Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | 34 ಗ್ರಾ.ಪಂ.ಗಳ ಅಧ್ಯಕ್ಷ – ಉಪಾಧ್ಯಕ್ಷರ ಮೀಸಲಾತಿ ನಿಗದಿ – ಇಲ್ಲಿದೆ ಸಂಪೂರ್ಣ ಮಾಹಿತಿ

ಕೆ.ಆರ್.ಪೇಟೆ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಎರಡನೇ ಅವಧಿಯ ಬಾಕಿ ಇರುವ 30 ತಿಂಗಳ ಅಧಿಕಾರಾವಧಿಗಾಗಿ ಮೀಸಲಾತಿ ಪ್ರಕ್ರಿಯೆಯು ಕೆ.ಆರ್.ಪೇಟೆ ಪಟ್ಟಣದ ಬಸವೇಶ್ವರ ಚಿತ್ರಮಂದಿರದಲ್ಲಿ ಶನಿವಾರ ಮಧ್ಯಾಹ್ನ ಯಶಸ್ವಿಯಾಗಿ ನಡೆಯಿತು.

ಮಂಡ್ಯ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ನಿಸರ್ಗಪ್ರಿಯ ಅವರ ನೇತೃತ್ವದಲ್ಲಿ ನಡೆದ ಮೀಸಲಾತಿ ನಿಗದಿಪಡಿಸುವ ಕಾರ‍್ಯಕ್ರಮದಲ್ಲಿ ತಾಲ್ಲೂಕಿನ 34 ಗ್ರಾ.ಪಂ.ಗಳಲ್ಲಿ ಪೈಕಿ ಶೇ.50 ಮಹಿಳೆಯರಿಗೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನವನ್ನು ಮೀಸಲಿರಿಸಿ ಗ್ರಾ.ಪಂ. ಸದಸ್ಯರ ಸಮಕ್ಷಮದಲ್ಲಿ ನಿಗಧಿಪಡಿಸಲಾಯಿತು.

ಯಾವ ಗ್ರಾ.ಪಂ.ನಲ್ಲಿ ಯಾರಿಗೆ ಮೀಸಲಾತಿ ?

  • ಅಗ್ರಹಾರಬಾಚಹಳ್ಳಿ ಗ್ರಾ.ಪಂ. ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ (ಎಸ್.ಸಿ. ಮಹಿಳೆ)
  • ಅಘಲಯ ಗ್ರಾ.ಪಂ. ಅಧ್ಯಕ್ಷ (ಎಸ್.ಸಿ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ)
  • ಅಕ್ಕಿಹೆಬ್ಬಾಳು ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ)
  • ಆಲಂಬಾಡಿಕಾವಲು ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ )
  • ಆನೆಗೋಳ ಅಧ್ಯಕ್ಷ (ಬಿ.ಸಿ.ಎಂ.ಎ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ )
  • ಬಳ್ಳೇಕೆರೆ ಅಧ್ಯಕ್ಷ (ಬಿ.ಸಿ.ಎಂ. ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ)
  • ಬಲ್ಲೇನಹಳ್ಳಿ ಅಧ್ಯಕ್ಷ (ಬಿ.ಸಿ.ಎಂ.ಎ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ)
  • ಬಂಡಿಹೊಳೆ ಅಧ್ಯಕ್ಷ (ಪ್ರವರ್ಗ -ಎ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ),
  • ಭಾರತೀಪುರ ಕ್ರಾಸ್ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ)
  • ಬೀರುವಳ್ಳಿ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಬಿ.ಸಿ.ಎಂ.ಎ)
  • ಬೂಕನಕೆರೆ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ )
  • ಚೌಡೇನಹಳ್ಳಿ ಅಧ್ಯಕ್ಷ (ಪ್ರವರ್ಗ -ಎ ಮಹಿಳೆ), ಉಪಾಧ್ಯಕ್ಷ (ಬಿಸಿಎಂ-ಬಿ)
  • ದಬ್ಬೇಘಟ್ಟ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಬಿ.ಸಿ.ಎಂ.ಮಹಿಳೆ)
  • ಗಂಜಿಗೆರೆ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಪ್ರವರ್ಗ -ಎ ಮಹಿಳೆ)
  • ಹರಳಹಳ್ಳಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಎಸ್.ಸಿ.ಮಹಿಳೆ)
  • ಹರಿಹರಪುರ ಅಧ್ಯಕ್ಷ(ಸಾಮಾನ್ಯ ಮಹಿಳೆ ), ಉಪಾಧ್ಯಕ್ಷ (ಬಿ.ಸಿ.ಎಂ.ಎ)
  • ಹಿರೀಕಳಲೆ ಅಧ್ಯಕ್ಷ (ಪ್ರವರ್ಗ -ಎ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ),
  • ಐಚನಹಳ್ಳಿ ಅಧ್ಯಕ್ಷ (ಎಸ್‍ಸಿ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ)
  • ಐಕನಹಳ್ಳಿ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ)
  • ಕಿಕ್ಕೇರಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಬಿ.ಸಿ.ಎಂ.ಮಹಿಳೆ)
  • ಲಕ್ಷ್ಮೀಪುರ ಅಧ್ಯಕ್ಷ ( ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪ.ಜಾ)
  • ಮಾಕವಳ್ಳಿ ಅಧ್ಯಕ್ಷ (ಎಸ್‍ಸಿ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ)
  • ಮಾದಾಪುರ ಅಧ್ಯಕ್ಷ (ಸಾಮಾನ್ಯ ), ಉಪಾಧ್ಯಕ್ಷ (ಬಿ.ಸಿ.ಎಂ. ಮಹಿಳೆ)Make a reservation
  • ಮಡುವಿನಕೋಡಿ ಅಧ್ಯಕ್ಷ (ಎಸ್.ಟಿ. ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ)
  • ಮಂದಗೆರೆ ಅಧ್ಯಕ್ಷ (ಬಿ.ಸಿ.ಎಂ.ಎ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ)
  • ಮುರುಕನಹಳ್ಳಿ ಅಧ್ಯಕ್ಷ( ಬಿಸಿಎಂ.ಬಿ), ಉಪಾಧ್ಯಕ್ಷ ( ಬಿ.ಸಿ.ಎಂ.ಎ)
  • ರಂಗನಾಥಪುರ ಕ್ರಾಸ್ ಅಧ್ಯಕ್ಷ (ಪ.ಜಾ. ಮಹಿಳೆ), ಉಪಾಧ್ಯಕ್ಷ (ಬಿ.ಸಿ.ಎಂ.ಬಿ.ಮಹಿಳೆ)
  • ಸಂತೇಬಾಚಹಳ್ಳಿ ಅಧ್ಯಕ್ಷ ( ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಎಸ್.ಟಿ.ಮಹಿಳೆ)
  • ಸಾರಂಗಿ ಅಧ್ಯಕ್ಷ( ಸಾಮಾನ್ಯ ಮಹಿಳೆ), ಉಪಾಧ್ಯಕ್ಷ ( ಸಾಮಾನ್ಯ)
  • ಶೀಳನೆರೆ ಅಧ್ಯಕ್ಷ ( ಎಸ್.ಸಿ), ಉಪಾಧ್ಯಕ್ಷ (ಬಿ.ಸಿ.ಎಂ.ಎ ಮಹಿಳೆ)
  • ಸಿಂಧುಘಟ್ಟ ಅಧ್ಯಕ್ಷ ( ಸಾಮಾನ್ಯ ಮಹಿಳೆ, ಉಪಾಧ್ಯಕ್ಷ (ಸಾಮಾನ್ಯ)
  • ಸೋಮನಹಳ್ಳಿ ಅಧ್ಯಕ್ಷ ( ಬಿ.ಸಿ.ಎಂ.ಬಿ ಮಹಿಳೆ), ಉಪಾಧ್ಯಕ್ಷ (ಬಿ.ಸಿ.ಎಂ.ಎ)
  • ತೆಂಡೇಕೆರೆ ಅಧ್ಯಕ್ಷ ( ಬಿ.ಸಿ.ಎಂ.ಎ), ಉಪಾಧ್ಯಕ್ಷ ( ಎಸ್.ಸಿ.ಮಹಿಳೆ),
  • ವಿಠಲಾಪುರ ಗ್ರಾ.ಪಂ.ಅಧ್ಯಕ್ಷ ( ಬಿ.ಸಿ.ಎಂ.ಎ), ಉಪಾಧ್ಯಕ್ಷ ( ಎಸ್.ಸಿ) 

ರಾಜ್ಯ ಚುನಾವಣಾ ಆಯೋಗವು ಅಭಿವೃದ್ದಿಪಡಿಸಿರುವ ತತ್ರಾಂಶದಲ್ಲಿ ಜಿಲ್ಲಾ ಪಂಚಾಯತ್ ರಾಷ್ಟ್ರೀಯ ಮಾಹಿತಿ ಕೇಂದ್ರದ ಮೂಲಕ 1993ರ ರಿಂದ 2020ರ ವರೆಗಿನ 9 ಅವಧಿಗಳಲ್ಲಿ ನಿಗಧಿಪಡಿಸಿರುವ ಮೀಸಲು ವಿವರಗಳನ್ನು ಅಪ್‌ಲೋಡ್ ಮಾಡಿ ರೋಸ್ಟರ್ ಪದ್ದತಿ ಅಡಿಯಲ್ಲಿ ಮೀಸಲಾತಿಯನ್ನು ಪ್ರಕಟಿಸಲಾಯಿತು.

ಮೀಸಲಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಗ್ರಾಮ ಪಂಚಾಯಿತಿಗಳು ನಿಗಧಿಯಾಗದ ಹಿನ್ನೆಲೆಯಲ್ಲಿ ಅಂತಹ ಗ್ರಾ.ಪಂ.ಗಳ ಮೀಸಲಾತಿಯನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಲಾಟರಿ ಮೂಲಕ ಆಯ್ಕೆ ಮಾಡಲು ಗ್ರಾ.ಪಂ.ಸದಸ್ಯರನ್ನು ಕರೆದು ಅವರ ಸಮಕ್ಷಮ ಚೀಟಿ ಬರೆದು ಖಾಲಿ ಬಾಕ್ಸ್ ಗೆ ಹಾಕಿ ಸದಸ್ಯರಿಂದ ಚೀಟಿ ತೆಗೆಸುವ ಮೂಲಕ ಪಾರದರ್ಶಕವಾಗಿ ಮೀಸಲಾತಿ ನಿಗದಿಪಡಿಸಲಾಯಿತು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಲಕ್ಷ್ಮೀ ಕಾಂತ್, ಚುನಾವಣಾ ಶಿರಸ್ತೇದಾರ್ ಹರೀಶ್, ರಾಜಸ್ವ ನಿರೀಕ್ಷಕರಾದ ಚಂದ್ರಕಲಾ ಪ್ರಕಾಶ್, ಹರೀಶ್, ಡಾ.ನ ರಸಿಂಹರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!