ಕೆ.ಆರ್.ಪೇಟೆ:ತಾಲೂಕಿನ ತೆಂಡೇಕೆರೆ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಜಿ. ಶ್ರೀನಿವಾಸ್, ಉಪಾಧ್ಯಕ್ಷರಾಗಿ ನಾಗರತ್ನ ಗಂಗಾಧರ್ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 17 ಸದಸ್ಯರ ಬಲವನ್ನು ಹೊಂದಿರುವ ತೆಂಡೇಕೆರೆ ಗ್ರಾಮ ಪಂಚಾಯತಿಗೆ ಮುಂದುವರೆದ ಅವಧಿಗೆ ಸರ್ಕಾರ ಮೀಸಲಾತಿ ಪ್ರಕಟಿಸಿದ್ದ ಹಿನ್ನೆಲೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ಇಂದು ನಿಗದಿಯಾಗಿತ್ತು.
ಅಧ್ಯಕ್ಷ ಸ್ಥಾನ ಬಯಸಿ ಆಯ್ಕೆ ಬಯಸಿ ಜಿ ಶ್ರೀನಿವಾಸ್ ಮತ್ತು ಉಪಾಧ್ಯಕ್ಷರ ಸ್ಥಾನ ಬಯಸಿ ನಾಗರತ್ನ ನಾಮಪತ್ರ ಸಲ್ಲಿಸಿದ್ದರು. ಎರಡು ಸ್ಥಾನಗಳಿಗೂ ಇವರಿಬ್ಬರನ್ನೂ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ದಿವಾಕರ್ ಅವಿರೋಧ ಆಯ್ಕೆ ಪ್ರಕಟಿಸಿದರು. ಸಹ ಚುನಾವಣಾಧಿಕಾರಿಯಾಗಿ ಗ್ರಾಮ ಪಂಚಾಯಿತಿ ಪಿಡಿಓ ಜಯಕುಮಾರ್, ತಾ.ಪಂ.ವ್ಯವಸ್ಥಾಪಕ ಅನಿಲ್ ಬಾಬು ಕಾರ್ಯನಿರ್ವಹಿಸಿದರು.
ಈ ವೇಳೆ ಜೆಡಿಎಸ್ ಮುಖಂಡ ಕಾಂತರಾಜು ಮಾತನಾಡಿ, ಶಾಸಕರಾದ ಹೆಚ್.ಟಿ ಮಂಜಣ್ಣ ಅವರ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗಿರುವ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಪಕ್ಷಬೇಧ ಮರೆತು ಪಂಚಾಯತಿಗೆ ಬರುವ ಅನುದಾನ ಬಳಕೆ ಮಾಡಿಕೊಂಡು ಪಂಚಾಯತಿಯನ್ನು ಮಾದರಿಯನ್ನಾಗಿ ಮಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರಸನ್ನ, ಮಲ್ಕೋನಹಳ್ಳಿ ಗಂಗಾಧರ್, ಗ್ರಾ.ಪಂ.ಸದಸ್ಯರಾದ ಗಂಗಮ್ಮ, ಶಿವಲಿಂಗ ಸೌಭಾಗ್ಯ, ಎ.ಎಂ ರಾಜು, ಸ್ವಾಮಿಗೌಡ, ಕೆ.ಜೆ ಹೇಮಕುಮಾರ್, ಸಿ.ಸಿ ಶಿಲ್ಪಾ, ಜಯಮ್ಮ, ರವಿಕುಮಾರ್, ಜ್ಯೋತಿ, ಎಂ.ಆರ್ ರಂಗರಾಜು, ಸವಿತ ಇಂದ್ರೇಶ್, ಸವಿತ ಗೋವಿಂದಶೆಟ್ಟಿ,ಹೆಚ್. ಎಂ ಕಾಂತರಾಜು,ಎಂ ಬಿ.ರೋಹಿಣಿ ಸೇರಿದಂತೆ ಉಪಸ್ಥಿತರಿದ್ದು ಅಭಿನಂದಿಸಿದರು.




