Sunday, November 22, 2026

ಪ್ರಾಯೋಗಿಕ ಆವೃತ್ತಿ

ಬದಲಾವಣೆಯ ಕಷಾಯ

✍️ ಗಿರೀಶ್ ತಾಳಿಕಟ್ಟೆ

ಹೆಣ್ಣು
ಉಚಿತ ಬಸ್ಸು
ಹತ್ತಿದಳು;
ಹೆಣ್ಣು
ಬಸ್ಸಿನ ಬಾಗಿಲು
ಮುರಿದಳು;
ಹೆಣ್ಣು
ಕಿಟಕಿಯ ಮೂಲಕ
ಬಸ್ಸಿನ
ಒಳ ತೂರಿದಳು;
ಹೆಣ್ಣು
ಡ್ರೈವರಿನ
ಸೀಟು ಮೇಲೆ
ಏರಿ ಕೂತಳು;
ಬಸ್ಸಿನೊಳು
ಸೀಟು ಸಿಗದ
ಹೆಣ್ಣು
ಸರ್ಕಾರವ
ನಿಂದಿಸಿದಳು;
ಒಬ್ಬ ಹೆಣ್ಣು
ಪರಪರ
ಮೈ ಕೆರೆದುಕೊಂಡಳು,
ಅದ ನೋಡಿ
ಮತ್ತೋರ್ವ ಹೆಣ್ಣು
ಅಸಹ್ಯ
ಪಟ್ಟುಕೊಂಡಳು….

ಅಬ್ಬಾ…!!
ಸಹಸ್ರ ಸಾವಿರ
ದಿನಗಳಿಂದ
ಮೂಲೆಯ
ಗುಂಪಾಗಿಸುತ್ತಲೇ
ಬಂದಿದ್ದ
ಹೆಣ್ಣಿನ ಜಪ
ಎಲ್ಲೆಲ್ಲೂ
ಮೊಳಗುತ್ತಿರುವುದ
ಕೇಳಲು
ಅಚ್ಚರಿಯೆನಿಸುಷ್ಟು
ಹಿತವಾಗುತ್ತಿದೆ!

ಒಡಕು
ದನಿಗಳೊಳಗಿರುವ
ಶಬ್ದಗಳ ಅಬ್ಬರಕೆ
ಕುಗ್ಗುವುದೇಕೆ?
ಆಶಯವು ನಮಗೆ
ಮುಖ್ಯವಾಗಿರುವಾಗ;
ಅಷ್ಟಕೂ,
ಬದಲಾವಣೆಯ
ಕಹಿ ಕಷಾಯಕೆ
ಮಂದಹಾಸದ
ಸ್ವಾಗತವು
ಎದುರುಗೊಳ್ಳುತ್ತದೆ
ಅಂದವರ್ಯಾರು?
ಮರಣವೇ ಮಹಾನವಮಿ
ಎಂದ ಶರಣರ
ಸಂಘರ್ಷವು
ಎಮಗೆ ಪಾಠವಾಗಿರುವಾಗ…!!!

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ