Saturday, July 13, 2024

ಪ್ರಾಯೋಗಿಕ ಆವೃತ್ತಿ

ಶಾಲಾ ಮಕ್ಕಳಿಗೆ ನೋಟ್ ಬುಕ್ಸ್-ಬ್ಯಾಗ್ ವಿತರಣೆ

ಮದ್ದೂರು ತಾಲೂಕಿನ ಭಾರತೀನಗರ ಸಮೀಪದ ಮಾದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡಗನಹಳ್ಳಿ, ಗೋಪನಹಳ್ಳಿ, ಲಕ್ಷ್ಮೇಗೌಡನದೊಡ್ಡಿ, ಕಡಿಲುವಾಗಿಲು, ಅಂಬರಹಳ್ಳಿ, ಲಕ್ಷ್ಮೇಗೌಡನದೊಡ್ಡಿ ಮೊದಲಾದ ಗ್ರಾಮಗಳ ಅಂಗನವಾಡಿ ಹಾಗೂ ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳಿಗೆ ಸ್ಲೇಟ್ ಪಠ್ಯೇತರ ಪರಿಕರ ಹಾಗೂ ಬ್ಯಾಗ್ಗಳನ್ನು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕದಲೂರು ರವಿ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನ ಸಹೋದರ ಕದಲೂರು ಉದಯ್ ಅವರು ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಮದ್ದೂರು ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಬುಕ್ಸ್,ಬ್ಯಾಗ್ ಪಠ್ಯೇತರ ಸಾಮಗ್ರಿ ಹಂಚುತ್ತಿದ್ದಾರೆ. ನಮ್ಮಣ್ಣ ಉದಯ್ ಅವರ ಸಮಾಜ ಸೇವಾ ಕಾರ್ಯಗಳಿಗೆ ನಾನು ಕೂಡ ಎಂದೆಂದಿಗೂ ಸಹಕಾರ ನೀಡುತ್ತೇನೆ ಎಂದರು.

ಸರ್ಕಾರಿ ಶಾಲೆಯಲ್ಲಿಯೂ ಉತ್ತಮ ಶಿಕ್ಷಣ ಸಿಗುತ್ತದೆ.ವಿದ್ಯಾರ್ಥಿಗಳ ಜೊತೆ ನನ್ನ ಸಹೋದರ ಕದಲೂರು ಉದಯ್ ಎಂದೆಂದಿಗೂ ನಿಂತು ಅವರ ಶಿಕ್ಷಣಕ್ಕೆ ಸಂಪೂರ್ಣ ಸಹಕಾರ ನೀಡುತ್ತಾರೆ ಎಂದರು.

ಈ ಸಂದರ್ಭದಲ್ಲಿ ಕರಡಕೆರೆ ಮನು,ಹರೀಶ್, ನಂದೀಶ್, ನಗರಕೆರೆ ಮಹೇಶ್, ಪ್ರವೀಣ್, ಶೀನ, ಯಡಗನಹಳ್ಳಿ, ಪೂರ್ಣಿಮ , ಚಂದ್ರಕಲಾ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!