Wednesday, November 18, 2026

ಪ್ರಾಯೋಗಿಕ ಆವೃತ್ತಿ

ಅಸ್ವಸ್ಥನಿಗೆ ಕ್ಷೌರ, ಸ್ನಾನ ಮಾಡಿಸಿ ಮಾನವೀಯತೆ ಮೆರೆದ ಪೊಲೀಸರು !

ವರದಿ : ನಾಗಮ್ಮ ಗುಡಿಗೆರೆ

ಮದ್ದೂರು ತಾಲ್ಲೂಕು ಎಚ್.ಹೊಸಹಳ್ಳಿ ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿಗಳು ಮಾನಸಿಕ ಅಸ್ವಸ್ಥನಿಗೆ ಕ್ಷೌರ ಹಾಗೂ ಸ್ನಾನ ಮಾಡಿಸಿ, ಹೊಸ ಉಡುಪು ತೊಡಿಸಿ ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ.

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಪ್ರಭುಸ್ವಾಮಿ ಮತ್ತು ಪೇದೆ ಅರುಣ್ ಎಂಬುವವರೇ ಮಾನಸಿಕ ಅಸ್ವಸ್ಥನಿಗೆ ಕ್ಷೌರ ಮಾಡಿಸಿ ಹೊಸ ಉಡುಪು ತೊಡಿಸಿ ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ.

ಹೆಡ್ ಕಾನ್ಸ್ಟೇಬಲ್ ಪ್ರಭುಸ್ವಾಮಿ ಮತ್ತು ಪೇದೆ ಅರುಣ್ ಎಂಬುವವರು ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್.ಹೊಸಹಳ್ಳಿ ಗ್ರಾಮದ ಬಳಿ ಗಸ್ತಿನಲ್ಲಿದ್ದ ವೇಳೆ ಅದೇ ಗ್ರಾಮದ ಬುದ್ದಿಮಾಂದ್ಯ ವ್ಯಕ್ತಿ (41) ಮಹದೇವು ಎಂಬುವವರನ್ನು ಗಮನಿಸಿದ್ದಾರೆ. ಈತನ ಬಗ್ಗೆ ಸ್ಥಳಿಯರನ್ನು ವಿಚಾರಣೆ ಮಾಡಿದಾಗ ಹೆಚ್.ಹೊಸಹಳ್ಳಿ ಗ್ರಾಮದ ವ್ಯಕ್ತಿಯಾಗಿದ್ದು ಆತ ಹುಟ್ಟಿನಿಂದಲೇ ಬುದ್ದಿಮಾಂದ್ಯ ಎಂಬುದನ್ನು ತಿಳಿದುಕೊಂಡರು.

ನಂತರ ಪ್ರಭುಸ್ವಾಮಿ ಮತ್ತು ಅರುಣ್ ಅವರು ಬುದ್ದಿಮಾಂದ್ಯ ಯುವಕನಿಗೆ ಬಿಸ್ಕೇಟ್, ಊಟ, ನೀರು ಕೊಡಿಸಿ ಬಳಿಕ ಸಮಾಜ ಸೇವಕರಾದ ಹಲಗೂರಿನ ಲಿಂಗಪಟ್ಟಣ ಗ್ರಾಮದ ಮುಖ್ಯ ಶಿಕ್ಷಕ ಸುಂದ್ರಪ್ಪ ಮತ್ತು ಕ್ಷೌರಿಕ ನಾಗರಾಜು ಅವರನ್ನು ಕರೆಸಿಕೊಂಡು, ತಲೆಕೂದಲು ತೆಗೆಯಲು ಮುಂದಾದ ವೇಳೆ ಆ ಅಸ್ವಸ್ತ ಕೆಲಕಾಲ ವಿರೋಧ ಮಾಡಿದ್ದಾನೆ. ಆದರೆ ಎಸ್.ಐ.ಹಾಗಲಹಳ್ಳಿ ಮತ್ತು ಎಚ್.ಹೊಸಹಳ್ಳಿ ಗ್ರಾಮದ ಸಾರ್ವಜನಿಕರ ಸಹಾಯದೊಂದಿಗೆ ತಲೆ ಕೂದಲನ್ನು ತೆಗೆದು ನಾಲೆಯಲ್ಲಿ ಸ್ನಾನ ಮಾಡಿಸಿ ಹೊಸಬಟ್ಟೆ ತೊಡಿಸಿ ಊಟ ಮಾಡಿಸಿದ ನಂತರ ಅವರ ಸಂಬಂಧಿಕರೊಡನೆ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಪೊಲೀಸರು ಎಂದಾಕ್ಷಣ ಎಲ್ಲರ ದೃಷ್ಠಿಕೋನವೇ ಬೇರೆ ಇರುತ್ತದೆ. ಪೊಲೀಸರಿಗೂ ಮಾನವೀಯತೆ ಇದೆ ಎಂಬುವುದಕ್ಕೆ ಇದು ನಿದರ್ಶನವಾಗಿದೆ. ಇವರ ಸಾಮಾಜಿಕ ಕಾರ್ಯಕ್ಕೆ ಸಾರ್ವಜನಿಕರು ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಲಾಖೆಯ ಮೇಲಾಧಿಕಾರಿಗಳು ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ