಿತ್ತು. ಆದರೆ ಆಗ ಭಾರತದಲ್ಲಿ ಹಣಕಾಸು ಹೂಡಿಕೆ ಆಕರ್ಷಕವಾಗಿ ಕಾಣದೆ ವಿದೇಶಿ ಷೇರು ಹೂಡಿಕೆದಾರರು ಭಾರತವನ್ನು ತೊರೆಯುತ್ತಿದ್ದರು. ಇದು ಮೋದಿ ಸರ್ಕಾರದ ಮೇಲೆ ಕೆಟ್ಟ ಟಿಪ್ಪಣಿ ಮಾಡಿದಂತಾಗುತ್ತಿತ್ತು. ಆದ್ದರಿಂದ ಆರ್ಬಿಐ ಅಂಥಾ ಕ್ರಮಗಳಿಗೆ ಮುಂದಾಗದೆ ಭಾರತದ ಶ್ರೀ ಸಾಮಾನ್ಯರು ಹೆಚ್ಚಿನ ಹಣದುಬ್ಬರವನ್ನು ಅನುಭವಿಸುವಂತೆ ಮಾಡಿತು.

ಇದರ ಜೊತೆಗೆ ಮೋದಿ ಸರ್ಕಾರಕ್ಕೆ ಹೆಚ್ಚಿನ ಮೊತ್ತದ ಡಿವಿಡೆಂಡ್ ಒದಗಿಸುವುದನ್ನು ತನ್ನ ಕರ್ತವ್ಯವನ್ನಾಗಿ ಭಾವಿಸಿದ RBI ಹಣದುಬ್ಬರ ತಡೆಯುವು ಕ್ರಮಗಳನ್ನು ಮುಂದೂಡಿತು.

ಆರ್ಬಿಐ ಗವರ್ನರ್ ತೆಗೆದುಕೊಂಡ ಈ ಎಲ್ಲಾ ಕ್ರಮಗಳಿಗೂ ಮಾನಿಟರಿ ಪಾಲ್ಸಿ ಕಮಿಟಿ (MPC)ಮತ್ತು ಅದಕ್ಕೆ ಸರ್ಕಾರ ನೇಮಿಸಿದ್ದ “ಸ್ವತಂತ್ರ ” ಅರ್ಥಶಾಸ್ತ್ರಜ್ಞರೂ ಸಂಪೂರ್ಣ ಒಪ್ಪಿಗೆ ಸೂಚಿಸುತ್ತಿದ್ದದ್ದು ಇನ್ನಷ್ಟು ಆಶ್ಚರ್ಯಕರ ಸಂಗತಿಯಾಗಿದೆ.

ಇವೆಲ್ಲವನ್ನು RBI ತನ್ನ ವಿವೇಕದಿಂದಲೇ ಮಾಡಿತೋ ಅಥವಾ ಮೋದಿ ಸರ್ಕಾರದ ಒತ್ತಡಕ್ಕೆ ಬಗ್ಗಿ ಮಾಡಿತೋ ಎಂಬುದು ಮತ್ತೊಂದು ಅಧ್ಯಯನದ ವಿಷಯವಾಗಬಹುದು.

ಆದರೆ RBI ನೀತಿಗಳು ದೇಶದ ಜನರಿಗಿಂತ ಮೋದಿ ಸರ್ಕಾರಕ್ಕೆ ಹಿತವಾಗಿ ನಡೆದುಕೊಂಡಿದೆ.

ಇದು RBI ನ ಸಾಂಸ್ಥಿಕ ವಿಶ್ವಾಸಾರ್ಹತೆ ಮತ್ತು ಸ್ವಾಯತ್ತತೆಯ ಬಗ್ಗೆ ತೀವ್ರವಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

RBI ನಂತ ಸಂಸ್ಥೆಗಳು ಸರ್ಕಾರದ ಮತ್ತೊಂದು ಅಂಗವಾಗಿಬಿಡಬಾರದು

…. ಎಂದು ಅವರು ತಮ್ಮ ಲೇಖನವನ್ನು ಮುಗಿಸುತ್ತಾರೆ.

ಆಸಕ್ತರು ಪೂರ್ತಿ ಲೇಖನವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು :
https://indianexpress.com/article/opinion/columns/on-inflation-how-the-rbi-failed-why-it-matters-7969756/

ಅಷ್ಟೇ ಬೇರೇನೂ ಇಲ್ಲ.

ಅದೃಷ್ಟಕ್ಕೆ ಅರವಿಂದ್ ಸುಬ್ರಹ್ಮಣ್ಯಂ ಅವರು ಬ್ರೌನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿ ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ.

ಇಲ್ಲದಿದ್ದರೆ ಅವರ ಮನೆಯ ಮುಂದೆಯೂ ಬುಲ್ಡೋಜರ್ ಹೋಗಿ ನಿಲ್ಲುತ್ತಿತ್ತು.

ಅಲ್ಲವೇ?

ಜಸ್ಟ್ ಆಸ್ಕಿಂಗ್

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!