Friday, September 20, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ಮಿಷನ್ ಇಂದ್ರಧನುಷ್ ಕಾರ್ಯಕ್ರಮ

ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಾಗಮಂಗಲ ತಾಲೂಕು ಘಟಕದ ವತಿಯಿಂದ ನಾಗಮಂಗಲದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಿಷನ್ ಇಂದ್ರಧನುಷ್ ಕಾರ್ಯಕ್ರಮ ತಾಲ್ಲೂಕು ದಂಡಾಧಿಕಾರಿ ನಹಿಂ ಉನ್ನೀಸಾ ಅಧ್ಯಕ್ಷತೆಯಲ್ಲಿ ಜರುಗಿತು.

ರಾಜ್ಯ ಸರ್ಕಾರದ ಇಂದ್ರಧನುಷ್ ಯೋಜನೆ ಗರ್ಭಿಣಿಯರು, ಬಾಣಂತಿ, ನವ ಜಾತ ಶಿಶುಗಳಿಗೆ ಬರುವ ಮಾರಕ ರೋಗಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ಈ ಯೋಜನೆ ಉಪಯುಕ್ತವಾಗಿದ್ದು, ಅಧಿಕಾರಿಗಳು ಮತ್ತು ಪೋಷಕರು ಇಬ್ಬರ ಪರಸ್ಪರ ಸಹಕಾರದಿಂದ ರೋಗಗಳನ್ನ ತಡೆಗಟ್ಟಬಹುದು, ವೈದ್ಯರ ಸಲಹೆಯಂತೆ ಮಕ್ಕಳು ಗರ್ಭಿಣಿಯರು ಲಸಿಕೆ ಪಡೆದುಕೊಳ್ಳಬೇಕೆಂದು ನಹಿಂ ಉನ್ನೀಸಾ ತಿಳಿಸಿದರು.

ಹಿರಿಯ ಆಡಳಿತ ವೈದ್ಯಧಿಕಾರಿ ವೆಂಕಟೇಶ್ ಮಾತನಾಡಿ, ಮುಂದಿನ ಮಕ್ಕಳ ಉಜ್ವಲ ಭವಿಷ್ಯಕ್ಕೆ ಲಸಿಕೆ ಬಹಳ ಉಪಯುಕ್ತ, ಹೊರ ದೇಶಗಳಿಗೆ ಹೋಗುವಂತಹ ಸಂದರ್ಭದಲ್ಲಿ ಲಸಿಕಾ ಸರ್ಟಿಫಿಕೇಟ್ ಬಹಳ ಉಪಯೋಗ ಆಗುತ್ತದೆ, ಇಂತಹ ಸರ್ಟಿಫಿಕೇಟ್ ಪಡೆಯಬೇಕೆಂದರೆ ಲಸಿಕೆಯನ್ನ ಪಡೆದುಕೊಳ್ಳಬೇಕು. 16 ರೋಗಗಳನ್ನ ತಡೆಗಟ್ಟುವ ಕಾರ್ಯಕ್ರಮವನ್ನ ರಾಜ್ಯ ಸರ್ಕಾರ ಜಾರಿಗೆ ತಂದಿದೆ, ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!