ಅಂಗನವಾಡಿ ಕಾರ್ಯಕರ್ತೆಯರಿಗೆ ಇಲಾಖೆ ಕಾರ್ಯ ಚಟುವಟಿಕೆ ನಿರ್ವಹಿಸಲು 2018 ರಲ್ಲಿ ಮೊಬೈಲ್ ವಿತರಿಸಿದ್ದು, ಚುನಾವಣೆ ಸೇರಿದಂತೆ ಎಲ್ಲಾ ಸಮೀಕ್ಷೆಗಳನ್ನು ಮಾಡಲು ಬಳಸಿಕೊಂಡಿದ್ದು, ಐದು ವರ್ಷಗಳ ಕೆಲಸದಿಂದ ಮೊಬೈಲ್ ಫೋನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಕೂಡಲೇ ಹಳೆಯ ಮೊಬೈಲ್ ವಾಪಸ್ ಪಡೆದು ಟ್ಯಾಬ್ಲೆಡ್ ನೀಡಬೇಕೆಂದು ಒತ್ತಾಯಿಸಿ ನಾಗಮಂಗಲ ಪಟ್ಟಣದಲ್ಲಿಂದು ಅಂಗನವಾಡಿ ಕಾರ್ಯಕರ್ತರು ಪ್ರತಿಭಟಿಸಿದರು.
ನಾಗಮಂಗಲ ಟಿ.ಬಿ ಬಡಾವಣೆಯಿಂದ ಸಿಐಟಿಯು ನೇತೃತ್ವದಲ್ಲಿ ಮೆರವಣಿಗೆ ಹೊರಟ ಕಾರ್ಯಕರ್ತೆಯರು ಪಟ್ಟಣದ ಟಿ ಮರಿಯಪ್ಪ ಸರ್ಕಲ್ ಮಾನವ ಸರಪಳಿ ನಡೆಸಿ, ನಂತರ ತಾಲೂಕು ಆಡಳಿತ ಕಚೇರಿಗೆ ಅಂಗನವಾಡಿ ಕಾರ್ಯಕರ್ತೆಯರು ಆಗಮಿಸಿದರು.
ಹಿಂದಿನ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿರುವ ಒಂದು ಸಾವಿರ ರೂ.ಗೌರವ ದಿನವನ್ನು ಕೂಡಲೇ ಕಾರ್ಯಕರ್ತೆಯರಿಗೆ ಪಾವತಿಸಬೇಕು, ಗೃಹಲಕ್ಷ್ಮಿ ಯೋಜನೆಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಫಲಾನುಭವಿಗಳಾಗಿ ತುರ್ತಾಗಿ ಸವಲತ್ತು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ದೇಶದ ಎಲ್ಲಾ ಅಂಗನವಾಡಿ ಕಾರ್ಯಕರ್ತರಿಗೂ, ಸಹಾಯಕರಿಗೂ ಕನಿಷ್ಠ ವೇತನ ನಿಗದಿ ಸಾಮಾಜಿಕ ಭದ್ರತೆಗಳು ಕಾರ್ಯಕರ್ತರಿಗೂ ಮತ್ತು ಸಹಾಯಕರಿಗೆ ಗ್ರಾಜುವಿಟಿ ಕೊಡುವ ಕುರಿತಂತೆ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಕೂಡಲೇ ಜಾರಿ ಮಾಡಬೇಕು. ಸುಪ್ರೀಂಕೋರ್ಟ್ ಮತ್ತು ಸಂಸದೀಯ ಮಂಡಳಿಗಳು ಶಿಫಾರಸು ಮಾಡಿರುವ ಕಾರ್ಯಕರ್ತರು ಮತ್ತು ಸಹಾಯಕರಿಗೆ ಮೂಲವೇತನ ನಿಗದಿ ಸಮಿತಿ ಒಂದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ರಚಿಸಬೇಕು ಎಂಬ ಆಗ್ರಹಿಸಿದರು.
ಸಂಘಟನೆ ಮಾಡಿದ ಮತ್ತು ಮುಷ್ಕರಗಳಲ್ಲಿ ಭಾಗವಹಿಸಿದ ಕಾರಣಕ್ಕಾಗಿ ದೆಹಲಿಯಲ್ಲಿ ಕಾನೂನುಬಾಹಿರವಾಗಿ ಕೆಲಸದಿಂದ ವಜಾ ಮಾಡಿರುವ ನಮ್ಮ ನೌಕರರನ್ನು ಹಾಗೂ ಸಹಾಯಕರನ್ನು ಕೂಡಲೇ ಮರು ನೇಮಕ ಮಾಡಬೇಕು ಮತ್ತು ನಮಗೆ ಏಕರೂಪದ ಸೇವಾ ನಿಯಮಗಳು ಕೂಡಲೇ ರೂಪಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಐಸಿಡಿಎಸ್ ಮತ್ತು ಇತರೆ ಇಲಾಖೆ ಕೆಲಸಗಳನ್ನು ನೀಡಬಾರದು, ದೇಶದಲ್ಲಿನ ಆರು ವರ್ಷಗಳ ಒಳಗಿನ ಎಲ್ಲಾ ಮಕ್ಕಳಿಗೂ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯ ಎನ್ನುವ ಕಾಯಿದೆಯಿಂದ ರೂಪಿಸಿ ಜಾರಿ ಮಾಡಬೇಕು, ಅದಕ್ಕೆ ಅಂಗನವಾಡಿ ನೋಡಲ್ ಅಧಿಕಾರಿಗಳನ್ನು ಕಾರ್ಯ ನಿರ್ವಹಿಸುವಂತೆ ಅಗತ್ಯವಾದ ತರಬೇತಿಗಳನ್ನು ನಮಗೂ ಕೊಡಬೇಕೆಂದು ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣನೆ ಮಾಡಬೇಕು ಎಂಬ ಅ ಬೇಡಿಕೆಗಳನ್ನ ಈಡೇರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು, ಸಹಾಯಕಿಯರು ಭಾಗವಹಿಸಿದ್ದರು.




