Friday, September 20, 2024

ಪ್ರಾಯೋಗಿಕ ಆವೃತ್ತಿ

ದುಂಡಶೆಟ್ಟಿ- ಲಕ್ಷ್ಮಮ್ಮ ಆಸ್ಪತ್ರೆಯ ನಾಮಫಲಕ ದುರುದ್ದೇಶದಿಂದ ತೆಗೆಸಿಲ್ಲ – ಶಿವಕುಮಾರ್

ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ- ಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಯ ನಾಮಫಲಕವನ್ನು ಯಾವುದೇ ದುರುದ್ದೇಶ ಪೂರ್ವಕವಾಗಿ ತೆಗೆಸಿಲ್ಲ ಆಸ್ಪತ್ರೆಯ ಮೊದಲ ಅಂತಸ್ತಿನಲ್ಲಿ 95 ಲಕ್ಷ‌ ರೂಪಾಯಿಗಳ‌ ವೆಚ್ಚದಲ್ಲಿ ಲ್ಯಾಬೋರೇಟರಿ ಕಟ್ಟಡ ಹಾಗೂ ಐಶೋಲೇಷನ್ ವಾರ್ಡ್ ಕಟ್ಟಡ ಕಾಮಗಾರಿ ನಡೆಯುತ್ತಿರುವ ಕಾರಣ ಹೈಟೇಕ್ ಮಾದರಿಯಲ್ಲಿರುವ ಆಸ್ಪತ್ರೆಯ ನಾಮಫಲಕವನ್ನು ಸುರಕ್ಷತೆಯ ಹಿತದೃಷ್ಟಿಯಿಂದ ಬಿಚ್ಚಿಡಲಾಗಿದೆ. ಕಾಮಗಾರಿ ಪೂರ್ಣಗೊಂಡ ತಕ್ಷಣ ಹಾಕಲಾಗುವುದು ಎಂದು ದುಂಡಶೆಟ್ಟಿ ಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ.ಕೆ.ಎಸ್. ಶಿವಕುಮಾರ್ ತಿಳಿಸಿದರು.

ಕೆ.ಆರ್.ಪೇಟೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಕೆಲವರು ಆಸ್ಪತ್ರೆಯ ಕಾಮಗಾರಿಯು ಪ್ರಗತಿಯಲ್ಲಿರುವುದನ್ನು ಗಮನಿಸದೆ ಆಸ್ಪತ್ರೆಗೆ ಭೂಮಿ ದಾನ ಮಾಡಿದ ದುಂಡಶೆಟ್ಟಿ, ಲಕ್ಷ್ಮಮ್ಮ ಹೆಸರನ್ನು ಆಸ್ಪತ್ರೆಯಿಂದ ತೆಗೆದು ಹಾಕಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದರು.

ನಾನು ಆಸ್ಪತ್ರೆಯ ಮುಖ್ಯ ಆಡಳಿತ‌ ವೈಧ್ಯಾಧಿಕಾರಿಯಾಗಿ ಬಂದ ನಂತ ಹಲವು ಸುಧಾರಣೆಯನ್ನು ತಂದು ಆಸ್ಪತ್ರೆಯ ಅಭಿವೃದ್ದಿಗೆ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದೇನೆ. ಕಳೆದ ವರ್ಷ ಭಾರತ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದುಂಡಶೆಟ್ಟಿ ಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆ ಎಂಬ ಹೈಟೆಕ್ ನಾಮಫಲಕವನ್ನು ಅಳವಡಿಸಲಾಗಿತ್ತು. ಇದಕ್ಕೂ‌ ಮುಂಚೆ ಚಿಕ್ಕದಾಗಿ ಬರೆಯಲಾಗಿದ್ದ ನಾಮಫಲಕವನ್ನು ಚೆನ್ನಾಗಿ ಕಾಣುವಂತೆ ಹೈಟೆಕ್ ಮಾದರಿಯ ನಾಮಫಲಕವನ್ನು ನಾನೇ ಹೆಚ್ಚಿನ ಕಾಳಜಿ ವಹಿಸಿ ಹಾಕಿದ್ದೆನು, ಆದರೆ ಆಸ್ಪತ್ರೆಯ ಮೊದಲ ಅಂತಸ್ತಿನಲ್ಲಿ ಕಾಮಗಾರಿ ನಡೆಸುತ್ತಿರುವ ಕಾರಣ ನಾಮಫಲಕ ವಿರೂಪಗೊಳ್ಳುವ ಸಾಧ್ಯತೆ ಇದ್ದ ಕಾರಣ, ಆಸ್ಪತ್ರೆಯ ದಾನಿಗಳಾದ ದುಂಡಶೆಟ್ಟಿ ಲಕ್ಷ್ಮಮ್ಮ ವಂಶಸ್ಥರಾದ ಹೊಸಹೊಳಲು ವೆಂಕಟಕೃಷ್ಣಶೆಟ್ಟಿ ಅವರ ಸಮ್ಮುಖದಲ್ಲಿ ನಾಮಫಲಕವನ್ನು ಬಿಚ್ಚಿಡಲಾಗಿದೆ. ಆದರೆ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಕೆಲವರು ಆಸ್ಪತ್ರೆಯ ಆಡಳಿತಾಧಿಕಾರಿಯಾದ ನನ್ನ ವಿರುದ್ದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಸ್ಪಷ್ಟನೆ ನೀಡಿದರು.

ಹೊಸಹೊಳಲು ವೆಂಕಟಕೃಷ್ಣಶೆಟ್ಟಿ ಮಾತನಾಡಿ, ನಮ್ಮ ತಾತ ದುಂಡಶೆಟ್ಟಿ ಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆ ಎಂಬ ನಾಮಫಲಕವನ್ನು ದುರುದ್ದೇಶದಿಂದ ತೆಗೆದಿಲ್ಲ. ಆಸ್ಪತ್ರೆಯ ಮೊದಲ ಅಂತಸ್ತಿನಲ್ಲಿ 95 ಲಕ್ಷ‌ ರೂಪಾಯಿಗಳ‌ ವೆಚ್ಚದಲ್ಲಿ ಹೈಟೆಕ್ ಲ್ಯಾಬೋರೇಟರಿ ಹಾಗೂ ಐಶೋಲೇಷನ್ ವಾರ್ಡ್ ಕಟ್ಟಡ ಕಾಮಗಾರಿ ನೆಡೆಯುತ್ತಿರುವ ಕಾರಣ ನಾಮಪಲಕವನ್ನು ತಾತ್ಕಾಲಿಕವಾಗಿ ಸುರಕ್ಷಿತೆ ದೃಷ್ಟಿಯಿಂದ ತೆಗೆದು ಇಡಲಾಗಿದೆ. ಆಸ್ಪತ್ರೆಯ ಕಾಮಗಾರಿ ಕೆಲಸ ಮುಗಿದ ತಕ್ಷಣವೇ ಯಥಾವತ್ತಾಗಿ ನಾಮಫಲಕವನ್ನು ಅಳವಡಿಸಲಾಗುತ್ತದೆ ಎಂದರು.

28 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿರುವ ತಾಯಿ – ಮಗು ಆಸ್ಪತ್ರೆಯ ಕಾಮಗಾರಿ ಮುಗಿದ ಕೂಡಲೇ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಅತ್ಯಾಧುನಿಕ ನಾಮಫಲಕ, ಸ್ವಾಗತ ಕಮಾನು ಅಳವಡಿಸಲಾಗುತ್ತದೆ. ಆಸ್ಪತ್ರೆಯ ಮುಂದೆ ದುಂಡಶೆಟ್ಟಿ ಲಕ್ಷ್ಮಮ್ಮ ಅವರ ಪುತ್ಥಳಿ ಅಳವಡಿಸಿ ಆಸ್ಪತ್ರೆಗೆ ಭೂಮಿಯನ್ನು  ದಾನ‌ಮಾಡಿರುವ ದುಂಡಶೆಟ್ಟಿ-ಲಕ್ಷ್ಮಮ್ಮ ಅವರ ಹೆಸರನ್ನು ಶಾಶ್ವತವಾಗಿ ಚಿರಸ್ಥಾಯಿಯಾಗಿ ಉಳಿಯುವಂತೆ ನೋಡಿ ಕೊಳ್ಳಲಾಗುವುದು ಎಂದು  ಇದಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಡಾ.ಕೆ.ಎಸ್.ಶಿವಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಕರವೇ ಹೋರಾಟಗಾರ ಎ.ಸಿ.ಕಾಂತರಾಜು, ದುಂಡಶೆಟ್ಟಿ ಲಕ್ಷ್ಮಮ್ಮ ವಂಶಸ್ಥರ ಹಲವು ಮುಖಂಡರು ಹಾಗೂ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!