ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದಾಗ ವಿರೋಧಿಗಳು ಟೀಕೆ ಟಿಪ್ಪಣಿಗಳು ಮಾಡುವುದು ಸಾಮಾನ್ಯ ವಾಗಿರುತ್ತವೆ. ಅದನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಂಡು ಅದನ್ನು ಧೈರ್ಯವಾಗಿ ಎದುರಿಸಬೇಕೆಂದು ಶಾಸಕ ಹೆಚ್ .ಟಿ.ಮಂಜು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೆ.ಆರ್.ಪೇಟೆ ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಶ್ರೀಶಂಭುಲಿಂಗೇಶ್ವರ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮದ ಭಾಗವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಯಾವುದಾದರೂ ಒಂದು ಗುರಿಯನ್ನು ಇಟ್ಟುಕೊಂಡು ಶ್ರದ್ಧೆ, ಆಸಕ್ತಿ, ಬದ್ಧತೆಯಿಂದ ಶ್ರಮಿಸಿದಾಗ ಸಾಧನೆಯನ್ನು ಮಾಡಬಹುದು ಎಂಬುದಕ್ಕೆ ನಾನೇ ಸಾಕ್ಷಿ ಎಂದು ಹೇಳಿದರು.
ಹಳ್ಳಿಯ ಒಬ್ಬ ಸಾಮಾನ್ಯ ರೈತ ಕುಟುಂಬದಿಂದ ಬಂದ ನನ್ನನ್ನು ಶಾಸಕರಾಗಿ ಆಯ್ಕೆ ಮಾಡಿರುವುದು ಒಂದು ಉದಾಹರಣೆ. ನಾನು ಸಹ ಹಲವು ರೀತಿಯಲ್ಲಿ ಟೀಕೆಗಳನ್ನು ಎದುರಿಸಬೇಕಾಯಿತು. ಅವಮಾನವನ್ನು ಸಹಿಸಿದ್ದೇನೆ. ನಮ್ಮನ್ನು ಟೀಕೆ ಟಿಪ್ಪಣಿಗಳನ್ನು ಮಾಡಿದಾಗ ಬೇಸರಗೊಳ್ಳದೇ ಅದನ್ನು ಕ್ರೀಡಾ ಮನೋಭಾವನೆಯಿಂದ ತೆಗೆದುಕೊಂಡರೆ ನಾವು ಅದರಲ್ಲಿ ಜಯಗಳಿಸುವುದು ಶತಃಸಿದ್ದ ಎಂದು ಹೇಳಿದರು.
ಇದೇ ಸಮಯದಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ತ್ರಿವಳಿ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಎಸ್ ಧನಂಜಯಕುಮಾರ್, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಜಾನಕೀರಾಂ, ಕಾರಿಗನಹಳ್ಳಿ ಕುಮಾರ್ ,ರುದ್ರಪ್ಪ, ತೋಟಪ್ಪಶೆಟ್ಟಿ,ಕೆ ಮುರುಳೀಧರ್ ,ಗ್ರಾ.ಪಂ.ಸದಸ್ಯ ಸಿದ್ದೇಶ್, ಎಪಿಎಂಸಿ ಮಾಜಿ ಸದಸ್ಯ ಸೋಮಸುಂದರ್, ಬಸವಲಿಂಗಪ್ಪ, ಈರೇಗೌಡ, ಪುರಸಭೆ ಮಾಜಿ ಸದಸ್ಯ ಡಾ ಕೆ ಎಸ್ ರಾಜೇಶ್, ಹರಿಹರಪುರ ನರಸಿಂಹ, ಅಲಂಬಾಡಿಕಾವಲ್ ಚನ್ನಕೃಷ್ಣ, ನಾಟನಹಳ್ಳಿ ರಮೇಶ್, ಅಂಬೇಡ್ಕರ್ ನಗರ ಗಣೇಶ್, ಯೋಗೇಶ್ ಸೇರಿದಂತೆ ಇತರರು ಹಾಜರಿದ್ದರು.




