Saturday, May 18, 2024

ಪ್ರಾಯೋಗಿಕ ಆವೃತ್ತಿ

ಬದುಕಿನಲ್ಲಿ ಭರವಸೆ ಇಟ್ಟು ಬದುಕಬೇಕು – ಡಾ.ಮಹೇಶ ಜೋಷಿ

ರಂಗ ಕಲಾವಿದ ಸಿ.ಶಿವರಾಮು ಅವರಿಗೆ ಎಂ.ರವಿಪ್ರಸಾದ್ ರಂಗಪ್ರಶಸ್ತಿ ಪ್ರದಾನ

ಮಾನವನ ಜೀವನದ ಕಾಲಚಕ್ರದಲ್ಲಿ ನೋವು ನಲಿವು ಬರುತ್ತದೆ.ಅದನ್ನು ಸಮಾನವಾಗಿ ಸ್ವೀಕರಿಸಿ ಬದುಕಬೇಕು.ನೋವಿನ ನಂತರವೂ ಮುಂದಿನ ಬದುಕಿನಲ್ಲಿ ಭರವಸೆ ಇಟ್ಟು ಬದುಕಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಅಭಿಪ್ರಾಯಪಟ್ಟರು.

ಕರ್ನಾಟಕ ಸಂಘ ಮಂಡ್ಯ, ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದ ವತಿಯಿಂದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಎಂ.ರವಿಪ್ರಸಾದ್ ರಂಗಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ರವಿಪ್ರಸಾದ್ ನಾಟಕ ಕ್ಷೇತ್ರದಲ್ಲಿ ಅದ್ಭುತ ಕಲಾವಿದ. ಮಗಳು ಜಾನಕಿಯಲ್ಲಿ ಮಾಡಿದ ಚಂದು ಬಾರ್ಗಿ ಪಾತ್ರ ಜನಮನ್ನಣೆ ಗಳಿಸಿತ್ತು.ಇನ್ನಷ್ಟು ಪ್ರತಿಭೆ ಅನಾವರಣಗೊಳ್ಳುವ ಮೊದಲೇ ಅಕಾಲಿಕ ಮರಣಕ್ಕೆ ಉಂಟಾದುದು ನೋವಿನ ಸಂಗತಿ.ಒಂದು ವರ್ಷವಾದರೂ ಆತನ ನೆನಪಿನ ಸಮಾರಂಭಕ್ಕೆ ಭಾರವಾದ ಹೃದಯದಿಂದ ಬಂದಿದ್ದೇನೆ ಎಂದರು.

ಅಧ್ಯಾತ್ಮ ಮತ್ತು ಕಲೆಯಲ್ಲಿ ದೇವರ ಅಂಶವಿರುತ್ತದೆ.ಆ ಕ್ಷೇತ್ರದವರು ಗುರುವಿನ ಮುಖಾಂತರ ಸಾಧನೆ
ಮಾಡಿರುತ್ತಾರೆ. ಇಂಥವರು ದೇವರಿಗೆ ಬೇಗ ಹತ್ತಿರವಾಗುತ್ತಾರೆ.ಅದನ್ನು ನಾವು ಸ್ವೀಕರಿಸಬೇಕು. ಜೀವನ ಎನ್ನುವುದೇ ನಾಟಕ,ನಾವು ಪಾತ್ರಧಾರಿಗಳು.ದೇವರು ಸೂತ್ರದಾರ. ಪಾತ್ರಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ. ಪಾತ್ರ ಮುಗಿದ ಮೇಲೆ ಜೀವನವೆಂಬ ರಂಗಭೂಮಿಯನ್ನು ಬಿಡಬೇಕು. ಜೀವನ ಎಂಬುದು ಒಂದು ಪಯಣ. ಕುಟುಂಬ,ಮಕ್ಕಳು, ಸಂಬಂಧಿಕರು ಪ್ರಯಾಣಿಕರು.ಅವರವರ ನಿಲ್ದಾಣ ಬಂದಾಗ ಬಿಟ್ಟು
ಹೋಗುತ್ತಾರೆ ಎಂಬ ಆಧ್ಯಾತ್ಮಿಕ ಚಿಂತನೆಯನ್ನು ಸಭೆಯ ಮುಂದಿಟ್ಟರು.

ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ:
ಕನ್ನಡ ನೆಲ, ಜಲ, ಭಾಷೆ, ಕನ್ನಡ, ಕನ್ನಡಿಗ, ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತು ಸದಾ ಮುಂದಾಗಿದೆ. ಸಾಹಿತ್ಯ ಪರಿಷತ್ತು ಸದಾ ಮಂಡ್ಯ ಜನತೆ ಜೊತೆ ಇರುತ್ತದೆ. ಮಂಡ್ಯದ ಏಳು ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದೆ. ಹೀಗಾಗಿ ಡಿಸೆಂಬರ್‌ನಲ್ಲಿ ನಡೆಯಬೇಕಾಗಿದ್ದ ಸಾಹಿತ್ಯ ಸಮ್ಮೇಳನ ಮುಂದೂಡಲಾಗುವುದು ಎಂದರು.

ಕಲಾವಿದನಿಗೆ ಬದ್ಧತೆ ಇರಬೇಕು:
ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ ಮಾತನಾಡಿ ಪಾರಂಪರಿಕ ಶಿಕ್ಷಣ ಮಾತ್ರವಲ್ಲ. ಒಬ್ಬ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಾದರೂ ಬದುಕು ಕಟ್ಟಿಕೊಳ್ಳಬಹುದು. ಇದು ನೃತ್ಯ,ನಾಟಕ,ಕಲಾ ಕ್ಷೇತ್ರದಲ್ಲೂ ಸಾಧ್ಯವಾಗುತ್ತದೆ. ಆದರೆ ಆ ಕ್ಷೇತ್ರದಲ್ಲಿ ಬದ್ಧತೆ,ಪ್ರಾಮಾಣಿಕತೆ ಇರಬೇಕಾಗುತ್ತದೆ. ಆ ಕೆಲಸವನ್ನು ರವಿಪ್ರಸಾದ್ ಮಾಡಿದ್ದ ಎಂದರು.

ಜೀವನದಲ್ಲಿ ಕೆಲವರು ಗುರಿ ತಲುಪುತ್ತಾರೆ. ಕೆಲವರು ತಪ್ಪಿಸಿಕೊಳ್ಳುತ್ತಾರೆ.ರವಿಪ್ರಸಾದ್ ಆ ಗುಂಪಿಗೆ ಸೇರುತ್ತಾನೆ
ಎಂದರು. ಕಲಾವಿದನಾದವನು ಬದ್ಧತೆಯಿಂದ,ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಯಾವುದೇ ಪಾತ್ರವನ್ನು ನಿರ್ವಹಿಸುವ ಮನಸ್ಥಿತಿ ಇರಬೇಕು. ಅಂತಹ ಗುಣ ಪ್ರಶಸ್ತಿ ಪುರಸ್ಕೃತ ಸಿ.ಶಿವರಾಮು
ಅವರಲ್ಲಿದೆ. ಜೊತೆಗೆ ಅವರ ಸರಳತೆ ಸಜ್ಜನಿಕೆಯನ್ನು ಮೆಚ್ಚಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

ಚಿಕ್ಕೇಗೌಡನದೊಡ್ಡಿಯ ಕಲಾವಿದ ಸಿ.ಶಿವರಾಮು ಅವರಿಗೆ ಮಂಡ್ಯದ ಕರ್ನಾಟಕ ಸಂಘದಲ್ಲಿ ಪ್ರಥಮವಾಗಿ ಸ್ಥಾಪಿಸಲಾಗಿರುವ ಎಂ.ರವಿಪ್ರಸಾದ್ ರಂಗಪ್ರಶಸ್ತಿಯನ್ನು 10000 ರೂ ನಗದು ಹಾಗೂ ಪ್ರಶಸ್ತಿ ಫಲಕದೊಂದಿಗೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ದಿ||ಎಂ.ರವಿಪ್ರಸಾದ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಕರ್ನಾಟಕ ಸಂಘದ ವತಿಯಿಂದ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಷಿ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಾಗಿ ಲಯನ್ ಸಂಸ್ಥೆ ಮಾಜಿ ರಾಜ್ಯಪಾಲರು ಲ||ಜಿ.ಎ.ರಮೇಶ್ ಪ್ರಶಸ್ತಿ ಪುರಸ್ಕೃತರಾದ ಚಿಕ್ಕೇಗೌಡನದೊಡ್ಡಿಯ ರಂಗಕಲಾವಿದ ಸಿ.ಶಿವರಾಮು ಹಾಗೂ ನಿವೃತ್ತ ಪ್ರಾಧ್ಯಾಪಕ ಹಾಗೂ ಲೇಖಕ
ಡಾ.ಹೆಚ್.ಎಸ್.ಮುದ್ದೇಗೌಡ ಉಪಸ್ಥಿತರಿದ್ದರು..

ಸಮಾರಂಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್,  ಕಾರ್ಯದರ್ಶಿ ಚಂದಗಾಲು ಪಿ.ಲೋಕೇಶ್, ಹೆಚ್.ಡಿ.ಸೋಮಶೇಖರ್, ಅನಿತಾ, ಹನಕೆರೆ ನಾಗಪ್ಪ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!