Thursday, November 19, 2026

ಪ್ರಾಯೋಗಿಕ ಆವೃತ್ತಿ

ಜಿ.ಮಾದೇಗೌಡರ ಶ್ರಮದಿಂದ ಕಾಂಗ್ರೆಸ್ ಬಲಿಷ್ಟ – ಆಶಯ್

ಹಿರಿಯ ಮುತ್ಸದ್ಧಿ ದಿ.ಜಿ.ಮಾದೇಗೌಡರು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿ ನಿಷ್ಠಾವಂತ ಕಾರ್ಯಕರ್ತರನ್ನು ಹುಟ್ಟುಹಾಕಿದ್ದಾರೆ. ಇದರ ಫಲವಾಗಿ ಸಿ.ಎ.ಕೆರೆ ಹೋಬಳಿಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಟವಾಗಿದೆ ಎಂದು ಕಾಂಗ್ರೆಸ್ ಮುಖಂಡ ಆಶಯ್ ಮಧುಮಾದೇಗೌಡ ಹೇಳಿದರು.

ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಮುಡೀನಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ರಂಗಸ್ವಾಮಿ ಅವರ ಪುತ್ರ ಎಂ.ಆರ್.ಅರುಣ್ ಕುಮಾರ್ ಅವರ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದಿ.ಜಿ.ಮಾದೇಗೌಡರು ಮಂಡ್ಯಜಿಲ್ಲೆಗೆ ಆಯಸ್ಕಾಂತದಂತಿದ್ದರು. ಅವರ ಪ್ರತಿಯೊಂದು ಹೋರಾಟಕ್ಕೂ ಜಿಲ್ಲೆಯ ಜನರು ಸ್ಪೂರ್ತಿ ತುಂಬುತ್ತಿದ್ದರು. ಗೌಡರ ಮೇಲೆ ಇದ್ದ ಅಭಿಮಾನ, ಕಾಳಜಿಯೇ ಇದಕ್ಕೆ ಕಾರಣವಾಗಿತ್ತು. ಕ್ಷೇತ್ರದಲ್ಲಿ ನಮ್ಮ ತಾತ ಮತ್ತು ನಮ್ಮ ತಂದೆ ಮಧು ಜಿ ಮಾದೇಗೌಡರನ್ನು ಬೆಂಬಲಿಸುತ್ತಾ ಬಂದಿರುವವರ ಕಷ್ಟಸುಖಗಳಿಗೆ ಸ್ಪಂದಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ ಎಂದರು.

ಶಿಕ್ಷಣ, ಆರೋಗ್ಯ, ಧಾರ್ಮಿಕ ಕ್ಷೇತ್ರಕ್ಕೆ ಮಾದೇಗೌಡರ ಕೊಡುಗೆ ಅನನ್ಯವಾಗಿದೆ. ಗೌಡರ ದೂರದೃಷ್ಠಿಯ ಫಲವಾಗಿ ಇಂದು ಭಾರತೀನಗರ ಪಟ್ಟಣವಾಗಿ ಮಾರ್ಪಟ್ಟಿದೆ. ಇದರಿಂದ ಅನೇಕರಿಗೆ ಉದ್ಯೋಗ, ಶಿಕ್ಷಣ, ಮೂಲಭೂತ ಸೌಕರ್ಯಗಳು ದೊರೆತಿವೆ, ಇದನ್ನು ಗ್ರಾಮೀಣ ಜನರು ಇಂದಿಗೂ ಅವರ ಸಾಧನೆಯ ಬಗ್ಗೆ ಮೆಲುಕು ಹಾಕುತ್ತಿರುವುದೇ ಸಾಕ್ಷಿಯಾಗಿದೆ ಎಂದರು.

ಇದೇ ವೇಳೆ ತಾ.ಪಂ ಮಾಜಿ ಸದಸ್ಯ ಬಿ.ಗಿರೀಶ, ಭರತೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಆರ್.ಸಿದ್ದಪ್ಪ, ದಲಿತ ಮುಖಂಡ ಕಬ್ಬಾಳಯ್ಯ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ