Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ಕ್ಯಾತಘಟ್ಟ ಗ್ರಾ.ಪಂ. ಅಧ್ಯಕ್ಷರಾಗಿ ರಾಜೇಶ್ ಆಯ್ಕೆ

ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಕ್ಯಾತಘಟ್ಟ ಗ್ರಾ.ಪಂ ಅಧ್ಯಕ್ಷರಾಗಿ ರಾಜೇಶ್, ಉಪಾಧ್ಯಕ್ಷರಾಗಿ  ಕೆ.ಎನ್.ಜೀವಿತ ಆಯ್ಕೆಯಾದರು.

ಅಧ್ಯಕ್ಷರ ಸ್ಥಾನಕ್ಕೆ ರಾಜೇಶ್ ಮತ್ತು ವೆಂಕಟಲಕ್ಷ್ಮಮ್ಮ, ಉಪಾಧ್ಯಕ್ಷರ ಸ್ಥಾನಕ್ಕೆ ಕೆ.ಎನ್.ಜೀವಿತ, ಸುಂದ್ರಮ್ಮ ಅವರು ನಾಮಪತ್ರ ಸಲ್ಲಿಸಿದ್ದರು. ಒಟ್ಟು 15 ಸದಸ್ಯರ ಬಲದಲ್ಲಿ ಗ್ರಾ.ಪಂ.ನಲ್ಲಿ ನಡೆದ ಚುನಾವಣೆಯಲ್ಲಿ ರಾಜೇಶ್ ಮತ್ತು ಕೆ.ಎನ್.ಜೀವಿತರವರು ತಲಾ 11 ಮತಗಳನ್ನು ಪಡೆದು ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾದರು.

ವೆಂಕಟಲಕ್ಷ್ಮಮ್ಮ ಮತ್ತು ಸುಂದ್ರಮ್ಮ ಅವರು ತಲಾ 4 ಮತಗಳನ್ನು ಪಡೆದು ಸೋಲುಂಡರು. ಮುಖ್ಯ ಆಡಳಿತ ಪಶುವೈದ್ಯಾಧಿಕಾರಿ ಪ್ರವೀಣ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರನ್ನು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಅಭಿನಂದಿಸಿ ಮಾತನಾಡಿ, ನೂತನ ಅಧ್ಯಕ್ಷ-ಉಪಾಧ್ಯಕ್ಷರು ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗಬೇಕು. ಪಕ್ಷಬೇಧ ಮಾಡಬಾರದು. ಸದಸ್ಯರು, ಮುಖಂಡರು ಸಹ ಬೆಂಬಲ ನೀಡಬೇಕು. ಗ್ರಾಮಗಳ ಅಭಿವೃದ್ದಿ ಕೆಲಸಕ್ಕೆ ಪಣತೊಡಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಕ್ಯಾತಘಟ್ಟ ಗ್ರಾಮದ ರವಿಕುಮಾರ್, ತಿಮ್ಮರಾಜು, ಗಿರೀಶ್, ಬೊಮ್ಮನದೊಡ್ಡಿ ಬಸರಾಜು, ಅಜ್ಜಹಳ್ಳಿ ರಾಮೇಗೌಡ, ರಮೇಶ್, ರವಿ, ರಾಜಣ್ಣ, ಮಠದದೊಡ್ಡಿ ಪುಟ್ಟಸ್ವಾಮಿ, ಸತೀಶ್, ಮರಿಸ್ವಾಮಿ, ತೊರೆಚಾಕನಹಳ್ಳಿ ಶಿವಲಿಂಗೇಗೌಡ, ಉಮೇಶ್, ಚನ್ನೇಗೌಡ, ಕಳ್ಳಿಮೆಳೆದೊಡ್ಡಿ ಸ್ವಾಮಿ, ಸಿದ್ದರಾಜು, ಕೆ.ಟಿ.ಸುರೇಶ್ ಸೆರಿದಂತೆ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ