Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನಿವೃತ್ತ ಶಿಕ್ಷಕ ಕೆ.ಪಿ.ವೀರಪ್ಪಗೆ ಅಭಿನಂದನೆ

ಮಂಡ್ಯ ನಗರದಲ್ಲಿರುವ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದಲ್ಲಿ ಪದಾಧಿಕಾರಿಗಳು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪುರಸ್ಕಾರಕ್ಕೆ ಭಾಜನರಾದ ಸಂಘದ ಉಪಾಧ್ಯಕ್ಷ ಕೆ.ಪಿ.ವೀರಪ್ಪ ಕೀಲಾರ ಅವರಿಗೆ ಅಧ್ಯಕ್ಷ ಬಿ.ಸಿದ್ದಯ್ಯ ಮತ್ತು ಪದಾಧಿಕಾರಿಗಳು ಅಭಿನಂದಿಸಿದರು.

ಸಂಘದ ಅಧ್ಯಕ್ಷ ಬಿ.ಸಿದ್ದಯ್ಯ ಮಾತನಾಡಿ, ಮೈಸೂರಿನ ತಾಯ್ನಾಡು ಕರ್ನಾಟಕ ರಕ್ಷಣಾ ವೇದಿಕೆಯಿಂದ ಕೊಡಮಾಡುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪುರಸ್ಕಾರವನ್ನು ನಿವೃತ್ತ ಶಿಕ್ಷಕ ಕ್ಷೇತ್ರದಿಂದ ಆಯ್ಕೆ ಅಭಿನಂದಿಸಿರುವುದು ನಮ್ಮೆಲ್ಲಿಗೆ ಖುಷಿ ನೀಡಿದೆ ಎಂದು ನುಡಿದರು.

ಸಾಹಿತಿ ಕೆ.ವಿ.ವೀರಪ್ಪ ಅವರು ಎಲೆಮರೆಕಾಯಿ ಇದ್ದಂಗೆ ಇಂತಹ ಸಾಹಿತಿ, ಶಿಕ್ಷಕರನ್ನು ಗುರುತಿಸಿ ಗೌರವ ಸಮರ್ಪಿಸಿರುವುದು ಶ್ಲಾಘನೀಯ, ಇವರು ಅನೇಕ ಪುಸ್ತಕ, ಕವಿತೆ, ಜಾಗೃತಿ, ಜಾನಪದ ಗಾದೆಗಳನ್ನು ಸಂಗ್ರಹಿಸಿ ನಾಡಿಗೆ ಅರ್ಪಿಸಿದ್ದಾರೆ, ಇಂತಹ ಬಹುಮುಖ ಹಿರಿಯ ಪ್ರತಿಭಾವಂತರಿಗೆ ಪುರಸ್ಕಾರ ಸಂದಿರುವುದು ಸಂತಸ ಎಂದು ಹರ್ಷ ವ್ಯಕ್ತಪಡಿಸಿದರು.

ಜಾಹೀರಾತು

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಉಪಾಧ್ಯಕ್ಷ ಕೆ.ಪಿ.ವೀರಪ್ಪ ಕೀಲಾರ, ನಿವೃತ್ತ ನೌಕರರ ಸಂಘದಿAದ ಅಭಿನಂದನೆ ಮಾಡಿರುವುದು ತೌವರಿಗೆ ಸನ್ಮಾನದಷ್ಟೇ ಖುಷಿಯಾಗಿದೆ, ಎಲ್ಲರ ಪ್ರೀತಿ ಮತ್ತು ಆಶೀರ್ವಾದಕ್ಕೆ ಧನ್ಯತೆ ತಿಳಿಸುತ್ತೇನೆ ಎಂದರು.

ಮನುಷ್ಯ ಹುಟ್ಟುತ್ತಾನೆ-ಸಾಯುತ್ತಾನೆ, ಇರುವ ಜೀವನಲ್ಲಿ ಸಾಧನೆ ಮಾಡಿ ಒಂದು ಗುರುತು ಬಿಟ್ಟು ಹೊಗಬೇಕಿದೆ, ಸಮಾಜಸೇವೆಯನ್ನು ದೇಶಸೇವೆ ಎಂದು ಭಾವಿಸಿ, ಕಾಯಕವೇ ಕೈಲಾಸ, ದುಡಿಮೆಯೇ ದೇವರು ಎಂದು ಅರಿತು ಬದುಕಿದವರು ಇತಿಹಾಸದಲ್ಲಿ ನೆನೆಪಾಗಿ ಉಳಿಯುತ್ತಾರೆ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಕೆಂಪಯ್ಯ, ಕಾರ್ಯದರ್ಶಿ ತಿಮ್ಮಯ್ಯ, ಖಜಾಂಚಿ ರಾಮೇಗೌಡ, ಜಂಟಿ ಕಾರ್ಯದರ್ಶಿ ಅಂಕೇಗೌಡ, ಯು.ಎಸ್.ಶಿವರಾಮು ಮತ್ತು ಪದಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!