Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರಚಾರಕ್ಕೆಂದೇ 3,064 ಕೋಟಿ ರೂ. ಖರ್ಚು ಮಾಡಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಕಾರ್ಯಕ್ರಮಗಳು ಮತ್ತು ಯೋಜನೆಗಳ ಪ್ರಚಾರಕ್ಕಾಗಿ 2018-19ನೇ ಸಾಲಿನಿಂದ 2023ರ ಜುಲೈ 13ರ ವರೆಗೆ ಒಟ್ಟು 3,064 ಕೋಟಿ ಖರ್ಚು ಮಾಡಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈಚೆಗೆ ರಾಜ್ಯಸಭೆಗೆ ತಿಳಿಸಿದೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭೀ‌ ರಂಜನ್‌ ಬಿಸ್ವಾಸ್ ಅವರು ದತ್ತಾಂಶ ಸಂಗ್ರಹಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದ್ದರು. ಲಿಖಿತ ಉತ್ತರ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ಕೇಂದ್ರೀಯ ಸಂವಹನ ಬ್ಯೂರೊ (ಸಿಬಿಸಿ) ಹಲವು ಬಗೆಯ ಮಾಧ್ಯಮಗಳ ಮೂಲಕ ಕೈಗೊಂಡ ಪ್ರಚಾರ ಕಾರ್ಯಗಳ ಕುರಿತು ಸ್ವತಂತ್ರ ಸಂಸ್ಥೆಯೊಂದು ನಡೆಸಿದ ‘ಅಖಿಲ ಭಾರತ ಸಮೀಕ್ಷೆ, ಪರಿಣಾಮ ಮೌಲೀಕರಣ ಅಧ್ಯಯನದಿಂದ ಮಾಹಿತಿ ದೂರಕಿದೆ ಎಂದು ಹೇಳಿದ್ದಾರೆ.

ಮುದ್ರಣ ಮಾಧ್ಯಮಗಳ ಜಾಹೀರಾತುಗಳಿಗೆ ಹೆಚ್ಚು ವ್ಯಯ

  • 21,338 ಕೋಟಿ ರೂ. ಮುದ್ರಣ ಮಾಧ್ಯಮ,
  • ವಿದ್ಯುನ್ಮಾನ ಮಾದ್ಯಮಕ್ಕೆ 21,273 ಕೋಟಿ
  • ಬಹಿರಂಗ ಪ್ರಚಾರಕ್ಕೆ 1452 ಕೋಟಿ ಖರ್ಚಾಗಿದೆ.

ದತ್ತಾಂಶದ ಪ್ರಕಾರ:

2018-19ನೇ ಸಾಲಿನಲ್ಲಿ ಜಾಹೀರಾತು ಮತ್ತು ಪ್ರಚಾರದ ಒಟ್ಟು ವೆಚ್ಚವು 1,179 ಕೋಟಿ.

2019-20ನೇ ಸಾಲಿನಲ್ಲಿ 708 ಕೋಟಿ.

2020 21ನೇ ಸಾಲಿನಲ್ಲಿ 409 ಕೋಟಿ.

2021-22ನೇ ಸಾಲಿನಲ್ಲಿ 315 ಕೋಟಿ

2022-23ನೇ ಸಾಲಿನಲ್ಲಿ 408 ಕೋಟಿ ಖರ್ಚು ಮಾಡಲಾಗಿದೆ.

ಈ ವರ್ಷ ಏಪ್ರಿಲ್ ಮತ್ತು ಜುಲೈ 13ರ ಒಳಗೆ ಜಾಹೀರಾತಿಗಳ ಮೇಲೆ ಸರ್ಕಾರವು 343 ಕೋಟಿ ಖರ್ಚು ಮಾಡಿದೆ ಎಂದು ಹೇಳಲಾಗಿದೆ.

2018-19 ಮತ್ತು 2019-20ನೇ ಸಾಲಿನಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಜಾಹೀರಾತುಗಳಿಗೆ ಸರ್ಕಾರ ಹೆಚ್ಚು ಹಣ ಖರ್ಚು ಮಾಡಿತ್ತು. ಬಳಿಕ ಮೂರು ಆರ್ಥಿಕ ವರ್ಷಗಳಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಜಾಹೀರಾತುಗಳ ವೆಚ್ಚದ ಪಾಲಿನಲ್ಲಿ ಇಳಿಕೆ ಕಂಡುಬಂದಿತು ಎಂದು ಸರ್ಕಾರ ನೀಡಿರುವ ದತ್ತಾಂಶವನ್ನು ವಿಶ್ಲೇಷಿಸಿದ ವೇಳೆ ತಿಳಿದುಬಂದಿದೆ.

2018-19 ಸಾಲಿನಲ್ಲಿ ಬಹಿರಂಗ ಪ್ರಚಾರಕ್ಕೆ ಸರ್ಕಾರವು 235 ಕೋಟಿ ವ್ಯಯಿಸಿತ್ತು. 2022-23ನೇ ಸಾಲಿನಲ್ಲಿ ಈ ಮೊತ್ತವು 32 ಕೋಟಿಗೆ ಇಳಿದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈವರೆಗೆ ಬಹಿರಂಗ ಪ್ರಚಾರಕ್ಕೆ ಸರ್ಕಾರದಿಂದ 8,70 ಕೋಟಿ ಖರ್ಚಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!